ಕಟೀಲು ಗೋಪೂಜೆ

ಕಿನ್ನಿಗೋಳಿ: ಕಟೀಲು ಕ್ಷೇತ್ರದಲ್ಲಿ ಗೋವುಗಳಿಗೆ ವಿಶೇಷ ಮಹತ್ವ ಕಲ್ಪಿಸಲಾಗುತ್ತಿದೆ. ಗೋವಿನ ಪೂಜೆಯಿಂದ ಸನಾತನ ಸಂಸ್ಕ್ರತಿ ಜಾಗೃತಿಯಾಗುತ್ತದೆ. ಎಂದು ಕಟೀಲು ದೇವಳದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಮಲ್ಲಿಗೆಯಂಗಡಿ ಸಮೀಪದ ಮಾಂಜದಲ್ಲಿರುವ ಗೋಶಾಲೆಯಲ್ಲಿ ಭಾನುವಾರ ಕಿನ್ನಿಗೋಳಿಯ ಸಜ್ಜನ ಬಂಧುಗಳ ಸಂಯೋಜನೆಯಲ್ಲಿ ಗೋಪೂಜೆ ಸಂದರ್ಭ ಗೋವುಗಳಿಗೆ ಆರತಿ ಬೆಳಗಿಸಿ ಮಾತನಾಡಿದರು.
ಈ ಸಂದರ್ಭ ಗೋವುಗಳನ್ನು ಉಪಚರಿಸುವ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಪ್ರವೀಣ್ ಭಂಡಾರಿ, ಜಿ.ಪಂ. ಮಾಜಿ ಸದಸ್ಯ ಈಶ್ವರ್ ಕಟೀಲು, ತಾಲೂಕು ಪಂಚಾಯಿತಿ ಸದಸ್ಯೆ ಶುಭಲತಾ ಶೆಟ್ಟಿ, ಕಟೀಲು ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್‌ಕುಮಾರ್ ಶೆಟ್ಟಿ, ಲೋಕಯ್ಯ ಸಾಲ್ಯಾನ್, ತಿಮ್ಮಪ್ಪ ಕೋಟ್ಯಾನ್, ರಮಾನಂದ ಪೂಜಾರಿ, ದೇವಿಪ್ರಸಾದ್ ಶೆಟ್ಟಿ, ಸ್ಟ್ಯಾನಿ ಪಿಂಟೋ, ಸಚ್ಚಿದಾನಂದ ಉಡುಪ, ವೇದವ್ಯಾಸ ಉಡುಪ ದೇವಸ್ಯ ಮಠ, ಗುರುರಾಜ್ ಮಲ್ಲಿಗೆಯಂಗಡಿ, ಸಂಜೀವ ಮಡಿವಾಳ, ಶ್ಯಾಮ ಗಿಡಿಗೆರೆ, ಸಜ್ಜನ ಬಂಧುಗಳ ಸಂಘಟನೆಯ ರಘುನಾಥ ಕಾಮತ್, ಜನಾರ್ದನ ಕಿಲೆಂಜೂರು, ನಿಶಾಂತ್, ಪ್ರಕಾಶ್ ಆಚಾರ್ ಮಿಥುನ ಉಡುಪ, ಶಕುನ ಉಡುಪ ಮತ್ತಿತರರು ಉಪಸ್ಥಿತರಿದ್ದರು.

Kinnigoli-3110201602

Comments

comments

Comments are closed.

Read previous post:
Kinnigoli3010201605
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಕಿನ್ನಿಗೋಳಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿನ್ನಲೆಯಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ಅವರನ್ನು ಮುಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಅಭಿನಂಧಿಸಿದರು. ಕಿನ್ನಿಗೋಳಿ ಗ್ರಾ.ಪಂ....

Close