ರಿಕ್ಷಾಚಾಲಕರು ಗ್ರಾಮದ ರಾಯಭಾರಿಗಳು

ಕಿನ್ನಿಗೋಳಿ: ರಿಕ್ಷಾಚಾಲಕರು ಗ್ರಾಮದ ರಾಯಭಾರಿಗಳಿದ್ದಂತೆ ಸಂಘಟಶಾ ಶಕ್ತಿಯ ಮೂಲಕ ಅಸಹಾಯಸ್ಥರಿಗೆ ಸಹಾಯ ಹಸ್ತ ನೀಡಿ ಸಮಾಜದಲ್ಲಿ ಮಾದರಿಯೆನಿಸಬೇಕು ಎಂದು ಪಕ್ಷಿಕೆರೆ ಕಿನ್ನಿಗೋಳಿ ಸಾಗರಿಕಾ ಸಂಸ್ಥೆಯ ಧನಂಜಯ ಶೆಟ್ಟಿಗಾರ್ ಹೇಳಿದರು.
ಇತ್ತಿಚೆಗೆ ನಡೆದ ಪಕ್ಷಿಕೆರೆ ರಿಕ್ಷಾ ಚಾಲಕರ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಅಕಾಲಿಕವಾಗಿ ನಿಧನ ಹೊಂದಿದ ರಿಕ್ಷಾ ಚಾಲಕ ದಿ. ಸದಾನಂದ ಸುವರ್ಣರ ಕುಟುಂಬಕ್ಕೆ 2ಲಕ್ಷ ರೂ ಆರ್ಥಿಕ ನೆರವು ಹಾಗೂ ಆರ್ಥಿಕವಾಗಿ ಹಿಂದುಳಿದ ಹಿಂದು, ಮುಸ್ಲಿಂ, ಕೈಸ್ತಧರ್ಮದ ಕುಟುಂಬಗಳಿಗೆ ಧನ ಸಹಾಯ ಮಾಡಲಾಯಿತು.
ಸಾಧಕರಾದ ಪಕ್ಷಿಕೆರೆ ಚರ್ಚ್ ಫಾ. ಆಂಡ್ರ್ಯೂ ಲಿಯೋ ಡಿಸೋಜ, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹಾಗೂ ಸಮಾಜ ಸೇವಕಿ ಮಾಜಿ ಜಿ. ಪಂ. ಸದಸ್ಯೆ ಶೈಲಾ ಸಿಕ್ವೇರಾ ಅವರನ್ನು ಸನ್ಮಾನಿಸಲಾಯಿತು.
ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಪಕ್ಷಿಕರೆ ಮಸೀದಿಯ ಹಾಜಿ ಅಬ್ದುಲ್ ಕಾದರ್ ಮದನಿ, ವೆ. ಮೂ. ಪಂಜ ವಾಸುದೇವ ಭಟ್, ತಾ. ಪಂ. ಸದಸ್ಯೆರಾದ ವಜ್ರಾಕ್ಷಿ ಶೆಟ್ಟಿ , ಶುಭಲತಾ ಶೆಟ್ಟಿ, ಕೆಮ್ರಾಲ್ ಗ್ರಾ. ಪಂ. ಅದ್ಯಕ್ಷ ನಾಗೇಶ ಎಂ. ಅಂಚನ್, ಮೂಲ್ಕಿ ಹೋಬಳಿ ರಿಕ್ಷಾ ಚಾಲಕರ ಯೂನಿಯನ್ ಅಧ್ಯಕ್ಷ ಅಶೋಕ ಚಿತ್ರಾಪು ಮತ್ತಿತರರು ಉಪಸ್ಥಿತರಿದ್ದರು.
ರಾಘವೇಂದ್ರ ಶೆಟ್ಟಿ ಸ್ವಾಗತಿಸಿದರು. ಮಾಧವ ಕೆ. ಎಲ್ ವಂದಿಸಿದರು. ಅರ್ಪಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-15091603

Comments

comments

Comments are closed.

Read previous post:
Kinnigoli-15091602
ಅತ್ತೂರು ಮಾಗಣೆ ಭಕ್ತರ ವಿಶೇಷ ಪ್ರಾರ್ಥನೆ

ಕಿನ್ನಿಗೊಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಗೆ ಅವಹೇಳನ ಹಿನ್ನೆಲೆಯಲ್ಲಿ ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಅಖಿಲಾಂಡೇಶ್ವರೀ ಸನ್ನಿಧಿಯಲ್ಲಿ ಅತ್ತೂರು ಮಾಗಣೆ ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Close