ಕಟೀಲು: ಮಾಜಿ ಗೃಹ ಸಚಿವ ಆರ್. ಅಶೋಕ್ ಭೇಟಿ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಬೆಂಗಳೂರು ಶಾಸಕ ಮಾಜಿ ಗೃಹ ಸಚಿವ ಆರ್. ಅಶೋಕ್ ಗುರುವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಕಾವೇರಿ ನದಿ ನೀರಿನ ಸಮಸ್ಯೆ ಬಗ್ಗೆ ಮಾನ್ಯ ಸುಪ್ರಿಮ್ ಕೋರ್ಟ್ ಅ.18 ರಂದು ತೀರ್ಪು ನೀಡಲಿದೆ. ಟ್ರಿಬ್ಯೂನಲ್ ಸಮಿತಿ ರಚನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮದ್ಯಪ್ರವೇಶಿಸಿ ತಪ್ಪಿಸಿದ್ದಾರೆ. ಸಂಸದರಾದ ಅನಂತಕುಮಾರ್ ಹಾಗೂ ಡಿ. ವಿ. ಸದಾನಂದ ಗೌಡ ಮುತುವರ್ಜಿ ವಹಿಸಿ ಕೆಲಸವನ್ನು ಮಾಡುತ್ತಿದ್ದಾರೆ. ಆದರೂ ಆರೋಪ ನಮ್ಮ ಮೇಲೆ ಬರುತ್ತಿದೆ. ಕಾವೇರಿ ನದಿ ಹಾಗೂ ಕೆ.ಆರ್.ಎಸ್ ಅಣೆಕಟ್ಟು ಕರ್ನಾಟಕ ರಾಜ್ಯಕ್ಕೆ ಸೇರಿದ್ದರೂ ತಮಿಳುನಾಡಿಗೆ ಬೇಕಾದಷ್ಟು ನೀರು ಬಿಟ್ಟು ಆಗಿದೆ, ರಾಜ್ಯದ ಸಮಸ್ಯೆಗಳು ಹಾಗೂ ಕುಡಿಯುವ ನೀರಿನ ಬಗ್ಗೆ ರಾಜ್ಯದ ಸಿದ್ದರಾಮಯ್ಯರ ಸರಕಾರದ ವೈಪ್ಯಲ್ಯದಿಂದ ಸಮಸ್ಯೆ ಉಂಟಾಗಿದೆ. ಸರಿಯಾದ ರೀತಿಯಲ್ಲಿ ವಾದ ಮಂಡಿಸಿದ್ದಲ್ಲಿ ಇಂತಹ ಸಮಸ್ಯೆ ತಲೆದೋರುತ್ತಿರಲಿಲ್ಲ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 150 ಸ್ಥಾನ ಗೆಲ್ಲಲಿದ್ದು , ರಾಜ್ಯ ಕಾಂಗ್ರೆಸ್ ಮುಕ್ತವಾಗಲಿದೆ ಎಂದು ಹೇಳಿದರು.
ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ , ಪ್ರಧಾನ ಅರ್ಚಕರಾದ ಅನಂತ ಆಸ್ರಣ್ಣ , ವೆಂಕಟರಮಣ ಆಸ್ರಣ್ಣ , ಹರಿನಾರಾಯಣದಾಸ ಆಸ್ರಣ್ಣ , ಕುಮಾರ್ ಆಸ್ರಣ್ಣ ಸ್ವಾಗತಿಸಿದರು. ಬೆಂಗಳೂರಿನ ದಕ್ಷಿಣ ಕ್ಷೇತ್ರದ ಇ. ಕೃಷ್ಣಪ್ಪ , ಮಾಜಿ ಶಾಸಕ ರಘುಪತಿ ಭಟ್ , ಮೂಲ್ಕಿ ಮೂಡಬಿದಿರೆ ಬಿಜೆಪಿ ಮಂಡಲದ ಅಧ್ಯಕ್ಷ ಈಶ್ವರ್ ಕಟೀಲು, ಯುವಮೂರ್ಚಾದ ಅಧ್ಯಕ್ಷ ಅಭಿಲಾಷ್ ಶೆಟ್ಟಿ , ಜಿಲ್ಲಾ ಹಿಂದುಳಿದ ಮೊರ್ಚಾದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ, ಅದಿತ್ಯ ಶೆಟ್ಟಿ ಎಕ್ಕಾರು, ಸತೀಶ್ ಶೆಟ್ಟಿ ಎಕ್ಕಾರು ಮತ್ತಿತರರು ಉಪಸ್ಥಿತರಿದ್ದರು.

Kinnigoli-13101601

Comments

comments

Comments are closed.

Read previous post:
ಎನ್.ಎಸ್.ಎಸ್ ಘಟಕ ವಾರ್ಷಿಕ ಶಿಬಿರ

ಕಿನ್ನಿಗೋಳಿ: ಸುರತ್ಕಲ ಗೋವಿಂದದಾಸ್ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ ಆ. 17 ರಿಂದ 23 ರತನಕ ಪಂಜ ಸರಕಾರಿ ಶಾಲೆಯಲ್ಲಿ ನಡೆಯಲಿದೆ. ಅ....

Close