ಐಕಳ ಗುಡ್ಡೆಯಲ್ಲಿ ಅಸ್ಥಿಪಂಜರ ಪತ್ತೆ

ಕಿನ್ನಿಗೋಳಿ : ಮುಲ್ಕಿ ಠಾಣಾ ವ್ಯಾಪ್ತಿಯ ಐಕಳ ಗುಡ್ದ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಗಂಡಸಿನ ಅಸ್ಥಿ ಪಂಜರ ಪತ್ತೆಯಾದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಭಾನುವಾರ ಬೆಳಿಗ್ಗೆ ಸ್ಥಳೀಯರಾದ ರಮೇಶ್ ಹಾಗೂ ಗಿರೀಶ್ ಜಾನುವಾರುಗಳ ಮೇವಿಗಾಗಿ ಸೊಪ್ಪು ತರಲು ಐಕಳ ಗುಡ್ಡ ಪ್ರದೇಶಕ್ಕೆ ಹೋದಾಗ ಕೊಳೆತ ವಾಸನೆ ಬರುತ್ತಿದ್ದು ಅಲ್ಲಿ ಜಾಲಾಡಿದಾಗ ಚಿಕ್ಕ ಗೇರು ಮರದ ಕೊಂಬೆಯಲ್ಲಿ ಕುಣಿಕೆಯಿಂದ ಕೂಡಿದ ವಸ್ತ್ರವೊಂದು ನೇತಾಡುತ್ತಿದ್ದನ್ನು ಗಮನಿಸಿ ಹತ್ತಿರ ಹೋಗಿ ನೋಡಿದಾಗ ಮರದ ಬುಡದಲ್ಲಿ ಇಡೀ ಅಸ್ಥಿಪಂಜರ, ದೇಹದ ಎಲುಬುಗಳು ನೆಲದಲ್ಲಿ ಕಂಡು ಬಂದಿವೆ.

ಸುಮಾರು ಒಂದು ತಿಂಗಳ ಹಿಂದೆಯೇ ಸತ್ತಿರುವ ಸಾಧ್ಯತೆಗಳಿದ್ದು ದೃಡಕಾಯದ ಸುಮಾರು ಐದೂವರೆಯಿಂದ ಆರು ಅಡಿ ಎತ್ತರದ ಗಂಡಸಿನ ದೇಹ ಸಂಪೂರ್ಣ ಕೊಳೆತು ಹೋದ ಸ್ಥಿತಿಯಲ್ಲಿನ ಅಸ್ಥಿ ಪಂಜರವಿರಬಹುದು ಎಂದು ಅಂದಾಜಿಸಲಾಗಿದೆ. ಅಸ್ಥಿ ಪಂಜರದಲ್ಲಿ ಗಂಡಸಿನ ಬಟ್ಟೆ ಬರೆ ಇದ್ದು ನೆಲದಿಂದ ಸುಮಾರು ೨ ಅಡಿ ಎತ್ತರದಲ್ಲಿ ಕುಣಿಕೆ ಇರುವುದರಿಂದ ಘಟನೆ ಸಂಶಯಾಸ್ಪದವಾಗಿದೆ.

ಮುಲ್ಕಿ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Kinnigoli-09101601 Kinnigoli-09101602

 

Comments

comments

Comments are closed.

Read previous post:
Kateel-09101601
ಕಟೀಲು ಹಿ. ಪ್ರಾ. ಶಾಲೆ ಶಾರದಾ ಪೂಜೆ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶಾರದಾ ಪೂಜೆ ನಡೆಯಿತು. ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ದೇವಳದ ಆಡಳಿತ ಮೊಕ್ತೇಸರ ಡಾ. ರವೀಂದ್ರನಾಥ...

Close