ನ 13 ರಂದು ಕಿನ್ನಿಗೋಳಿಯಲ್ಲಿ ಧರ್ಮ ಜಾಗೃತಿ ಸಭೆ

ಕಿನ್ನಿಗೋಳಿ: ಮುಂದಿನ ಜನಾಂಗಕ್ಕೆ ಸನಾತನ ಹಿಂದು ಧರ್ಮದ ತತ್ವ ಆದರ್ಶಗಳು ಮುಟ್ಟಬೇಕು ಅದಕ್ಕಾಗಿ ಧರ್ಮ ಜಾಗೃತಿಯ ಕಾರ್ಯ ನಿರಂತರ ನಡೆಯಬೇಕು ಎಂದು ಹಿಂದು ಜನ ಜಾಗೃತಿ ಸಮಿತಿಯ ಸಮನ್ವಯಕ ಪ್ರಭಾಕರ ಪಡಿಯಾರ್ ಹೇಳಿದರು.
ಬುಧವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಹಿಂದು ಜನ ಜಾಗೃತಿ ಸಮಿತಿಯ ಆಶ್ರಯದಲ್ಲಿ ಮುಂದಿನ ನವೆಂಬರ್ 13 ರಂದು ಕಿನ್ನಿಗೋಳಿಯಲ್ಲಿ ನಡೆಯುವ ಧರ್ಮ ಜಾಗೃತಿ ಸಭೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ದ. ಕ. ಜಿಲ್ಲಾ ರಣರಾಗಿಣಿ ಶಾಖೆಯ ಮುಖ್ಯಸ್ಥೆ ಲಕ್ಷ್ಮೀ ಪೈ ಉಪಸ್ಥಿತರಿದ್ದರು. ಉಪೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Kinnigoli-3010201604

Comments

comments

Comments are closed.

Read previous post:
Kinnigoli-3010201603
ಕಿನ್ನಿಗೋಳಿ : ಗೂಡುದೀಪ ಸ್ಪರ್ಧೆ

ಕಿನ್ನಿಗೋಳಿ: ಸೇಹ್ನ ಸೌಹಾರ್ದ ಸಂಕೇತವಾಗಿ ದೀಪಾವಳಿ ಹಬ್ಬ ಸಮಸ್ತರ ಬದುಕು ಮತ್ತು ಮನೆ ಮನಗಳಲ್ಲಿ ಉಲ್ಲಾಸ ಅಭಿವೃದ್ದಿ ತರಲಿ ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ...

Close