ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳ ಕಲಾಪರ್ವ

ಕಿನ್ನಿಗೋಳಿ: ಗಂಡು ಕಲೆಯಾದ ಯಕ್ಷಗಾನವನ್ನು ಮಕ್ಕಳಿಗೆ ಕಲಿಸಿ ಉಳಿಸಿ ಬೆಳೆಸುವ ಕಾರ್ಯವನ್ನು ಹಿರಿಯರು ಗ್ರಾಮೀಣ ಪ್ರದೇಶದಲ್ಲದೆ ನಗರಗಳಲ್ಲಿಯೂ ಮಾಡಬೇಕಾಗಿದೆ. ದುರ್ಗಾ ಮಕ್ಕಳ ಮೇಳ ಮಕ್ಕಳಲ್ಲಿ ಯಕ್ಷಗಾನದ ಅರಿವು ಮೂಡಿಸಿ ಸುಸಂಸ್ಕ್ರತರನ್ನಾಗಿ ಮಾಡುತ್ತಿರುವುದು ಶ್ಲಾಘನೀಯ. ಕಟೀಲು ದುರ್ಗೆ ಯಕ್ಷಗಾನ ಪ್ರಿಯೆ ದುರ್ಗೆಯ ಮಡಿಲಲ್ಲಿ ಇಂತಹ ಕಾರ್ಯಕ್ರಮ ನಿರಂತರ ನಡೆಯಬೇಕು ಎಂದು ಉದ್ಯಮಿ ಜಗದೀಪ ಡಿ. ಸುವರ್ಣ ಹೇಳಿದರು.
ಕಟೀಲು ದುರ್ಗಾಪರಮೇಶ್ವರೀ ದೇವಳದ ಸರಸ್ವತೀ ಸದನದಲ್ಲಿ ಶುಕ್ರವಾರ ನಡೆದ ದುರ್ಗಾ ಮಕ್ಕಳ ಮೇಳದ ವಾರ್ಷಿಕ ಕಲಾ ಪರ್ವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ತಾರಾನಾಥ ವರ್ಕಾಡಿ ಮಾತನಾಡಿ ಶಿಕ್ಷಣದೊಂದಿಗೆ ಮಕ್ಕಳಿಗೆ ಯಕ್ಷಗಾನ ಕಲಿಸಿದಲ್ಲಿ ವಾಕ್ಚಾತುರ್ಯ ಹೆಚ್ಚಾಗಿ ಒಳ್ಳೆಯ ವಾಗ್ಮಿಗಳಾಗುತ್ತಾರೆ. ಯಕ್ಷಗಾನದಲ್ಲಿ ಸೃಷ್ಟಿಶೀಲತೆ ಇದೆ ಎಂದರು.

ಮುಂಬಯಿ ಉದ್ಯಮಿ ರಘುವೀರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಕಟೀಲು ದೇವಳ ಪ್ರಧಾನ ಅರ್ಚಕ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ ಹಾಗೂ ತಂತ್ರಿಗಳಾದ ವೇದವ್ಯಾಸ ತಂತ್ರಿ ಆರ್ಶಿರ್ವಚನ ನೀಡಿದರು.
ಈ ಸಂದರ್ಭ ಕಟೀಲು ಮೇಳದ ಹಿರಿಯ ಚೆಂಡೆ ಮತ್ತು ಮದ್ಧಳೆಗಾರ ಪೆರುವಾಯಿ ನಾರಾಯಣ ಭಟ್ ಅವರಿಗೆ ಶ್ರೀ ದುರ್ಗಾ ಮಕ್ಕಳ ಮೇಳ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಿರಿಯ ಬಾಗವತ ಸಂಜೀವ ಶೆಟ್ಟಿ ಕೊಡೆತ್ತೂರು ಅವರಿಗೆ ಗೌರವಾರ್ಪಣೆ ಮತ್ತು ಸರ್ಪಂಗಳ ಈಶ್ವರ್ ಭಟ್, ಹರಿನಾರಾಯಣ ಬೈಪಡಿತ್ತಾಯ, ಲೀಲಾವತಿ ಬೈಪಡಿತ್ತಾಯ ಮತ್ತು ರಾಜೇಶ್ ಐ ಕಟೀಲು ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಿತು.

ಮುಂಬಯಿ ಉದ್ಯಮಿ ಐಕಳ ಗಣೇಶ್ ಶೆಟ್ಟಿ, ಸುಜನ್‌ಚಂದ್ರ ರಾವ್, ಕಟೀಲು ಆರು ಮೇಳಗಳ ಸಂಚಾಲಕ ದೇವಿಪ್ರಸಾದ್ ಶೆಟ್ಟಿ, ಮಂಗಳೂರು ಪ್ರಕಾಶ್ ಬೀಡಿ ಸಂಸ್ಥೆಯ ನಿರ್ದೇಶಕ ಆನಂದ ಪ್ರಭು, ಉದ್ಯಮಿ ಶ್ರೀಕರ ಶೆಟ್ಟಿ ಗುಬ್ಯ, ದಯಾನಂದ ಶೆಟ್ಟಿ ಖಂಡಿಗೆ ಬೀಡು, ಕಾರ್ಕಳ ಉದ್ಯಮಿ ಸುಧೀರ್ ಹೆಗ್ಡೆ, ಮಂಗಳೂರಿನ ನ್ಯಾಯವಾದಿ ಅರುಣ್ ಬಂಗೇರ, ಉದ್ಯಮಿ ಜಗದೀಶ ಶೆಟ್ಟಿ ಮಂಗಳೂರು, ರಾಧಾ ಅಮೀನ್ ತಾರಿಕಂಬ್ಳ, ಪೆರ್ಮುದೆ ಹರೀಶ್ ಶೆಟ್ಟಿ, ಶ್ರೀದುರ್ಗಾ ಮಕ್ಕಳ ಮೇಳದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಾರ್ಯದರ್ಶಿ ವಾಸುದೇವ ಶೆಣೈ, ವಾದಿರಾಜ ಕಲ್ಲೂರಾಯ ಮತ್ತಿತರರು ಇದ್ದರು.

Kinnigoli-151001

Comments

comments

Comments are closed.

Read previous post:
ಅ.16 ರಿಂದ 28 ಸಂತ ಜೂದರ ವಾರ್ಷಿಕ ಉತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ಸಂತ ಜೂದರ ಪುಣ್ಯಕ್ಷೇತ್ರದ ವಾರ್ಷಿಕ ಉತ್ಸವ ಅಕ್ಟೋಬರ್ 28ರಂದು ನಡೆಯಲಿದೆ ಎಂದು ಚರ್ಚ್‌ನ ಪ್ರಧಾನ ಧರ್ಮಗುರು ಫಾ| ಆಂಡ್ರ್ಯೂ ಲಿಯೊ ಡಿ’ಸೋಜ ತಿಳಿಸಿದ್ದಾರೆ....

Close