ಧರ್ಮದ ವಿಚಾರ ತಿಳಿ ಹೇಳುವ ಕಾರ್ಯ

ಕಿನ್ನಿಗೋಳಿ : ಯಾಂತ್ರಿಕ ಯುಗದಲ್ಲಿ ಭಾರತೀಯ ಸಂಸ್ಕ್ರತಿ ಸಂಸ್ಕಾರ ಆಚಾರ ವಿಚಾರಗಳಿಂದ ವಿದೇಶಿ ಸಂಸ್ಕೃತಿಯ ಕಡೆಗೆ ಮಾರುಹೋಗುತ್ತಿರುವುದು ಖೇದಕರ ಸಂಗತಿ. ಯುವ ಜನಾಂಗಕ್ಕೆ ಸನಾತನ ಧರ್ಮದ ಆಚಾರ ವಿಚಾರಗಳನ್ನು ತಿಳಿ ಹೇಳುವ ಕಾರ್ಯ ಅಗತ್ಯ ಆಗಬೇಕಾಗಿದೆ. ಎಂದು ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಬುಧವಾರ ಬಳಕುಂಜೆ 25 ನೇ ವರ್ಷದ ಸಾರ್ವಜನಿಕಗಣೇಶೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಬಳಕುಂಜೆ ಸಂತ ಪೌಲರ ಇಗರ್ಜಿ ಧಮಗುರು ಫಾ. ಮೈಕಲ್ ಡಿಸಿಲ್ವ, ಕರ್ನಿರೆ ಜುಮ್ಮಾ ಮಸೀದಿಯ ಖತೀಬ ಹಾಜಿ. ಪಿ. ಪಿ. ಅಹಮ್ಮದ್ ಸಖಾಫಿ ಕಾಶಿಪಟ್ನ, ಮುಂಬಯಿ ಅಂಬಿಕಾ ದೇವಳದ ಪ್ರಧಾನ ಅರ್ಚಕ ವೇ. ಮೂ. ಪಿ. ಅನಂತ ಭಟ್ ದೇಂದಡ್ಕ ಶುಭಾಶಂಸನೆಗೈದರು. ಧಾರ್ಮಿಕ ಚಿಂತಕ ವೆ. ಮೂ. ಕೊಲಕಾಡಿ ವಾದಿರಾಜ ಉಪಾಧ್ಯಾಯ ಧಾರ್ಮಿಕ ಉಪನ್ಯಾಸ ನೀಡಿದರು.
ಮುಂಬಯಿ ಉದ್ಯಮಿ ಭಗವಾನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ವಿಠೋಬ ರುಖುಮ್ಮಾಯಿ ಭಜನಾ ಮಂದಿರದ ಪ್ರಧಾನ ಅರ್ಚಕ ವೆ. ಮೂ. ಸುಬ್ರಹ್ಮಣ್ಯ ಭಟ್, ನಾರಾಯಣ ಮಾಣೈ ಬಳಕುಂಜೆ ಗುತ್ತು, ಮುಂಬಯಿ ಉದ್ಯಮಿ ವಿರಾರ್ ಶಂಕರ ಶೆಟ್ಟಿ ಚೆನ್ನಯಬೆನ್ನಿ , ಬೆಂಗಳೂರು ಉದ್ಯಮಿ ರಾಮ್‌ಪ್ರಸಾದ್ ಎಚ್. ಎ, ಬಳ್ಕುಂಜೆ ಗ್ರಾ. ಪಂ. ಅಧ್ಯಕ್ಷ ದಿನೇಶ್ ಪುತ್ರನ್, ಸಮಿತಿ ಅಧ್ಯಕ್ಷ ವಿದ್ಯಾರಣ್ಯ ರಾವ್ ಉಪಸ್ಥಿತರಿದ್ದರು. ದಿನಕರ ಶೆಟ್ಟಿ ಸ್ವಾಗತಿಸಿದರು. ನಾಗಭೂಷಣ ಭಟ್ ಕಾರ್ಯಕ್ರಮ ನಿರೂಪಿಸಿದರು.

Kinnigoli-13091601

Comments

comments

Comments are closed.

Read previous post:
Kinnigoli13091607
ಏಳಿಂಜೆ ವನಮಹೋತ್ಸವ

ಕಿನ್ನಿಗೋಳಿ: ಇತ್ತೀಚೆಗೆ ಕಿನ್ನಿಗೋಳಿ ಲಯನ್ಸ್-ಲಯೆನೆಸ್ ಕ್ಲಬ್, ಏಳಿಂಜೆ ಶ್ರೀ ದೇವಿ ಮಹಿಳಾ ಮಂಡಲ ಏಳಿಂಜೆ ನವ ಚೇತನ ಯವಕ ಮಂಡಲ ಹಾಗೂ ಏಳಿಂಜೆ ಲಿಟ್ಲ್ ಫ್ಲವರ್ ಪ್ರಾಥಮಿಕ ಶಾಲೆಯ...

Close