ಸಂಘಟನಾ ಶಕ್ತಿ ಬೆಳೆಸಿದಾಗ ಎಲ್ಲಾ ಕಾರ್ಯಗಳು ಸುಲಲಿತ

ಕಿನ್ನಿಗೋಳಿ: ಮಾರುಕಟ್ಟೆಯ ಪ್ರಬಲ ಪೈಪೋಟಿಯಲ್ಲಿ ಟೈಲರ್ ವೃತ್ತಿ ಕಷ್ಟ ಸಾಧ್ಯವಾಗುತ್ತಿದೆ. ಸಂಘಟನಾ ಶಕ್ತಿ ಬೆಳೆಸಿದಾಗ ಎಲ್ಲಾ ಕಾರ್ಯಗಳು ಸುಲಲಿತವಾಗಿ ನಿಭಾಯಿಸಬಹುದು ಎಂದು ಟೈಲರ‍್ಸ್ ಎಸೋಸಿಯೇಶನ್ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಉದಯಕುಮಾರ್ ಕೋಡಿಕಲ್ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಭಾನುವಾರ ನಡೆದ ಕಿನ್ನಿಗೋಳಿ ವಲಯ ಕರ್ನಾಟಕ ಟ್ ಟೈಲರ‍್ಸ್ ಅಸೋಸಿಯೇಶನ್ 16 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ಹಿರಿಯ ಟೈಲರ್ ಲೋರೆನ್ಸ್ ಸಿಕ್ವೇರಾ ಅವರನ್ನು ಸನ್ಮಾನಿಸಲಾಯಿತು. ಅಸೋಸಿಯೇಶನ್ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಮೃತ ಪಟ್ಟ ಟೈಲರ್ ಕುಟುಂಬಗಳಿಗೆ ಸಮಿತಿಯ ವತಿಯಿಂದ ಧನಸಹಾಯ ನೀಡಲಾಯಿತು.
ಕಿನ್ನಿಗೋಳಿ ವಲಯ ಸಮಿತಿಯ ಅಧ್ಯಕ್ಷ ಚಂದ್ರಹಾಸ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ತೋಕೂರು ತಪೋವನ ಐಟಿಐ ಪ್ರಿನ್ಸಿಪಾಲ್ ವೈ. ಎನ್. ಸಾಲ್ಯಾನ್ , ರಾಜ್ಯ ಸಮಿತಿಯ ಕೋಶಾಧಿಕಾರಿ ರಘುನಾಥ್, ಕಿನ್ನಿಗೊಳಿ ವಲಯ ಸಮಿತಿ ಗೌರವಾಧ್ಯಕ್ಷ ಶಂಕರ್ . ಬಿ. ಕೋಟ್ಯಾನ್, ಮೂಲ್ಕಿ ಮೂಡಬಿದಿರೆ ಕ್ಷೇತ್ರ ಸಮಿತಿಯಭಾಸ್ಕರ ಶೆಟ್ಟಿಗಾರ್ ಉಪಸ್ಥಿತರಿದ್ದರು.
ರಾಜಾರಾಮ ಸ್ವಾಗತಿಸಿದರು. ಸರಿತಾ ವರದಿ ವಾಚಿಸಿದರು. ಮೋಹನ್ ಎಸ್. ಕೋಡಿ ಕಾರ್ಯಕ್ರಮ ನಿರೂಪಿಸಿದರು.

Kinnigoli-13091602

Comments

comments

Comments are closed.

Read previous post:
Kinnigoli-13091601
ಧರ್ಮದ ವಿಚಾರ ತಿಳಿ ಹೇಳುವ ಕಾರ್ಯ

ಕಿನ್ನಿಗೋಳಿ : ಯಾಂತ್ರಿಕ ಯುಗದಲ್ಲಿ ಭಾರತೀಯ ಸಂಸ್ಕ್ರತಿ ಸಂಸ್ಕಾರ ಆಚಾರ ವಿಚಾರಗಳಿಂದ ವಿದೇಶಿ ಸಂಸ್ಕೃತಿಯ ಕಡೆಗೆ ಮಾರುಹೋಗುತ್ತಿರುವುದು ಖೇದಕರ ಸಂಗತಿ. ಯುವ ಜನಾಂಗಕ್ಕೆ ಸನಾತನ ಧರ್ಮದ ಆಚಾರ ವಿಚಾರಗಳನ್ನು...

Close