ಕಟೀಲು : ನೂತನ ಸಭಾಭವನ ಲೋಕಾರ್ಪಣೆ

ಕಿನ್ನಿಗೋಳಿ: ಕರಾವಳಿ ಕ್ರೈಸ್ತರು ಕೃಷಿ ಹಾಗೂ ಶಿಕ್ಷಣಕ್ಕೆ ಒತ್ತುಕೊಟ್ಟು ವಿದೇಶದಲ್ಲಿ ದುಡಿದು ಶಿಸ್ತು ಬದ್ದ ಸಾಮರಸ್ಯದ ಜೀವನ ರೂಡಿಸಿಕೊಂಡಿದ್ದಾರೆ. ಎಂದು ಮೂಲ್ಕಿ ಮೂಡಬಿದಿರೆ ಶಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಕಟೀಲು ಸಂತ ಜಾಕೋಬರ ಚರ್ಚ್ ಸುಸಜ್ಜಿತ ನೂತನ ಸಮುದಾಯ ಭವನ ಉದ್ಘಾಟಿಸಿ ಹಾಗೂ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ದೇವರಲ್ಲಿ ಭಯ ಭಕ್ತಿ ಪ್ರಾಮಾಣಿಕತೆ ನಿಷ್ಠೆ ಶಿಸ್ತು ಸಂಸ್ಕಾರ ದೀನ ದಲಿತರಿಗೆ ಸಹಾಯ ಹಸ್ತ ನೀಡಿದಾಗ ಜೀವನ ಪಾವನಗೊಳ್ಳುತ್ತದೆ. ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ ಅಲೋಶಿಯಸ್ ಪಾವ್ಲ್ ಡಿ ಸೋಜ ಆಶೀರ್ವಚನ ನೀಡಿ ಮಾತನಾಡಿದರು.
ಸಭಾಂಗಣಕ್ಕೆ ಸಹಾಯ ಹಸ್ತ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ದ.ಕ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ಕರ್ನಾಟಕ ಸರಕಾರ ಮುಖ್ಯ ಸಚೇತಕ ಐವನ್ ಡಿಸೋಜ, ದ.ಕ. ಜಿ. ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಲೂಕು ಪಂಚಾಯಿತಿ ಸದಸ್ಯ ಸುಕುಮಾರ್, ಕರ್ನಾಟಕ ಸರಕಾರದ ಇಂದಿರಗಾಂಧಿ ಆರೋಗ್ಯ ಸಂಸ್ಥೆಯ ಸದಸ್ಯೆ ಶೈಲಾ ಸಿಕ್ವೇರಾ, ಕಟೀಲು ಗ್ರಾ. ಪಂ. ಅಧ್ಯಕ್ಷೆ ಗೀತಾ ಪೂಜಾರಿ, ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಲೈನಲ್ ಲೋಬೊ ಮತ್ತಿತರರು ಉಪಸ್ಥಿತರಿದ್ದರು.

ಕಟೀಲು ಚರ್ಚ್ ಧರ್ಮಗುರು ಫಾ. ರೋನಾಲ್ಡ್ ಕುಟಿನ್ಹೊ ಸ್ವಾಗತಿಸಿದರು. ಚರ್ಚ್ ಪಾಲನ ಮಂಡಳಿ ಕಾರ್ಯದರ್ಶಿ ಅಲೆಕ್ಸ್ ತಾವ್ರೊ ವಂದಿಸಿದರು. ಶಾಂತಿ ಸಲ್ಡಾನ ಮತ್ತು ಅನಿತಾ ಕುಟಿನ್ಹೊ ಕಾರ್ಯಕ್ರಮ ನಿರೂಪಿಸಿದರು.

Kinnigoli3110201601

Comments

comments

Comments are closed.

Read previous post:
Kinnigoli-3110201603
ಕಿನ್ನಿಗೋಳಿ ಗೋಪೂಜೆ

ಕಿನ್ನಿಗೋಳಿ: ದೀಪಾವಳಿ ಪ್ರಯುಕ್ತ ಕಿನ್ನಿಗೋಳಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಘಟಕಗಳ ವತಿಯಿಂದ ಸೋಮವಾರ ಕಿನ್ನಿಗೋಳಿ ಶಾರದಾ ಮಂಟಪದ ಬಳಿ ಗೋಪೂಜೆ ನಡೆಯಿತು. ಈ ಸಂದರ್ಭ...

Close