ಶಿಕ್ಷಣಕ್ಕೆ ಒತ್ತು ನೀಡಿದಾಗ ಸಂಘ ಬೆಳವಣಿಗೆ ಸಾಧ್ಯ

ಕಿನ್ನಿಗೋಳಿ : ಒಗ್ಗಟ್ಟಿನಿಂದ ಸಂಘವನ್ನು ಮುಂದುವರಿಸಿ ಶಿಕ್ಷಣಕ್ಕೆ ಒತ್ತು ನೀಡಿದಾಗ ಸಮಾಜದ ಬೆಳವಣಿಗೆ ಸಾದ್ಯ ಎಂದು ಎಲ್‌ಐಸಿ ವಿಮಾ ಸಂಸ್ಥೆಯ ಅಭಿವೃದ್ಧಿ ಅಕಾರಿ ಕೊಲ್ನಾಡುಗುತ್ತು ವಿದ್ಯಾಧರ ಹೆಗ್ಡೆ ಹೇಳಿದರು.
ಬಂಟರ ಸಂಘ ಮೂಲ್ಕಿ (ರಿ) ವತಿಯಿಂದ, ಕಿನ್ನಿಗೋಳಿ ರಾಜಾಂಗಣ ಸಭಾಭವನದಲ್ಲಿ ನಡೆದ ಸಂಘದ 6ಗ್ರಾಮಗಳ ಗ್ರಾಮ ಸಭೆಯನ್ನು ನಡೆಸಿ ಸಮಾಜ ಬಾಂಧವರ ಕುಟುಂಬಗಳ ಸ್ಥಿತಿ-ಗತಿ ಕುಂದು ಕೊರತೆ ಸಭೆಯಲ್ಲಿ ಸಂಘಟನೆಯ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.
ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹಗ್ಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘಟನೆಯು ಸಮಾಜದ ಬಾಂಧವರ ಸಮಸ್ಯೆ ತಿಳಿದುಕೊಂಡು ಬಂಟ ಬಾಂಧವರನ್ನು ಒಗ್ಗೂಡಿಸಿ ಸಮಸ್ಯೆಗಳ ಪರಿಹಾರ ಹಾಗೂ ಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಸೀತಾರಾಮ ಶೆಟ್ಟಿ ಕಾರ್ಯದರ್ಶಿ ರವಿರಾಜ ಶೆಟ್ಟಿ, ಉಪಾಧ್ಯಕ್ಷ ಪುರುಷೋತ್ತಮ ಶೆಟ್ಟಿ , ಜತೆಕಾರ್ಯದರ್ಶಿ ಮಲ್ಲಿಕಾ ಪೂಂಜಾ, ಉಪನ್ಯಾಸಕಿ ಸುಧಾರಾಣಿ, ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಮೂಲ್ಕಿ ಬಂಟರ ಸಂಘದ 6 ಗ್ರಾಮಗಳ ವ್ಯಾಪ್ತಿಯ ಬಂಟ ಸಮಾಜದ ಜಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಆಯ್ಕೆಯಾದ ಸದಸ್ಯರನ್ನು ಗೌರವಿಸಲಾಯಿತು.

Kinnigoli0111201602

Comments

comments

Comments are closed.

Read previous post:
Kinnigoli0111201601
ಪ್ರಾಮಾಣಿಕತೆಯಿದ್ದರೆ ಉದ್ಯಮ ಬೆಳೆಯಲು ಸಾಧ್ಯ

ಕಿನ್ನಿಗೋಳಿ : ನಿಷ್ಠೆ ಪ್ರಾಮಾಣಿಕತೆಯಿದ್ದರೆ ಯಾವುದೇ ಉದ್ಯಮ ಬೆಳೆಯಲು ಸಾಧ್ಯ ಎಂದು ಕಾರ್ಕಳ ಮೈ-ಟೆಕ್ ವಿದ್ಯಾಸಂಸ್ಥೆಯ ಸಂಚಾಲಕ ಉದಯ ಆಚಾರ್ಯ ಹೇಳಿದರು. ಕಿನ್ನಿಗೋಳಿಯ ಸರಾಫ್ ಅಣ್ಣಯ್ಯಾಚಾಆರ್ಯ ಸಭಾಭವನದಲ್ಲಿ ಮಂಗಳವಾರ...

Close