ಮುಲ್ಕಿ ಮೂಡಬಿದಿರೆ ಬಿಜೆಪಿ ಮಂಡಲದ ಕಾರ್ಯಕಾರಿಣಿ ಸಭೆ

ಕಿನ್ನಿಗೋಳಿ : ಹಲವಾರು ವರ್ಷಗಳಿಂದ ಕಾಂಗ್ರೆಸ್ ಸರಕಾರ ಕೇಂದ್ರದಲ್ಲಿ ಆಡಳಿತ ಮಾಡಿದ್ದರೂ ಯಾವುದೇ ಅಭಿವೃದ್ದಿ ಪರ ಬದಲಾವಣೆಗಳಾಗಲಿಲ್ಲ. ಆದರೆ ಕಳೆದ ೨ ವರ್ಷಗಳಲ್ಲಿ ವಿಶ್ವವೇ ಭಾರತದತ್ತ ನೋಡುವಂತೆ ಪರಿವರ್ತನೆ ತಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರವರ್ಧಮಾನರಾಗಿ ಬೆಳೆಯುತ್ತಿದ್ದಾರೆ. ದೇಶದಲ್ಲಿ 8 ಕೋಟಿ ಇದ್ದ ಬ್ಯಾಂಕ್ ಖಾತೆಗಳು 25 ಕೋಟಿಗಳಿಗೆ ತಲುಪಿದ್ದು ಮೋದಿ ಸರಕಾರದ ದೂರದೃಷ್ಟಿಯ ಯೋಜನೆ ಯೋಚನೆಗಳು ಜನಸಾಮಾನ್ಯರಿಗೆ ತಲುಪಿ ಕೃಷಿಕರು ಹಾಗೂ ಬಡವರ್ಗದ ಜನರು ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಮೋದಿ ಸರಕಾರದ ಕನಸನ್ನು ಸಾಕಾರಗೊಳಿಸಬೇಕು ಎಂದು ಶಾಸಕ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು.
ಭಾನುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಮುಲ್ಕಿ ಮೂಡಬಿದಿರೆ ಬಿಜೆಪಿ ಮಂಡಲದ ವಿವಿಧ ಪದಾಧಿಕಾರಿಗಳ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು.
ಮುಲ್ಕಿ ಮೂಡಬಿದಿರೆ ಬಿಜೆಪಿ ಮಂಡಲದ ಅಧ್ಯಕ್ಷ ಈಶ್ವರ್ ಕಟೀಲು ಅಧ್ಯಕ್ಷತೆ ವಹಿಸಿದ್ದರು.
ದ. ಕ . ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ , ದ.ಕ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ ಅಧಿಕಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಉಮಾನಾಥ ಕೋಟ್ಯಾನ್, ಸುದರ್ಶನ್ ಮೂಡಬಿದ್ರೆ, ಕಿಶೋರ್ ರೈ, ಮುಲ್ಕಿ ಮೂಡಬಿದ್ರೆ ಮಂಡಲದ ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ ಶಿರ್ತಾಡಿ, ಜಯಾನಂದ ಮೂಲ್ಕಿ ಮತ್ತಿತರರು ಉಪಸ್ಥಿತರಿದ್ದರು.
ಲೀಲಾ ಬಂಜನ್ ಸ್ವಾಗತಿಸಿದರು. ಜಯಂತ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ರಾಜು ವಂದಿಸಿದರು.

Kinnigoli-24101601

Comments

comments

Comments are closed.

Read previous post:
Pakshikere-24101601
ಪಕ್ಷಿಕೆರೆ ಚರ್ಚ್ : ಹೊರೆಕಾಣಿಕೆ ಸಮರ್ಪಣೆ

ಪಕ್ಷಿಕೆರೆ ಚರ್ಚ್ ವಾರ್ಷಿಕ ಉತ್ಸವ : ಹೊರೆಕಾಣಿಕೆ ಸಮರ್ಪಣೆ ಕಿನ್ನಿಗೋಳಿ : ಅ. 28 ರಂದು ನಡೆಯಲಿರುವ ಪಕ್ಷಿಕೆರೆ ಸಂತ ಜೂದರ ಪುಣ್ಯಕ್ಷೇತ್ರದ ವಾರ್ಷಿಕ ಉತ್ಸವದ ಪ್ರಯುಕ್ತ ಭಾನುವಾರ ಪಕ್ಷಿಕೆರೆ...

Close