ಕಟೀಲು: ಮುಂಬಯಿ ತಂಡ ಪಾದಯಾತ್ರೆ

ಕಿನ್ನಿಗೋಳಿ: ಕಟೀಲು ದೇವಿ ಹಾಗೂ ಹಿಂದೂ ದೇವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಹಾಗೂ ವಿಕೃತಿಯಾಗಿ ಚಿತ್ರಿಸಿರುವುದನ್ನು ಖಂಡಿಸಿ ಮಂಗಳವಾರ ಮುಂಬಾಯಿಯ 66 ಮಂದಿಯ ತಂಡ, ಕನ್ಯಾನ ಕೊಂಡೆವೂರು ನಿತ್ಯಾನಂದ ಸೇವಾಶ್ರಮ, ಬೊಲ್ನಾಡು ಭಗವತೀ ಕ್ಷೇತ್ರ, ವಿಷ್ಣುಮೂರ್ತಿ ಕ್ಷೇತ್ರ ವಯಾನಾಡು ಕನ್ಯಾನ ಹಾಗೂ ಅಲ್ಲಿನ ವಿವಿಧ ಸಮಿತಿಗಳ ಸುಮಾರು 500 ಮಂದಿಯ ತಂಡ ಎಕ್ಕಾರಿನಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಯ ಸನ್ನಿಧಿಗೆ ಪಾದಯಾತ್ರೆಯಲ್ಲಿ ಬಂದು ದುರ್ಗೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ನಂತರ ಸುದ್ದಿ ಮಾದ್ಯಮದವರೊಂದಿಗೆ ಮಾತನಾಡಿದ ಮುಂಬಯಿ ಭಕ್ತವೃಂದ ಸಮಿತಿಯ ಅಧ್ಯಕ್ಷ ಕೃಷ್ಣ ಉಚ್ಚಿಲ್ ಮಾತನಾಡಿ ಕಟೀಲು ದುರ್ಗೆಯು ಎಲ್ಲರಿಗೂ ತಾಯಿಗೆ ಸಮಾನ ಈ ರೀತಿಯ ದೇವಿಯ ಅವಹೇಳನ ಮಾಡಿದ್ದು ಸಮಸ್ತ ಮುಂಬಯಿ ಭಕ್ತರಿಗೆ ನೋವುಂಟಾಗಿದೆ. ಮುಂದಿನ ಒಂದು ತಿಂಗಳ ಒಳಗೆ ತಪ್ಪಿತಸ್ಥರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಸಾವಿರ ಸಂಖ್ಯೆಯಲ್ಲಿ ದುರ್ಗೆಯ ಭಕ್ತರು ಮುಂಬಯಿಂದ ಬಂದು ಮಂಗಳೂರು ಪೋಲೀಸ್ ಕಮಿಷನರ್ ಕಚೇರಿಯ ಮುಂದೆ ಅನ್ನ ಸತ್ಯಾಗ್ರಹ ಮಾಡುತ್ತೇವೆ. ಕೇಂದ್ರ ಮತ್ತು ರಾಜ್ಯ ಸರಕಾರ ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಬೇಕು ಎಂದರು
ಈ ಸಂದರ್ಭ ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ, ವೆಂಕರಣಮಣ ಆಸ್ರಣ್ಣ , ಆರ್ಚಕರಾದ ಅನಂತ ಪದ್ಮನಾಭ ಆಸ್ರಣ್ಣ, ವಯಾನಾಡು ಶ್ರೀ ವಿಷ್ಣು ಮೂರ್ತಿ ಕ್ಷೇತ್ರದ ಗಣೇಶ್ ಬಂಗೇರ, ಸಮಿತಿಯ ದಿನೇಶ ಕುಂಪಲ, ಪ್ರಮೋದ್ ಉಚ್ಚಿಲ್, ರಾಜೇಶ್ ಕರವೀರ, ಮುಂಬಯಿಯ ಜಯಪ್ರಕಾಶ್ ಉಚ್ಚಿಲ್, ರವಿ ಭಕ್ತೇರಿ, ಯಶೋದಾ ಬಟ್ಟಪಾಡಿ, ರತ್ನಾಕರ ಬಟ್ಟಪಾಡಿ, ಧನ್ಯಶ್ರೀ, ಕುಮುದಾ ಮತ್ತಿತರರು ಉಪಸ್ಥಿತರಿದ್ದರು.

Kinnigoli13091605

Kinnigoli13091606

Comments

comments

Comments are closed.

Read previous post:
Kinnigoli-13091601
ಸನಾತನ ಧರ್ಮದ ಆಚಾರ ವಿಚಾರ

ಕಿನ್ನಿಗೋಳಿ: ಯಾಂತ್ರಿಕ ಯುಗದಲ್ಲಿ ಭಾರತೀಯ ಸಂಸ್ಕ್ರತಿ ಸಂಸ್ಕಾರ ಆಚಾರ ವಿಚಾರಗಳಿಂದ ವಿದೇಶಿ ಸಂಸ್ಕೃತಿಯ ಕಡೆಗೆ ಮಾರುಹೋಗುತ್ತಿರುವುದು ಖೇದಕರ ಸಂಗತಿ. ಯುವ ಜನಾಂಗಕ್ಕೆ ಸನಾತನ ಧರ್ಮದ ಆಚಾರ ವಿಚಾರಗಳನ್ನು ತಿಳಿ...

Close