ಅ. 29 ಕಿನ್ನಿಗೋಳಿಯಲ್ಲಿ ಗೂಡುದೀಪ ಸ್ಪರ್ಧೆ

gudeepa

ಕಿನ್ನಿಗೋಳಿ: ಯುಗಪುರುಷ ಕಿನ್ನಿಗೋಳಿ, ರೋಟರ‍್ಯಾಕ್ಟ್ ಕ್ಲಬ್, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್ ಕಿನ್ನಿಗೋಳಿ, ಯಕ್ಷಲಹರಿ (ರಿ.) ಕಿನ್ನಿಗೋಳಿ, ಲಯನ್ಸ್ ಕ್ಲಬ್ ಮೂಲ್ಕಿ, ಭ್ರಾಮರೀ ಮಹಿಳಾ ಸಮಾಜ ಮೆನ್ನಬೆಟ್ಟು, ವಿಜಯ ಕಲಾವಿದರು ಕಿನ್ನಿಗೋಳಿ ಹಾಗೂ ನಮ್ಮ ಕಿನ್ನಿಗೋಳಿ ಡಾಟ್ ಕಾಮ್ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಅಕ್ಟೋಬರ್ 29ರಂದು ಶನಿವಾರ ಸಾಯಂ.ಗಂಟೆ 4ರಿಂದ ಗೂಡುದೀಪ ಸ್ಪರ್ಧೆ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಜರಗಲಿರುವುದು. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಮಧ್ಯಾಹ್ನ ಗಂಟೆ ೨ರಿಂದ ಗೂಡುದೀಪ ಪ್ರದರ್ಶಿಸಬೇಕು. ಕೈಯಲ್ಲಿ ತಯಾರಿಸಿದ ಸಾಂಪ್ರದಾಯಿಕ ಗೂಡುದೀಪಗಳಿಗೆ ಅವಕಾಶವಿದೆ. ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಹಾಗೂ ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಭಾಗವಹಿಸುವವರು 9481960238, 9611390097, 9844914146, 9901657490, 9880645630 ಇವರನ್ನು ಸಂಪರ್ಕಿಸಬಹುದು.

Comments

comments

Comments are closed.