ಕಿನ್ನಿಗೋಳಿ : ಗೂಡುದೀಪ ಸ್ಪರ್ಧೆ

ಕಿನ್ನಿಗೋಳಿ: ಸೇಹ್ನ ಸೌಹಾರ್ದ ಸಂಕೇತವಾಗಿ ದೀಪಾವಳಿ ಹಬ್ಬ ಸಮಸ್ತರ ಬದುಕು ಮತ್ತು ಮನೆ ಮನಗಳಲ್ಲಿ ಉಲ್ಲಾಸ ಅಭಿವೃದ್ದಿ ತರಲಿ ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಹೇಳಿದರು.
ಕಿನ್ನಿಗೋಳಿ ಯುಗಪುರುಷದ ಸಹಕಾರದೊಂದಿಗೆ ರೋಟರ‍್ಯಾಕ್ಟ್ ಕ್ಲಬ್ ಕಿನ್ನಿಗೋಳಿ, ರೋಟರಿ ಕ್ಲಬ್ ಕಿನ್ನಿಗೋಳಿ, ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಕಿನ್ನಿಗೋಳಿ, ಯಕ್ಷಲಹರಿ (ರಿ.) ಕಿನ್ನಿಗೋಳಿ, ಲಯನ್ಸ್ ಕ್ಲಬ್ ಮೂಲ್ಕಿ, ಭ್ರಾಮರೀ ಮಹಿಳಾ ಸಮಾಜ ಮೆನ್ನಬೆಟ್ಟು-ಕಿನ್ನಿಗೋಳಿ ಹಾಗೂ ನಮ್ಮ ಕಿನ್ನಿಗೋಳಿ ಡಾಟ್ ಕಾಮ್, ವಿಜಯ ಕಲಾವಿದರು ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಯುಗುಪುರುಷ ಸಭಾಭವನದಲ್ಲಿ ಶನಿವಾರ ನಡೆದ ದೀಪಾವಳಿ ಪ್ರಯುಕ್ತ ಗೂಡುದೀಪ ಸ್ಪರ್ಧೆಯು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ಅಶೋಕ್ ಎಸ್. ಕಾರ್ಯದರ್ಶಿ ಪ್ರಣಿತ್, ರೋಟರ‍್ಯಾಕ್ಟ್ ಮಾಜೀ ಜಿಲ್ಲಾ ಪ್ರತಿನಿಧಿ ಸುಮಿತ್ ಕುಮಾರ್, ರೋಟರಿ ಅಧ್ಯಕ್ಷ ರಮಾನಂದ ಪೂಜಾರಿ, ಲಯನ್ಸ್ ಅಧ್ಯಕ್ಷ ವೈ. ಯೋಗೀಶ್ ರಾವ್, ಮಾಜೀ ಅಧ್ಯಕ್ಷ ಸುಧಾಕರ ಶೆಟ್ಟಿ, ಮೂಲ್ಕಿ ಲಯನ್ಸ್ ಅಧ್ಯಕ್ಷ ಸುಜಿತ್ ಎಸ್ ಸಾಲ್ಯಾನ್, ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಕೋಶಾಧಿಕಾರಿ ರವೀಂದ್ರ ಶೆಟ್ಟಿ, ಯಕ್ಷಲಹರಿಯ ಅಧ್ಯಕ್ಷ ಪಿ. ಸತೀಶ್ ರಾವ್, ಭ್ರಾಮರಿ ಮಹಿಳಾ ಸಮಾಜದ ಅನುಷಾ ಕರ್ಕೇರಾ, ಶ್ವೇತಾ ಆಚಾರ್, ವೀರಾ ಶೆಟ್ಟಿ, ಸುಜಾತಾ ಶೆಟ್ಟಿ, ತಾ. ಪಂ. ಸದಸ್ಯ ದಿವಾಕರ ಕರ್ಕೇರಾ, ನಮ್ಮಕಿನ್ನಿಗೋಳಿ ಡಾಟ್ ಕಾಮ್‌ನ ಯಶವಂತ ಐಕಳ, ಕೆ. ಬಿ. ಸುರೇಶ್, ಉದ್ಯಮಿ ಪ್ರಥ್ವಿರಾಜ್ ಆಚಾರ್ಯ, ಸುಧಾಕರ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಪತ್ರಕರ್ತ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ, ಭಾಗವಹಿಸಿದವರಿಗೆ ಪ್ರಮಾಣ ಪತ್ರ ನೀಡಲಾಯಿತು

ವಿಜೇತರ ವಿವರ: ಸಾಂಪ್ರದಾಯಿಕ
ಪ್ರಥಮ -ಸತೀಶ್ ಮೂಡಬಿದಿರೆ, ದ್ವಿತೀಯ- ಅಟೋರಿಕ್ಷಾ ಚಾಲಕರು ಮಾಲಕರು ಕಟೀಲು, ತೃತೀಯ-ಸ್ವಾತಿ ರಾವ್ ಕವತ್ತಾರು.

ಆಧುನಿಕ- ಪ್ರಥಮ- ಸುಜಿತ್ ಪೆರಾರ, ದ್ವಿತೀಯ- ಪ್ರಮೋದ್ ವಾಮಂಜೂರು, ತೃತೀಯ- ಜಗದೀಶ್ ಆಚಾರ್ಯ ಜೋಕಟ್ಟೆ
ವಿಶೇಷ ಬಹುಮಾನ- ಕರುಣಾಕರ ಎಸ್. ಕೋಡಿ

Kinnigoli-3010201603

Comments

comments

Comments are closed.

Read previous post:
Kinnigoli-3010201602
ಸಿಂಡಿಕೇಟ್ ಬ್ಯಾಂಕ್‌-ಶಾಲಿನಿರಾವ್ ನಿವೃತ್ತಿ

ಕಿನ್ನಿಗೋಳಿ: ಸಿಂಡಿಕೇಟ್ ಬ್ಯಾಂಕ್‌ನಲ್ಲಿ 39 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಾಲಿನಿರಾವ್ ಅವರ ವಿದಾಯ ಕೂಟ ಕಿನ್ನಿಗೋಳಿ ಶಾಖೆಯಲ್ಲಿ ಶುಕ್ರವಾರ ನಡೆಯಿತು. ಶಾಖಾ ಪ್ರಬಂಧಕಿ ಆಶಾ, ಅಧಿಕಾರಿ ರವಿರಾಜ,...

Close