ಪಕ್ಷಿಕೆರೆ ರಕ್ತದಾನ ಶಿಬಿರ

ಕಿನ್ನಿಗೋಳಿ :ಯುವ ಜನರು ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವವನ್ನು ರಕ್ಷಿಸುವ ಕಾರ್ಯದಲ್ಲಿ ಭಾಗಿಯಾಗಬೇಕು ಇದು ನಿಜವಾದ ಕಳಕಳಿಯ ಸಮಾಜ ಸೇವೆ ಎಂದು ಎಂದು ಪಕ್ಷಿಕೆರೆ ಚರ್ಚ್ ಧರ್ಮಗುರು ಫಾ. ಆಂಡ್ರ್ಯೂ ಲಿಯೋ ಡಿಸೋಜ ಹೇಳಿದರು. ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ವಾರ್ಷಿಕೋತ್ಸವ ಅಂಗವಾಗಿ ಹಾಗೂ ಭಾರತೀಯ ಕಥೋಲಿಕ್ ಯುವ ಸಂಚಾಲನ ಪಕ್ಷಿಕೆರೆ ಘಟಕ, ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್, ಆಸ್ರೋ ಪೌಂಡೇಶನ್, ಮಂಗಳೂರು ಎ. ಜೆ. ಆಸ್ಪತ್ರೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಭಾನುವರ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಮಂಗಳೂರು ಎ. ಜೆ. ಆಸ್ಪತ್ರೆಯ ರಕ್ತ ನಿಧಿಯ ಮುಖ್ಯಸ್ಥ ಗೋಪಾಲಕೃಷ್ಣ, ದಾಮೋದರ್ ಶೆಟ್ಟಿ ಕೊಡೆತ್ತೂರು, ಪಕ್ಷಿಕೆರೆ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ವಿನ್ಸಂಟ್ ಡಿಸೋಜ, ಕಾರ್ಯದರ್ಶಿ ಲೂಸಿ ಡಿಸೋಜ, ಆಸ್ರೊ ಪೌಂಡೇಶನ್‌ನ ಜಾಕ್ಸನ್ ಸಲ್ದಾನ, ಕೆಮ್ರಾಲ್ ಗ್ರಾ. ಪಂ. ಸದಸ್ಯ ಮಯ್ಯದ್ದಿ, ಕೆವಿನ್ ಮಿಸ್ಕಿತ್, ಐಸಿವೈಎಮ್ ಅಧ್ಯಕ್ಷ ಗ್ಲೆನ್ ಸಲ್ದಾನ, ಕ್ಯಾರಲ್ ನೋರಾನ್ಹ ಕಾರ್ಯಕ್ರಮ ನಿರೂಪಿಸಿದರು. ನೈಜಲ್ ವಂದಿಸಿದರು.

Pakshikere-16101601 Pakshikere-16101602

 

Comments

comments

Comments are closed.

Read previous post:
Kateel-16101603
ಪುರಾಣದ ಅರಿವು ಯಕ್ಷಗಾನದಲ್ಲಿ ಸಾಧ್ಯ

ಕಟೀಲು : ಸನಾತನ ಧರ್ಮ, ಪುರಾಣಗಳ ಬಗ್ಗೆ ಅರಿವು ಯಕ್ಷಗಾನದ ಮೂಲಕ ಮಕ್ಕಳಲ್ಲಿ ಮೂಡಿಸಿ ಸಂಸ್ಕಾರ, ಸಂಸ್ಕೃತಿಗಳನ್ನು ಒಳಿಸಿ ಬೆಳಸಬಹುದು ಎಂದು ಬಾರ್ಕೂರು ಕಚ್ಚೂರು ಶ್ರೀ ನಾಗೇಶ್ವರ ದೇವಳದ...

Close