ಕಿನ್ನಿಗೋಳಿ ರೋಟರಿ ಕ್ಲಬ್ ಶಿಕ್ಷಕರ ದಿನಾಚರಣೆ

ಕಿನ್ನಿಗೋಳಿ ರೋಟರಿ ಕ್ಲಬ್ ಶಿಕ್ಷಕರ ದಿನಾಚರಣೆ
Kinnigoli-15101602
ಕಿನ್ನಿಗೋಳಿ: ಮಕ್ಕಳಿಗೆ ಪ್ರಪಂಚ ಜ್ಞಾನ ಹಾಗೂ ಬೌದ್ದಿಕವಾಗಿ ಶಿಕ್ಷಣದ ಎಲ್ಲಾ ಆಯಾಮಗಳ ಪರಿಕಲ್ಪನೆಯನ್ನು ಮನದಟ್ಟು ಮಾಡುವ ನಮ್ಮ ಶಿಕ್ಷಕರು ನಿಜವಾಗಿಯೂ ನಮ್ಮ ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುತ್ತಿದ್ದಾರೆ. ಎಂದು ರೋಟರಿ ಜಿಲ್ಲೆ 3181 ರ ಜಿಲ್ಲಾ ಶೇಖರ್ ಶೆಟ್ಟಿ ಹೇಳಿದರು.
ಕಿನ್ನಿಗೋಳಿ ರೋಟರಿ ಕ್ಲಬ್ ಆಶ್ರಯದಲ್ಲಿ ಕಿನ್ನಿಗೋಳಿ ರೋಟರಿ ರಜತ ಭವನದಲ್ಲಿ ಇತ್ತೀಚೆಗೆ ನಡೆದ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಕನಾರ್ಟಕ ರಾಜ್ಯದ ಅತ್ತುತ್ತಮ ಪ್ರಿನ್ಸಿಪಾಲ್ ಪ್ರಶಸ್ತಿ ವಿಜೇತ ಕಟೀಲು ದೇವಳ ಪದವಿಪೂರ್ವ ಕಾಲೇಜು ಪ್ರಿನ್ಸಿಪಾಲ್ ಪ್ರೋ. ಜಯರಾಮ ಪೂಂಜಾ, ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಜಿನರಾಜ್ ಸಾಲ್ಯಾನ್, ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ನಯನಾ, ಏಳಿಂಜೆ ಅಂಗನವಾಡಿ ಶಾಲಾ ಶಿಕ್ಷಕಿ ಸವಿತಾ ಶೆಣೈ ಅವರನ್ನು ಸನ್ಮಾನಿಸಲಾಯಿತು
ಈ ಸಂದರ್ಭ ಉದ್ಯಮಿ ರೋಕಿ ಪಿಂಟೊ, ಕಿನ್ನಿಗೋಳಿ ರೋಟರಿ ಅಧ್ಯಕ್ಷ ರಮಾನಂದಪೂಜಾರಿ, ನಿಕಟಪೂರ್ವ ಅಧ್ಯಕ್ಷ ಎಂ. ಬಾಲಕೃಷ್ಣ ಶೆಟ್ಟಿ, ನಿಯೋಜಿತ ಅಧ್ಯಕ್ಷೆ ಸೆವರಿನ್ ಲೋಬೊ, ಕಾರ್ಯದರ್ಶಿ ದೇವಿದಾಸ್ ಶೆಟ್ಟಿ, ಕಿನ್ನಿಗೋಳಿ ರೋಟರಿ ಕ್ಲಬ್ ಮೆಂಬರ್‌ಶಿಪ್ ಡೆವಲಪ್‌ಮೆಂಟ್ ಚೆಯರ್‌ಮನ್ ತ್ಯಾಗರಾಜ ಆಚಾರ್ಯ, ಹೆರಿಕ್ ಪಾಯಸ್ ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-1501601
ಕಟೀಲು ರಾಮಾಯಣ ಕಥಾ ಪ್ರಪಂಚ

ಕಿನ್ನಿಗೋಳಿ: ರಾಮನಿಗೆ ವಿದ್ಯೆ ಕಲಿಸಿದವರು ವಸಿಷ್ಠರು, ಬೆಳೆಸಿದವರು ವಿಶ್ವಾಮಿತ್ರರು. ರಾಮ ಜನಸಾಮಾನ್ಯರೊಂದಿಗೆ ಬೆಳೆದ ಅಸಾಮಾನ್ಯ ಎಂದು ಪ್ರಸಂಗಕರ್ತ, ಸಾಹಿತಿ ಶ್ರೀಧರ ಡಿ.ಎಸ್. ಹೇಳಿದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ...

Close