ವಿ.ಹಿ.ಪ. ಬಜರಂಗದಳ, ಮಾತೃ ಮಂಡಳಿ ದುರ್ಗಾವಾಹಿನಿ ಘಟಕಗಳ ಉದ್ಘಾಟನೆ

ಕಿನ್ನಿಗೋಳಿ : ಸಮಾಜದ ಏಳಿಗೆಗಾಗಿ ದುಡಿದು ಸಂಘಟನಾ ಶಕ್ತಿಯನ್ನು ಬಲಪಡಿಸಿ ಸುಸಂಸ್ಕ್ರತ ಸಧೃಡ ಸಮಾಜವನ್ನು ಕಟ್ಟಬೇಕು ಎಂದು ಸುರತ್ಕಲ್ ಪ್ರಖಂಡ ವಿಶ್ವಹಿಂದು ಪರಿಷತ್ ಕಾರ್ಯಧ್ಯಕ್ಷ ವೇಣುಗೋಪಾಲ್ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಭಾನುವಾರ ನಡೆದ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃ ಮಂಡಳಿ ದುರ್ಗಾವಾಹಿನಿ ಕಿನ್ನಿಗೋಳಿ ನಗರ ಹಾಗೂ ಸ್ಥಳೀಯ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಸ್ತಾವನೆಗೈದು ಮಾತನಾಡಿದರು.

ಧಾರ್ಮಿಕ ಚಿಂತಕ ವೇ.ಮೂ.ಕೊಲಕಾಡಿ ವಾದಿರಾಜ ಉಪಾಧ್ಯಾಯ ಆಶೀರ್ವಚನಗೈದು ಮಾತನಾಡಿ ಸನಾತನ ಹಿಂದು ಸಂಸ್ಕೃತಿ ಜಗತ್ತಿನಲ್ಲಿಯೇ ಶ್ರೇಷ್ಠವಾಗಿದೆ. ಸಹೃದಯತೆ ಸಹಿಷ್ಟುತೆ ಸಹಬಾಳ್ವೆಯ ಆಗರವಾಗಿದ್ದು ಅದನ್ನು ಪಾಲಿಸಿದಲ್ಲಿ ನಮ್ಮ ಜೀವನ ಪಾವನವಾಗುತ್ತದೆ. ಎಂದರು.
ಬಜರಂಗದಳದ ಪ್ರಾಂತ ಸಂಯೋಜಕ ಶರಣ್ ಪಂಪವೆಲ್ ದಿಕ್ಸೂಚಿ ಭಾಷಣಗೈದು ಮಾತನಾಡಿ ಭಾರತ ದೇಶದ ಹಿಂದು ಧರ್ಮದ ಸಂಸ್ಕೃತಿ ಸಂಸ್ಕಾರ ಆಚಾರ ವಿಚಾರಗಳು ವಿಶ್ವಮನ್ನಣೆ ಪಡೆಯುತ್ತಿದೆ. ಜಗತ್ತಿನಾದಂತ್ಯದ ಜನರು ಹಿಂದು ಧರ್ಮದ ತತ್ವಗಳನ್ನು ಅಧ್ಯಯನ ಮಾಡಿ ತಮ್ಮ ಜೀವನದಲ್ಲಿ ಅಳವಡಿಸಿ ಶಾಂತಿ ನೆಮ್ಮದಿ ಕಂಡು ಕೊಂಡಿದ್ದಾರೆ. ಎಂದು ಹೇಳಿದರು.

ಬಜರಂಗ ದಳ ಕ್ಷೇತ್ರೀಯ ಸಂಯೋಜಕ ಸೂರ್ಯನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎಳತ್ತೂರು ಮಹಾಲಿಂಗೇಶ್ವರ ದೇವಳದ ಮೊಕ್ತೇಸರ ಸಂತೋಷ್‌ಕುಮಾರ್ ಹೆಗ್ಡೆ, ಸುರಗಿರಿ ದೇವಳದ ಮೊಕ್ತೇಸರ ಬಾಲಚಂದ್ರ ಭಟ್, ಶಾಂತಿನಗರ ಮೂಕಾಂಬಿಕಾ ದೇವಳದ ಧರ್ಮದರ್ಶಿ ವಿವೇಕಾನಂದ, ವಿ. ಹಿ. ಪ. ಜಿಲ್ಲಾ ಉಪಾಧ್ಯಕ್ಷ ವಾಸುದೇವ ಗೌಡ, ಜಿಲ್ಲಾ ಸಹಕಾರ್ಯದರ್ಶಿ ಶಿವಾನಂದ್ ಮೆಂಡನ, ಜಿಲ್ಲಾ ಕಾರ್ಯದರ್ಶಿ ಗೋಪಾಲ ಕುತ್ತಾರ್, ಬಜರಂಗದಳದ ಜಿಲ್ಲಾ ಸಂಯೋಜಕ ಭುಜಂಗ ಕುಲಾಲ್, ಮಾತೃಮಂಡಳಿಯ ಜಿಲ್ಲಾ ಪ್ರಮುಖಿ ಆಶಾ ಜಗದೀಶ್, ದುರ್ಗಾವಾಹಿನಿಯ ಜಿಲ್ಲಾ ಸಂಚಾಲಕಿ ಸುರೇಖಾ ರಾಜ್, ವಿಶಾಲಾಕ್ಷಿ, ವಿ. ಹಿ. ಪ. ಸುರತ್ಕಲ್ ಕಾರ್ಯದರ್ಶಿ ಸುನಿಲ್ ಮಂಗಳಪೇಟೆ, ಬಜರಂಗದಳ ಸುರತ್ಕಲ್ ಪ್ರಖಂಡದ ಸಂಚಾಲಕ ಜಿತೇಂದ್ರ ಕಾಟಿಪಳ್ಳ, ವಿ. ಹಿ. ಪ. ಸುರತ್ಕಲ್ ನಗರ ಅಧ್ಯಕ್ಷ ಜಯರಾಮ ಆಚಾರ್ಯ, ಬಜರಂಗದಳ ಸುರತ್ಕಲ್ ನಗರ ಸಂಚಾಲಕ ಸಹನ್ ಕುಮಾರ್ ಕೋಡಿಕೆರೆ, ಕಿನ್ನಿಗೋಳಿ ವಿ ಹಿ. ಪಂ. ಅಧ್ಯಕ್ಷ ವೇದವ್ಯಾಸ ಉಡುಪ, ಉಪಾಧ್ಯಕ್ಷ ಕೆ. ವಿ. ಶೆಟ್ಟಿ, ಕಾರ್ಯದರ್ಶಿ ನಾಮದೇವಕಾಮತ್ ಮತ್ತಿತರರು ಉಪಸ್ಥಿತರಿದ್ದರು. ಕಿನ್ನಿಗೋಳಿ ನಗರ ಹಾಗೂ ವಿವಿಧ ಸ್ಥಳೀಯ ಘಟಕಗಳ ಪಧಾದಿಕಾರಿಗಳ ಪದಗ್ರಹಣ ನಡೆಯಿತು.
ದಿವಾಕರ ಕರ್ಕೇರಾ ಸ್ವಾಗತಿಸಿದರು. ನಿತೇಶ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು. ಕಿನ್ನಿಗೋಳಿ ರಾಜಾಂಗಣದಿಂದ ಯುಗಪುರುಷ ಸಭಾಭವನದವರೆಗೆ ಜಯಘೋಷದೊಂದಿಗೆ ಮೆರವಣಿಗೆ ನಡೆಯಿತು.

Kinnigoli-161001 Kinnigoli-161002 Kinnigoli-161003

 

Comments

comments

Comments are closed.

Read previous post:
Pakshikere-16101602
ಪಕ್ಷಿಕೆರೆ ರಕ್ತದಾನ ಶಿಬಿರ

ಕಿನ್ನಿಗೋಳಿ :ಯುವ ಜನರು ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವವನ್ನು ರಕ್ಷಿಸುವ ಕಾರ್ಯದಲ್ಲಿ ಭಾಗಿಯಾಗಬೇಕು ಇದು ನಿಜವಾದ ಕಳಕಳಿಯ ಸಮಾಜ ಸೇವೆ ಎಂದು ಎಂದು ಪಕ್ಷಿಕೆರೆ ಚರ್ಚ್...

Close