ಅಂಚೇಕಛೇರಿ ನವೀಕೃತ ಕಟ್ಟಡ ಉದ್ಘಾಟನೆ

ಮುಲ್ಕಿ: ಹಿಂದಿನ ಕಾಲದಿಂದಲೂ ಪಟ್ಟಣ ಸಹಿತ ಗ್ರಾಮೀಣ ಪ್ರದೇಶದಲ್ಲಿ ಅಂಚೆ ಇಲಾಖೆ ಮಹತ್ತರ ಗ್ರಾಹಕರ ಆಶೋತ್ತರಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಅಭಯಚಂದ್ರ ಜೈನ್ ಹೇಳಿದರು.
ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ಮೈಲೊಟ್ಟು ಸ್ಥಳಾಂತರಗೊಂಡ ನೂತನ ಅಂಚೇಕಛೇರಿ ನವೀಕೃತ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಳೆದ 20 ವರ್ಷಗಳಿಂದ ಅಂಚೆ ಕಚೇರಿಯಲ್ಲಿ ಗ್ರಾಹಕರಾಗಿರುವ ದೇವರಾಜ ಪೂಜಾರಿ, ಜಗನ್ನಾಥ ಪೂಜಾರಿ, ಪಾಂಡುರಂಗ ಕಾಮತ್ ಮತ್ತು ರಾಜೇಶ್ ಕುಂದರ್ ಅವರನ್ನು ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಅತಿಕಾರಿಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಶಾರದಾ ವಸಂತ್ ವಹಿಸಿದ್ದರು.
ಅತಿಕಾರಿಬೆಟ್ಟು ಗ್ರಾ.ಪಂ. ಉಪಾಧ್ಯಕ್ಷ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಮುಲ್ಕಿ ಅಂಚೆಪಾಲಕ ಭವಾನಿ ಶಂಕರ ಯಂ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಎ.ಜಿ.ಎಂ ಜಿ.ಜಿ. ಕಾಮತ್, ಮುಲ್ಕಿ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ನಾರಾಯಣ ಶಣೈ, ಅತಿಕಾರಿಬೆಟ್ಟು ಅಂಚೆಪಾಲಕಿ ಸವಿತಾ ದೇವಿ, ಎನ್. ವಿಷ್ಣುದಾಸ್ ಭಟ್, ಅತಿಕಾರಿಬೆಟ್ಟು ಗ್ರಾ.ಪಂ. ಸದಸ್ಯರುಗಳಾದ ಮನೋಹರ ಕೋಟ್ಯಾನ್, ದಯಾನಂದ ಮಟ್ಟು, ಉದ್ಯಮಿ ಗಂಗಾಧರ ಶೆಟ್ಟಿ ಬರ್ಕೆತೋಟ, ರವೀಂದ್ರ ಪ್ರಭು ಮೈಲೊಟ್ಟು ಮತ್ತಿತರರು ಉಪಸ್ಥಿತರಿದ್ದರು.
ಶ್ವೇತಾ ಭಟ್ ಸ್ವಾಗತಿಸಿದರು,ನಾಗೇಶ್ ಶೆಣೈ ವಂದಿಸಿದರು. ಸತೀಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

Mulki-1110201601 Mulki-1110201602

Comments

comments

Comments are closed.

Read previous post:
Kinnigoli-11101602
ಕಟೀಲು, ವಿಜಯದಶಮಿ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಮಂಗಳವಾರ ನವರಾತ್ರಿ ಮಹೋತ್ಸದ ಅಂಗವಾಗಿ ವಿಜಯದಶಮಿಯ ವಿಶೇಷ ಆಚರಣೆ ನಡೆಯಿತು. ಬೆಳಿಗ್ಗೆ ದೇವಳದಲ್ಲಿ ಮಹಾ ಚಂಡಿಕಾ ಹವನ ನಡೆಯಿತು. ಸುಮಾರು 300ಕ್ಕೂ...

Close