ಪಕ್ಷಿಕೆರೆ ಚರ್ಚ್ : ಹೊರೆಕಾಣಿಕೆ ಸಮರ್ಪಣೆ

ಪಕ್ಷಿಕೆರೆ ಚರ್ಚ್ ವಾರ್ಷಿಕ ಉತ್ಸವ : ಹೊರೆಕಾಣಿಕೆ ಸಮರ್ಪಣೆ
ಕಿನ್ನಿಗೋಳಿ : ಅ. 28 ರಂದು ನಡೆಯಲಿರುವ ಪಕ್ಷಿಕೆರೆ ಸಂತ ಜೂದರ ಪುಣ್ಯಕ್ಷೇತ್ರದ ವಾರ್ಷಿಕ ಉತ್ಸವದ ಪ್ರಯುಕ್ತ ಭಾನುವಾರ ಪಕ್ಷಿಕೆರೆ ಚರ್ಚಿಗೆ ಸರ್ವ ಭಕ್ತರಿಂದ ಹೊರೆಕಾಣಿಕೆ ಮೆರವಣಿಗೆಗೆ ನಡೆಯಿತು. ಈ ಸಂದರ್ಭ ಪಕ್ಷಿಕೆರೆ ಪೇಟೆಯಲ್ಲಿ ತೀರ್ಥಹಳ್ಳಿ ಧರ್ಮಗುರು ಫಾ. ರೋಮನ್ ಪಿಂಟೊ ಅವರಿಂದ ಕನ್ನಡದಲ್ಲಿ ಪ್ರವಚನ ನಡೆಯಿತು. ಪಕ್ಷಿಕೆರೆ ಚರ್ಚ್ ಧರ್ಮಗುರು ಫಾ. ಆಂಡ್ರ್ಯೂ ಲಿಯೋ ಡಿಸೋಜ, ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ವಿನ್ಸೆಂಟ್ ಡಿಸೋಜ, ಮತ್ತು ಕಾರ್ಯದರ್ಶಿ ಲೂಸಿ ಡಿಸೋಜ, ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

Pakshikere-24101601

Comments

comments

Comments are closed.

Read previous post:
ಪೇಜಾವರರಿಗೆ ಅವಮಾನ :  ಖಂಡನೆ

ಕಿನ್ನಿಗೋಳಿ: ಉಡುಪಿ ಚಲೋ ನೆಪದಲ್ಲಿ ದೇವತಾಸ್ವರೂಪಿಯಾಗಿರುವ ಮಹಾಸಾಧಕ, ಸಜ್ಜನ ಸನ್ಯಾಸಿ ಪೇಜಾವರ ವಿಶ್ವೇಶತೀರ್ಥರನ್ನು ಅವಮಾನಗೊಳಿಸುವ ದುಷ್ಕೃತ್ಯಗಳನ್ನು ಕಟೀಲು ನಂದಿನಿ ಬ್ರಾಹ್ಮಣ ಸಭಾ ಖಂಡಿಸುತ್ತದೆ ಎಂದು ಸಭಾ ಅಧ್ಯಕ್ಷ ಡಾ....

Close