ಪಕ್ಷಿಕೆರೆ : ವಾರ್ಷಿಕ ಉತ್ಸವ, ಸಾಮೂಹಿಕ ವಿವಾಹ, ನೂತನ ಸಭಾಭವನ ಲೋಕಾರ್ಪಣೆ

ಕಿನ್ನಿಗೋಳಿ : ಕ್ರೈಸ್ತರು ಭಾರತೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಭಾರತೀಯರಾಗಿ ಬೆಳೆದು ದೇಶದ ಮುಖ್ಯ ವಾಹಿನಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇತರ ಸಮಾಜದೊಂದಿಗೆ ಸ್ನೇಹಪೂರ್ಣ ಸಂಬಂಧವನ್ನು ಬೆಳೆಸಿದೆ. ನಮ್ಮಲ್ಲಿ ನಾವು ಸುಧಾರಣೆಯನ್ನು ತಂದಾಗ ಪ್ರಪಂಚದ ಸುಧಾರಣೆಯಾಗುತ್ತದೆ. ಆಡಂಬರಗಳ ವಿವಾಹದ ಬದಲಿಗೆ ಸರಳ ರೀತಿಯ ವಿವಾಹಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ಡಾ. ಡಿ. ವಿರೇಂದ್ರ ಹೆಗ್ಗಡೆ ಹೇಳಿದರು.
ಪಕ್ಷಿಕೆರೆ ಸಂತ ಜೂದರ ಪುಣ್ಯಕ್ಷೇತ್ರದಲ್ಲಿ ಶುಕ್ರವಾರ ನಡೆದ ತ್ರಿವಳಿ ಸಂಭ್ರಮವಾದ ಸಾಮೂಹಿಕ ವಿವಾಹ, ವಾರ್ಷಿಕ ಉತ್ಸವ ಹಾಗೂ ಮೂರು ಕೋಟಿಗೂ ಮಿಕ್ಕಿ ವೆಚ್ಚದ 1000 ಆಸನಗಳಿಂದ ಕೂಡಿದ ಸುಸಜ್ಜಿತ ನೂತನ ಸಭಾಭವನವನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿದರು.
ಸರಳ ರೀತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ದಂಪತಿಗಳನ್ನು ಸಮಾಜವು ಗುರುತಿಸಿ ಗೌರವಿಸಬೇಕು ಯುವಜನಾಂಗಕ್ಕೆ ಧಾರ್ಮಿಕ ಶಿಸ್ತು ಸಂಸ್ಕಾರ ನೀಡಿ ಬೆಳೆಸುವ ಕರ್ತವ್ಯ ನಮ್ಮದಾಗಬೇಕು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡಿ ಅವರಿಗೆ ಜೀವನದ ಯಶಸ್ಸಿನ ದಾರಿ ತೋರಿಸಿದಲ್ಲಿ ಭಗವಂತನ ಕೃಪಕಟಾಕ್ಷ ಖಂಡಿತಾ ಸಿಗಲಿದೆ.
ಇಲ್ಲಿಯ ಸಭಾಂಗಣವು ಎಲ್ಲ ಸಮಾಜದವರಿಗೆ ಮುಕ್ತವಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ ಅಲೋಶೀಯಸ್ ಪಾವ್ಲ್ ಡಿ ಸೋಜ ಹೇಳಿದರು.
ಕ್ಲಿಫರ್ಡ್ ರೋಡ್ರಿಗ್ಸ್ ಪೆಜಾರ್ ಮತ್ತು ಶಿಲ್ಪಾ ಶಾಲೆಟ್ ಪಿಂಟೊ ಬೆಳ್ತಂಗಡಿ, ವಿನ್ಸೆಂಟ್ ಆನಂದ್ ಡಿಸೋಜ ಮತ್ತು ಸುಪ್ರೀತಾ ಡಿಸೋಜ ಬೆಳ್ತಂಗಡಿ, ಸೆಬೆಸ್ತಿನ್ ರವಿ ಕುಟಿನ್ಹಾ ಮುಡಿಪು ಮತ್ತು ಸುನೀತಾ ಸಲ್ಡಾನ ಬೆಳ್ತಂಗಡಿ, ರಾಜೇಶ್ ಸ್ವೀವನ್ ಡಿಸೋಜ ಮತ್ತು ಜೋಸ್ಪಿನ್ ಬಳ್ಕುಂಜೆ ರಾಯಚೂರು, ಐವನ್ ಡಿಸೋಜ ತೊಕ್ಕೊಟ್ಟು ಮತ್ತು ಕಮಲ ರಾಯಚೂರು, ಪೀಟರ್ ನೊರೊನ್ಹಾ ಮತ್ತು ಸುಜಾತ ಸಿದ್ದಕಟ್ಟೆ, ಅಲೆಕ್ಸ್ ಕುಟಿನ್ಹಾ ಪಕ್ಷಿಕರೆ ಮತ್ತು ಅಂತೋನಿ ಮೇರಿ ಮೈಸೂರು, ಪ್ರವೀಣ್ ಪಾಯಸ್ ಕಿರೆಂ ಮತ್ತು ಪ್ರಶಾಂತಿ ಡಿಕುನ್ಹಾ ಹಿರ್ಗಾನ, ಅವಿಲ್ ಫ್ರಾನ್ಸಿಸ್ ಫೆರ್ನಾಂಡಿಸ್ ಪೆರ್ಮುದೆ ಮತ್ತು ಸೋನಿಯಾ ರಾಯಚೂರು
ಆಡ್ರಿಲ್ ಮಚಾದೊ ಮತ್ತು ಜಾನೆಟ್ ಜೋಸ್ಲಿನ್ ಕುತಿಂಜ್ಞ ದೇರೆಬೈಲ್, ಸುನಿಲ್ ಡಿಸೋಜಾ ಮತ್ತು ಕುಸುಮ ಕಾಟಿಪಳ್ಳ, ಜಸ್ಟಿನ್ ಮ್ಯಾಕ್ಸಿಂ ಡಿಸೋಜ ಚಿಕ್ಕಮಗಳೂರು ಮತ್ತು ನಾಗರತ್ನ ಹಾಸನ, ರಿಚ್ಚಾರ್ಡ್ ಪಾಯಸ್ ಚಿಕ್ಕಮಗಳೂರು ಮತ್ತು ತೆರೆಜಾ ಪುಷ್ಪ ಮಿನೇಜಸ್ ಬೆಳ್ತಂಗಡಿ, ಕಿರಣ್ ಡಿಸೋಜ ಚಿಕ್ಕಮಗಳೂರು ಮತ್ತು ಆರೋಗ್ಯ ಮೇರಿ ರಾಯಚೂರು, ಹಿಲರಿ ಫೆರ್ನಾಂಡಿಸ್ ಪೆರ್ಮುದೆ ಮತ್ತು ಜೆನಿಫರ್ ಲವೀನಾ ಪಿಂಟೋ ಕಾವೂರು, ದಿನೇಶ್ ಮಸ್ಕರೇನಸ್ ಪುತ್ತೂರು ಮತ್ತು ಸುಜಾತ ಕುಂದಾಪುರ ಒಟ್ಟು 16 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಕಾರ್ಯಕ್ರಮದಲ್ಲಿ ಡಾ ಡಿ ವೀರೇಂದ್ರ ಹೆಗ್ಗಡೆ ಮತ್ತು ಡಾ ಅಲೋಶೀಯಸ್ ಪಾವ್ಲ್ ಡಿ ಸೋಜರಿಗೆ ಪೌರ ಸನ್ಮಾನ ನೀಡಿ ಗೌರವಿಸಲಾಯಿತು. ಪಕ್ಷಿಕೆರೆ ಚರ್ಚ್ ಧರ್ಮಗುರು ಫಾ. ಆಂಡ್ರ್ಯೂ ಲಿಯೋ ಡಿಸೋಜ ಅವರನ್ನು ಸನ್ಮಾನಿಸಲಾಯಿತು ಹಾಗೂ ಸಭಾಂಗಣ ಕ್ಕೆ ಧನ ಸಹಾಯ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ದ.ಕ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ಕರ್ನಾಟಕ ರಾಜ್ಯ ಅರಣ್ಯ ಸಚಿವ ರಮಾನಾಥ ರೈ, ಮುಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್, ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಸುರಗಿರಿ ದೇವಳ ಆಡಳಿತ ಮೊಕ್ತೇಸರ ಕೆ. ಸೀತಾರಾಮ ಶೆಟ್ಟಿ, ಪಕ್ಷಿಕೆರೆ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಕೆ. ಮಿರನ್, ದ.ಕ. ಜಿ. ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ. ಪಂ. ಸದಸ್ಯ ವಿನೋದ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯೆರಾದ ಶುಭಲತಾ ಶೆಟ್ಟಿ, ವಜ್ರಾಕ್ಷಿ ಶೆಟ್ಟಿ, ಮಾಜಿ ಜಿ. ಪಂ. ಸದಸ್ಯರಾದ ಶೈಲಾ ಸಿಕ್ವೇರಾ, ಈಶ್ವರ್ ಕಟೀಲ್, ಪಡುಪಣಂಬೂರು ಗ್ರಾ. ಪಂ. ಅಧ್ಯಕ್ಷ ಮೋಹನ್‌ದಾಸ್ , ಕೆಮ್ರಾಲ್ ಗ್ರಾ. ಪಂ. ಅಧ್ಯಕ್ಷ ನಾಗೇಶ್ ಅಂಚನ್, ಪಿಡಿಒಗಳಾದ ಅನಿತಾ ಕ್ಯಾಥರಿನ್, ರಮೇಶ್ ರಾಥೊಡ್ ಮತ್ತಿತರರು ಉಪಸ್ಥಿತರಿದ್ದರು.

ಪಕ್ಷಿಕೆರೆ ಧರ್ಮಗುರು ಫಾ. ಆಂಡ್ರ್ಯೂ ಲಿಯೊ ಡಿ’ಸೋಜ ಸ್ವಾಗತಿಸಿದರು. ಪಕ್ಷಿಕೆರೆ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ವಿನ್ಸೆಂಟ್ ಡಿಸೋಜ, ಉದಯವಾಣಿ ಮಂಗಳೂರು ಸುದ್ದಿವಿಭಾಗದ ಮುಖ್ಯಸ್ಥ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Pakshikere-27101601 Pakshikere-27101602 Pakshikere-27101603 Pakshikere-27101604 Pakshikere-27101605 Pakshikere-27101606 Pakshikere-27101607

 

Comments

comments

Comments are closed.

Read previous post:
Pakshikere-26101601
ಪಕ್ಷಿಕೆರೆ ಚರ್ಚ್: ದಿವ್ಯ ಪ್ರತಿಮೆಯ ಮೆರವಣಿಗೆ

 ಕಿನ್ನಿಗೋಳಿ : ಪಕ್ಷಿಕೆರೆ ಸಂತ ಜೂದರ ಪುಣ್ಯಕ್ಷೇತ್ರದ ವಾರ್ಷಿಕ ಉತ್ಸವದ ಪ್ರಯುಕ್ತ ಗುರುವಾರ ಸಂಜೆ ಪಕ್ಷಿಕೆರೆ ಪೇಟೆಯಿಂದ ಪಕ್ಷಿಕೆರೆ ಚರ್ಚಿಗೆ ಸಂತ ಜೂದರ ದಿವ್ಯ ಪ್ರತಿಮೆಯ ಮೆರವಣಿಗೆ, ದಿವ್ಯ...

Close