ಅ.16 ಕಿನ್ನಿಗೋಳಿ ವಿಶ್ವ ಹಿಂದೂ ಪರಿಷತ್

photo

ಕಿನ್ನಿಗೋಳಿ: ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃ ಮಂಡಳಿ ದುರ್ಗಾವಾಹಿನಿ ಕಿನ್ನಿಗೋಳಿ ನಗರ ಹಾಗೂ ಸ್ಥಳೀಯ ಘಟಕಗಳ ಉದ್ಘಾಟನಾ ಸಮಾರಂಭ ಅ.16 ಭಾನುವಾರ ಬೆಳಿಗ್ಗೆ 10 ಗಂಟೆಗೆ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆಯಲಿದೆ ಕಟೀಲು ದೇವಳ ಪ್ರಧಾನ ಅರ್ಚಕ ವೇ.ಮೂ. ಹರಿನಾರಾಯಣದಾಸ ಆಸ್ರಣ್ಣ ಉದ್ಘಾಟಿಸಲಿದ್ದು, ಧಾರ್ಮಿಕ ಚಿಂತಕ ವೇ.ಮೂ. ಕೊಲಕಾಡಿ ವಾದಿರಾಜ ಉಪಾಧ್ಯಾಯ ಆಶೀರ್ವಚನ ಗೈಯಲಿದ್ದಾರೆ. ಎಂದು ಕಿನ್ನಿಗೋಳಿ ವಿಶ್ವ ಹಿಂದೂ ಪರಿಷತ್‌ನ ನಿಯೋಜಿತ ಅಧ್ಯಕ್ಷ ವೇದವ್ಯಾಸ ಉಡುಪ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಜರಂಗ ದಳ ಕ್ಷೇತ್ರೀಯ ಸಂಯೋಜಕ ಸೂರ್ಯನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಪ್ರಾಂತ ಸಂಯೋಜಕ ಶರಣ್ ಪಂಪ್‌ವೆಲ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪ್ರಧಾನ ಅತಿಥಿಗಳಾಗಿ ಸೀತಾರಾಮ ಶೆಟ್ಟಿ, ಸಂತೋಷ್ ಕುಮಾರ್ ಹೆಗ್ಡೆ, ವಿವೇಕಾನಂದ, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಪ್ರಮುಖರು ಭಾಗವಹಿಸಲಿದ್ದಾರೆ. ಎಂದು ಕಿನ್ನಿಗೋಳಿ ಬಜರಂಗ ದಳ ನಿಯೋಜಿತ ಸಂಚಾಲಕ ಶ್ಯಾಮ ಸುಂದರ್ ಶೆಟ್ಟಿ ಎಳತ್ತೂರು ಹೇಳಿದರು.
ಕಿನ್ನಿಗೋಳಿ ರಾಜಾಂಗಣದಿಂದ ಯುಗಪುರುಷದವರೆಗೆ ಜಯಘೋಷದ ಮೆರವಣಿಗೆ ನಡೆಯಲಿದ್ದು ಸುಮಾರು 2 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ನಾಮದೇವ್ ಕಾಮತ್, ಉಪಾಧ್ಯಕ್ಷ ಕೆ.ವಿ.ಶೆಟ್ಟಿ, ಪ್ರಕಾಶ್ ಹೆಗ್ಡೆ ಎಳತ್ತೂರು, ಕೆ.ಭುವನಾಭಿರಾಮ ಉಡುಪ, ಯಜ್ಞಾತ ಆಚಾರ್ಯ, ಭಾಸ್ಕರ ಪೂಜಾರಿ ಉಲ್ಲಂಜೆ, ಆಶೋಕ್ ಕೆ., ನಿತ್ಯಾನಂದ ರಾವ್ ಮತ್ತಿತರರು ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-13101601
ಕಟೀಲು: ಮಾಜಿ ಗೃಹ ಸಚಿವ ಆರ್. ಅಶೋಕ್ ಭೇಟಿ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಬೆಂಗಳೂರು ಶಾಸಕ ಮಾಜಿ ಗೃಹ ಸಚಿವ ಆರ್. ಅಶೋಕ್ ಗುರುವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಕಾವೇರಿ ನದಿ ನೀರಿನ...

Close