ಪುರಾಣದ ಅರಿವು ಯಕ್ಷಗಾನದಲ್ಲಿ ಸಾಧ್ಯ

ಕಟೀಲು : ಸನಾತನ ಧರ್ಮ, ಪುರಾಣಗಳ ಬಗ್ಗೆ ಅರಿವು ಯಕ್ಷಗಾನದ ಮೂಲಕ ಮಕ್ಕಳಲ್ಲಿ ಮೂಡಿಸಿ ಸಂಸ್ಕಾರ, ಸಂಸ್ಕೃತಿಗಳನ್ನು ಒಳಿಸಿ ಬೆಳಸಬಹುದು ಎಂದು ಬಾರ್ಕೂರು ಕಚ್ಚೂರು ಶ್ರೀ ನಾಗೇಶ್ವರ ದೇವಳದ ಮೊಕ್ತೇಸರ ಕಡಂದಲೆ ಸುರೇಶ್ ಭಂಡಾರಿ ಹೇಳಿದರು.
ಶನಿವಾರ ಕಟೀಲು ಸರಸ್ವತೀ ಸದನದ ಸಭಾಭವನದಲ್ಲಿ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಅಷ್ಟಮ ವಾರ್ಷಿಕ ಕಲಾಪರ್ವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸಿದ್ಧ ಯಕ್ಷಗಾನ ಕಲಾವಿದ ಪುತ್ತೂರು ಶ್ರೀಧರ ಭಂಡಾರಿ ಅವರಿಗೆ ಕಟೀಲು ಕೃಷ್ಣ ಅಸ್ರಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯಕ್ಷಗಾನ ಕಲಾವಿದ ಪ್ರಭಾಕರ ರಾವ್ ಕೊಳಂಬೆ ಅವರಿಗೆ ಗೌರವಾರ್ಪಣೆ ಹಾಗೂ ದುರ್ಗಾ ಮೇಳದ ಪ್ರತಿಭಾಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ , ಕಮಲಾದೇವಿ ಪ್ರಸಾದ್ ಆಸ್ರಣ್ಣ, ಅನಂತ ಆಸ್ರಣ್ಣ, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಶಾಸಕ ಯೋಗೀಶ್ ಭಟ್, ಉದ್ಯಮಿ ಯಾದವ ಕೋಟ್ಯಾನ್, ರಾಮಣ್ಣ ಶೆಟ್ಟಿ ಕುಂಬಿರ್ಲ್ ಗುತ್ತು, ಉದ್ಯಮಿ ಜಯರಾಮ ಶೆಟ್ಟಿ , ವಿಜಯಾ ಬ್ಯಾಂಕ್ ನಿವೃತ್ತ ಅಧಿಕಾರಿ ಮಹಾಬಲ ಶೆಟ್ಟಿ ಐಕಳ, ಡಾ. ನರೇಶ್ ರಾವ್ ಬಜಪೆ, ಶ್ರೀಧರ ಶೆಟ್ಟಿ ಮಾಣಿಲ, ದ.ಕ. ಜಿ. ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾ. ಪಂ. ಸದಸ್ಯ ಸುಕುಮಾರ್ ಸನಿಲ್, ಕಟೀಲು ಗ್ರಾ. ಪಂ. ಅಧ್ಯಕ್ಷೆ ಗೀತಾ ಪೂಜಾರಿ, ಉಪಾಧ್ಯಕ್ಷ ಕಿರಣ್‌ಕುಮಾರ್ ಶೆಟ್ಟಿ , ದ. ಕ. ಜಿಲ್ಲಾ ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ, ಸುಬ್ರಹ್ಮಣ್ಯ ಆಚಾರ್ ಶಿಬರೂರು, ರಾಜೀವ ಕೈಕಂಬ ಉಪಸ್ಥಿತರಿದ್ದರು.
ಶ್ರೀ ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು. ವಾದಿರಾಜ ಕಲ್ಲೂರಾಯ, ದೇವಿಪ್ರಸಾದ್ ಸನ್ಮಾನ ಪತ್ರ ವಾಚಿಸಿದರು. ಬಳಿಕ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ವಿದ್ಯಾರ್ಥಿಗಳಿಂದ ‘ವಾಲಿವಧೆ’ ಯಕ್ಷಗಾನ ನಡೆಯಿತು.

Kateel-16101603 Kateel-16101604

Comments

comments

Comments are closed.

Read previous post:
Kinnigoli-151003
ಕಟೀಲು ಮಾಜಿ ಪ್ರದಾನಿ ಎಚ್.ಡಿ ದೇವೇ ಗೌಡ ಭೇಟಿ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಮಾಜಿ ಪ್ರದಾನಿ ಎಚ್.ಡಿ ದೇವೇ ಗೌಡ ಭೇಟಿ ನೀಡಿ ದುರ್ಗೆಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಳದ ವತಿಯಿಂದ ಮೊಕ್ತೇಸರ ವಾಸುದೇವ ಆಸ್ರಣ್ಣ...

Close