ಗಂಡುಕಲೆ ಯಕ್ಷಗಾನ ಮೆರೆದ ಹೆಣ್ಮಕ್ಕಳು

ಕಟೀಲು : ಸರಸ್ವತೀ ಸದನದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಶ್ರೀ ದುರ್ಗಾ ಮಕ್ಕಳ ಮೇಳದ ಕಲಾಪರ್ವದಲ್ಲಿ ತೆಂಕುತಿಟ್ಟಿನ ಹತ್ತು ವಿವಿಧ ಮಕ್ಕಳ ಮೇಳಗಳ ೧೭೪ ಕಲಾವಿದರು, ದುರ್ಗಾ ಮಕ್ಕಳ ಮೇಳದ ೭೧ಕಲಾವಿದರು ಸೇರಿದಂತೆ ಒಟ್ಟು ೨೪೫ ಮಕ್ಕಳು ಯಕ್ಷಗಾನ ವೇಷಹಾಕಿ ರಂಗದಲ್ಲಿ ಕಾಣಿಸಿಕೊಂಡರು. ಅವರಲ್ಲಿ ೧೨೯ ಹೆಣ್ಣು ಮಕ್ಕಳೇ ಇದ್ದದ್ದು ಗಂಡುಕಲೆಯೆನಿಸಿದ ಯಕ್ಷಗಾನದಲ್ಲಿ ಹೆಣ್ಮಕ್ಕಳೇ ಹೆಚ್ಚು ಕಲಿಯುತ್ತಿದ್ದಾರೆ ಎಂಬುದನ್ನು ಸೂಚಿಸುತ್ತಿತ್ತು.

ಈ ಮೂರು ದಿನಗಳಲ್ಲಿ ಯಕ್ಷಗಾನ ಪ್ರಸಂಗಗಳಲ್ಲದೆ ಯಕ್ಷಗಾನದಲ್ಲಿನ ಪ್ರಸಂಗ ಪೀಠಿಕೆ, ಪೀಠಿಕಾ ಸ್ತ್ರೀ ವೇಷ, ಅರೆಪಾವಿನಾಟ, ಗಾನವೈಭವ, ಚಪ್ಪರಮಂಚ,ಕೋಲಾಟ, ರಂಗರಂಗಿ, ಷಣ್ಮಖ ಸುಬ್ರಾಯ ಮುಂತಾದ ಪ್ರಕಾರಗಳನ್ನೂ ಮಕ್ಕಳ ಮೇಳದ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಕಾಟಿಪಳ್ಳ,. ಕಳಸ ಹಾಗೂ ಒಡಿಯೂರು ತಂಡಗಳ ನಿರ್ದೇಶನವನ್ನು ಮಹಿಳಾ ಕಲಾವಿದರೇ ನಿರ್ವಹಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು.
ಭಾನುವಾರ ಸಂಜೆ ನಡೆದ ಕಲಾಪರ್ವದ ಸಮಾರೋಪದಲ್ಲಿ ಖ್ಯಾತ ಭಾಗವತ ಕುಬಣೂರು ಶ್ರೀಧರ ರಾಯರನ್ನು ಸದಾನಂದ ಆಸ್ರಣ್ಣ ಪ್ರಶಸ್ತಿ ನೀಡಿ ಸಂಮಾನಿಸಲಾಯಿತು. ಖ್ಯಾತ ಮದ್ದಲೆ ವಾದಕ ಮುರಳೀಧರ ರಾವ್ ಹಾಗೂ ಕ್ರೀಡಾಸಾಧಕ ರೋಹಿತ್ ಕುಮಾರ್‌ರನ್ನು ಗೌರವಿಸಲಾಯಿತು.
ಶಾಸಕ ಅಭಯಚಂದ್ರ, ಕಟೀಲು ದೇಗುಲದ ಮೊಕ್ತೇಸರ ಡಾ. ರವೀಂದ್ರನಾಥ ಪೂಂಜ, ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಉದ್ಯಮಿ ಎಂ. ಜಿ.ಕರ್ಕೇರ, ಜ್ಯೋತಿಕೃಷ್ಣ ನಾಯ್ಕ್, ಪ್ರದೀಪ್ ಕುಮಾರ ಪಾಲೇಮಾರ್, ಸಂದೇಶ್ ಶೆಟ್ಟಿ, ಎಕ್ಕಾರು ರತ್ನಾಕರ ಶೆಟ್ಟಿ, ಪ್ರದ್ಯುಮ್ನ ರಾವ್, ನೀಲೇಶ್ ಶೆಟ್ಟಿಗಾರ್, ಅಶೋಕ್ ಕುಮಾರ್ ಹೊಸ್ಮಾರು, ಪ್ರೇಮನಾಥ ಮಾರ್ಲ ಮತ್ತಿತರರಿದ್ದರು. ವಾದಿರಾಜ ಕಲ್ಲೂರಾಯ, ದೇವೀಪ್ರಸಾದ್ ಸಂಮಾನ ಪತ್ರ ವಾಚಿಸಿದರು. ಮಕ್ಕಳ ಮೇಳದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ವಾಸುದೇವ ಶೆಣೈ ವಂದಿಸಿದರು. ಬಳಿಕ ದುರ್ಗಾಮಕ್ಕಳ ಮೇಳದ ಕಲಾವಿದರಿಂದ ಶ್ರೀ ರಾಮ ದರ್ಶನ ಯಕ್ಷಗಾನ ನಡೆಯಿತು.
Kateel-1710201601

 

Comments

comments

Comments are closed.

Read previous post:
Kateel-16101602
ಕಟೀಲು : ಪಾಂಡಿಚೇರಿ ಮುಖ್ಯ ಮಂತ್ರಿ ನಾರಾಯಣ ಸ್ವಾಮಿ ಭೇಟಿ

ಕಟೀಲು : ಪಾಂಡಿಚೇರಿ ಮುಖ್ಯ ಮಂತ್ರಿ ನಾರಾಯಣ ಸ್ವಾಮಿ ಭಾನುವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭ ದೇವಳದ ಮೊಕ್ತೇಸರ ವಾಸುದೇವ...

Close