ಕಟೀಲು ಮಾಜಿ ಪ್ರದಾನಿ ಎಚ್.ಡಿ ದೇವೇ ಗೌಡ ಭೇಟಿ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಮಾಜಿ ಪ್ರದಾನಿ ಎಚ್.ಡಿ ದೇವೇ ಗೌಡ ಭೇಟಿ ನೀಡಿ ದುರ್ಗೆಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಳದ ವತಿಯಿಂದ ಮೊಕ್ತೇಸರ ವಾಸುದೇವ ಆಸ್ರಣ್ಣ ಮತ್ತು ಡಾ.ರವೀಂದ್ರನಾಥ ಪೂಂಜ ದೇವೇಗೌಡ, ಪ್ರಧಾನ ಅರ್ಚಕ ವೆಂಕಟರಮಣ ಆಸ್ರಣ್ಣ ಸ್ವಾಗತಿಸಿದರು. ದೇವಳದ ವತಿಯಿಂದ ದೇವಿಯ ಶೇಷವಸ್ತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭ ಜೆಡಿಎಸ್ ಮುಖಂಡರಾದ ಮಾಜಿ ಸಚಿವ ಅಮರನಾಥ ಶೆಟ್ಟಿ, ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಅಧ್ಯಕ್ಷ ಅಶ್ವಿನ್ ಪಿರೇರಾ, ಫಾರೂಕ್, ದ.ಕ. ಮಾಜಿ ಜಿಲ್ಲಾಧ್ಯಕ್ಷ ಎಂ.ಬಿ. ಸದಾಶಿವ, ಜಿಲ್ಲಾ ಉಪಾಧ್ಯಕ್ಷ ವಸಂತ ಪೂಜಾರಿ, ರಾಜ್ಯ ಹಿಂದುಳಿದ ವರ್ಗ ವಿಭಾಗದ ಪ್ರಧಾನ ಕಾರ್ಯದರ್ಶಿ ಸಂಜೀವ ಮಡಿವಾಳ ಮತ್ತಿತರರು ಉಪಸ್ಥಿತರಿದ್ದರು.

Kinnigoli-151002 Kinnigoli-151003 Kinnigoli-151004 Kinnigoli-151005

Comments

comments

Comments are closed.

Read previous post:
Kinnigoli-151001
ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳ ಕಲಾಪರ್ವ

ಕಿನ್ನಿಗೋಳಿ: ಗಂಡು ಕಲೆಯಾದ ಯಕ್ಷಗಾನವನ್ನು ಮಕ್ಕಳಿಗೆ ಕಲಿಸಿ ಉಳಿಸಿ ಬೆಳೆಸುವ ಕಾರ್ಯವನ್ನು ಹಿರಿಯರು ಗ್ರಾಮೀಣ ಪ್ರದೇಶದಲ್ಲದೆ ನಗರಗಳಲ್ಲಿಯೂ ಮಾಡಬೇಕಾಗಿದೆ. ದುರ್ಗಾ ಮಕ್ಕಳ ಮೇಳ ಮಕ್ಕಳಲ್ಲಿ ಯಕ್ಷಗಾನದ ಅರಿವು ಮೂಡಿಸಿ...

Close