ನೂತನ ಬಸ್ಸು ತಂಗುದಾಣ ಉದ್ಘಾಟನೆ

ಕಿನ್ನಿಗೋಳಿ: ದಿ. ರಾಮಣ್ಣ ಕೆ ಶೆಟ್ಟಿಯವರ ಸಾಮಾಜಿಕ ಕಳಕಳಿ ಅನನ್ಯ ಅವರ ಮಕ್ಕಳು ಕೂಡ ಮೈಗೂಡಿಸಿ ಸಮಾಜ ಸೇವೆ ಮುಂದುವರಿಸುತ್ತಿರುವುದು ಅಭಿನಂದನೀಯ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು
ಕಿನ್ನಿಗೋಳಿ ಸಮೀಪದ ಐಕಳ ಪೊಂಪೈ ಕಾಲೇಜು ಮುಂಭಾಗದಲ್ಲಿ ದಿ. ರಾಮಣ್ಣ ಕೆ. ಶೆಟ್ಟಿ ಸ್ಮರಾಣಾರ್ಥ ಅವರ ಪತ್ನಿ ಮತ್ತು ಮಕ್ಕಳು ಕೊಡುಗೆಯಾಗಿ ನಿರ್ಮಿಸಿದ ನೂತನ ಬಸ್ಸು ತಂಗುದಾಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ದಾನಿಗಳಾದ ದಿ. ರಾಮಣ್ಣ ಕೆ ಶೆಟ್ಟಿ ಅವರ ಪತ್ನಿ ಸುಲೋಚನ್ ಆರ್ ಶೆಟ್ಟಿ ಮತ್ತು ಬಸ್ಸು ನಿಲ್ದಾಣಕ್ಕೆ ವಿವಿಧ ಫಲಕಗಳನ್ನು ಕೊಡುಗೆಯಾಗಿ ನೀಡಿದ ಕಿನ್ನಿಗೋಳಿ ಅನುಗ್ರಹ ಜ್ಯುವೆಲ್ಲರ‍್ಸ್ ಮಾಲಕ ಪ್ರಥ್ವಿರಾಜ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಕಿರೆಂ ಚರ್ಚ್ ಸಹಾಯಕ ಧರ್ಮಗುರು ಎಡ್ವಿನ್ ಮೋನಿಸ್, ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯರಾದ ದಿವಾಕರ ಕರ್ಕೇರ, ರಶ್ಮಿ ಆಚಾರ್ಯ, ಸುರತ್ಕಲ್ ಸಂಚಾರಿ ಠಾಣೆಯ ಠಾಣಾಧಿಕಾರಿ ಮಂಜುನಾಥ, ಐಕಳ ಪಂಚಾಯಿತಿ ಉಪಾಧ್ಯಕ್ಷೆ ಸುಂದರಿ, ಕಿನ್ನಿಗೋಳಿ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ, ಕಿನ್ನಿಗೋಳಿ ವಲಯ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾ ಪ್ರಸಾದ್ ಹೆಗ್ಡೆ, ಪದವಿಪೂರ್ವ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕಿ ಪಿಂಟೋ, ಪೊಂಪೈ ಕಾಲೇಜು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ವರಾಜ್ ಶೆಟ್ಟಿ, ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಮ್ಯಾಥ್ಯು, ಅಗ್ರಜ ಬಿಲ್ಡರ್ ಮಾಲಕ ಸಂದೇಶ್ ಶೆಟ್ಟಿ, ಶಾಲೆಟ್ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.
ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ. ಜಾನ್ ಕ್ಲಾರನ್ಸ್ ಮಿರಾಂದ ಸ್ವಾಗತಿಸಿ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli2510201602 Kinnigoli2510201603 Kinnigoli2510201604

Comments

comments

Comments are closed.

Read previous post:
Kinnigoli2510201601
ಕಿನ್ನಿಗೋಳಿ ಮಾರುಕಟ್ಟೆ ಸಿಸಿ ಕ್ಯಾಮಾರ ಅಳವಡಿಕೆ

ಕಿನ್ನಿಗೋಳಿ: ಮಹಿಳಾ ಮೀನು ಮಾರಾಟಗಾರರ ಸುರಕ್ಷತೆ ಮತ್ತು ಗ್ರಾಹಕರ ಹಿತಾಸಕ್ತಿ ದೃಷ್ಟಿಯಿಂದ ಅಲ್ಲದೆ ಮಾರುಕಟ್ಟೆ ಪ್ರಾಂಗಣ ಪರಿಸರದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಬಗ್ಗೆ ಕಿನ್ನಿಗೋಳಿ ಗ್ರಾಮ ಪಂಚಾಯಿತಿ...

Close