ಕಿನ್ನಿಗೋಳಿ ಲಯನ್ಸ್ ಕ್ಲಬ್ ಶಿಕ್ಷಕರ ದಿನಾಚರಣೆ

ಕಿನ್ನಿಗೋಳಿ: ವಿದ್ಯಾರ್ಥಿಗಳನ್ನು ಸರ್ವೋತ್ತಮ ಬೆಳವಣಿಗೆಗೆ ಅವರನ್ನು ತಿದ್ದಿ ತೀಡಿ ಸಮಾಜದ ಮುಂಚೂಣಿಗೆ ತರಬೇಕಾದದು ಶಿಕ್ಷಕರ ಆದ್ಯ ಕರ್ತವ್ಯ. ಅಭಿವೃದ್ಧಿ ಪರ ಸಮಾಜ ನಿರ್ಮಾಣದ ಹೊಣೆ ಶಿಕ್ಷಕರ ಮೇಲಿದೆ ಎಂದು ಐಕಳ ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ. ಜೋನ್ ಕ್ಲಾರನ್ಸ್ ಮಿರಾಂದ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿ ಲಯನ್ಸ್ ಲಯನೆಸ್ ಸಂಸ್ಥೆಗಳ ಆಶ್ರಯದಲ್ಲಿ ಇತ್ತೀಚೆಗೆ ಶಿಕ್ಷಕರ ದಿನಾಚರಣೆಯ ಸಂದರ್ಭ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.
ಹಿರಿಯ ಶಿಕ್ಷಕರಾದ ವಸಂತ ದೇವಾಡಿಗ, ಲಿಗೋರಿ ಡಿಸೋಜ, ಎಲಿಜಾ ಸಿಕ್ವೇರಾ, ಸದಾನಂದ ಪೂಜಾರಿ, ವಿನ್ನಿ ಡಿಸೋಜ, ಬಾಲಚಂದ್ರ ಸನಿಲ್, ಭಗಿನಿ ಕ್ರಿಸ್ತಿನ್ ಅವರನ್ನು ಗೌರವಿಸಲಾಯಿತು.
ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಕಿನ್ನಿಗೋಳಿ ಲಯನೆಸ್ ಅಧ್ಯಕ್ಷೆ ವತ್ಸಲಾ ವೈ.ರಾವ್, ಕಾಯದರ್ಶಿ ಸವಿತಾ ಪಿ ಶೆಟ್ಟಿ, ಕಿನ್ನಿಗೋಳಿ ಲಯನ್ಸ್ ನಿಕಟಪೂರ್ವ ಅಧ್ಯಕ್ಷ ಸುಧಾಕರ ಶೆಟ್ಟಿ, ಭುಜಂಗ ಭಂಜನ್, ಲೀಲಾ ಬಂಜನ್ ಮತ್ತಿತರರು ಉಪಸ್ಥಿತರಿದ್ದರು. ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷ ವೈ. ಯೋಗೀಶ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-15091601

Comments

comments

Comments are closed.

Read previous post:
Kinnigoli-15101604
ಮೇಘಾ : ಜಿಲ್ಲಾ ಮಟ್ಟದಲ್ಲಿ ಪ್ರಥಮ

ಕಿನ್ನಿಗೋಳಿ: ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಮೇಘಾ, ವಗ್ಗದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ....

Close