ಗಿಡಿಗೆರೆ ವೈದ್ಯಕೀಯ ಶಿಬಿರ

ಕಿನ್ನಿಗೋಳಿ : ಗ್ರಾಮೀಣ ಮಟ್ಟದಲ್ಲಿ ಸೇವಾ ಸಂಘ ಸಂಸ್ಥೆಗಳು ಉಚಿತವಾಗಿ ವೈದ್ಯಕೀಯ ಶಿಬಿರ ಹಾಗೂ ರಕ್ತದಾನ ಶಿಬಿರಗಳಂತಹ ಜನಪಯೋಗಿ ಕಾರ್ಯಕ್ರಮ ಹಮ್ಮಿಕೊಂಡು ಗ್ರಾಮೀಣ ಜನರ ಹಿತ ಕಾಪಾಡಬೇಕು ಎಂದು ಕಟೀಲು ಗ್ರಾ. ಪಂ. ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ ಹೇಳಿದರು.
ಕಟೀಲು ಗಿಡಿಗೆರೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ , ತಂಗಡಿ ಸೇವಾ ಸಂಸ್ಥೆ, ಶ್ರೀ ದುರ್ಗಾಂಬಿಕಾ ಯುವಕ, ಯುವತಿ ಮಂಡಲ (ರಿ) ಗಿಡಿಗೆರೆ, ಕಟೀಲು ಗ್ರಾಮ ಪಂಚಾಯತ್ ಹಾಗೂ ಕೆ. ಎಂ. ಸಿ ಆಸ್ಪತ್ರೆ ಅತ್ತಾವರ ಮಂಗಳೂರು ಸಹಯೋಗದಲ್ಲಿ ಕಟೀಲು ಗಿಡಿಗೆರೆ ದೈವಸ್ಥಾನದ ವಠಾರದಲ್ಲಿ ಇತ್ತಿಚೆಗೆ ನಡೆದ ವೈದ್ಯಕೀಯ ಶಿಬಿರದಲ್ಲಿ ಮಾತನಾಡಿದರು.
ದೈವಸ್ಥಾನದ ಗುರಿಕಾರ ತಿಮ್ಮಪ್ಪ ಮೇಸ್ತ್ರಿ, ಕಟೀಲು ಗ್ರಾ. ಪಂ. ಸದಸ್ಯೆ ಪದ್ಮಲತಾ, ತಾರಾನಾಥ ಶೆಟ್ಟಿ ಕೊಂಡೇಲ, ರಿಕ್ಷಾ ಚಾಲಕ – ಮಾಲಕರ ಸಂಘದ ಅಧ್ಯಕ್ಷ ಶ್ರೀಧರ್, ಕಟೀಲು ದೇವಳ ಕಾಲೇಜು ಉಪನ್ಯಾಸಕ ಪರಮೇಶ್ವರ್, ಗಣಪತಿ ಭಟ್, ವಿದ್ಯಾರ್ಥಿ ನಾಯಕ ಪ್ರಜ್ವಲ್ ನಾಯಕ್, ಸುಕುಮಾರ್, ಯುವಕ ಮಂಡಲದ ಗೌರವಾಧ್ಯಕ್ಷ ನಾರಾಯಣ ಮುಗೇರ, ಅಧ್ಯಕ್ಷ ನೇಮಿರಾಜ್, ಕೇಶವ ಕಟೀಲ್, ಲೋಕಯ್ಯ, ಗೀತಾ, ಜಾನಕಿ, ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

Kinnigoli-22101603

Comments

comments

Comments are closed.

Read previous post:
Kinnigoli-22101602
ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಕಿನ್ನಿಗೋಳಿ: ವಿಜಯಾ ಬ್ಯಾಂಕ್‌ನ 86 ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಯ ರೋಗಿಗಳಿಗೆ ಕಿನ್ನಿಗೋಳಿ ವಿಜಯಾಬ್ಯಾಂಕ್ ಶಾಖೆಯ ವತಿಯಿಂದ ಹಣ್ಣು ಹಂಪಲು ವಿತರಣೆ ಶುಕ್ರವಾರ...

Close