ಪ್ರಾಮಾಣಿಕತೆಯಿದ್ದರೆ ಉದ್ಯಮ ಬೆಳೆಯಲು ಸಾಧ್ಯ

ಕಿನ್ನಿಗೋಳಿ : ನಿಷ್ಠೆ ಪ್ರಾಮಾಣಿಕತೆಯಿದ್ದರೆ ಯಾವುದೇ ಉದ್ಯಮ ಬೆಳೆಯಲು ಸಾಧ್ಯ ಎಂದು ಕಾರ್ಕಳ ಮೈ-ಟೆಕ್ ವಿದ್ಯಾಸಂಸ್ಥೆಯ ಸಂಚಾಲಕ ಉದಯ ಆಚಾರ್ಯ ಹೇಳಿದರು.
ಕಿನ್ನಿಗೋಳಿಯ ಸರಾಫ್ ಅಣ್ಣಯ್ಯಾಚಾಆರ್ಯ ಸಭಾಭವನದಲ್ಲಿ ಮಂಗಳವಾರ ನಡೆದ ಸ್ವಣೋದ್ಯಮ ಹಿತರಕ್ಷಣಾ ವೇದಿಕೆ ಮುಲ್ಕಿ, ಕಿನ್ನಿಗೋಳಿ, ಹಳೆಯಂಗಡಿಯ ವಾರ್ಷಿಕ ಮಹಾಸಭೆ ಹಾಗೂ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ನೂತನ ತಂತ್ರಜ್ಞಾನವನ್ನು ತಮ್ಮ ಕೆಲಸದಲ್ಲಿ ಅಳವಡಿಸಿ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿ ಸರಕಾರದಿಂದ ಸಿಗುವ ಸವಲತ್ತು ಉತ್ತಮ ರೀತಿಯಲ್ಲಿ ವಿನಿಯೋಗಿಸಿದಲ್ಲಿ ಉದ್ಯಮದಲ್ಲಿ ಯಶಸ್ಸು ಗ್ಯಾರಂಟಿ ಎಂದರು
ಈ ಸಂದರ್ಭ ನೂತನ ಅಧ್ಯಕ್ಷ ರಾಗಿ ಏಳಿಂಜೆ ಬಾಸ್ಕರ ಆಚಾರ್ಯ ಅವರನ್ನು ಆಯ್ಕೆ ಮಾಡಲಾಯಿತು. ದ. ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷ ರಮೇಶ್ ಆಚಾರ್ಯ, ಉಡುಪಿ ಚಿನ್ನ- ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಆಚಾರ್ಯ ಕುಪ್ಪೆಟ್ಟು , ಸಂಘದ ಗೌರವಾಧ್ಯಕ್ಷ ಬಿ. ಸೂರ್ಯಕುಮಾರ್ ಹಳೆಯಂಗಡಿ, ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಂಘದ ಉಪಾಧ್ಯಕ್ಷ ಶಿವರಾಮ ಆಚಾರ್ಯ, ನಿಕಟಪೂರ್ವ ಅಧ್ಯಕ್ಷ ಪಿ. ಜಗದೀಶ ಆಚಾರ್ಯ ಪಡುಪಣಂಬೂರು, ಕಾರ್ಯದರ್ಶಿ ಉದಯಕುಮಾರ್, ಕೋಶಾಕಾರಿ ಹರೀಶ್ ಜೆ. ಆಚಾರ್ಯ, ನಾಗರಾಜ್ ಮೂಲ್ಕಿ ಮತ್ತಿತರರು ಉಪಸ್ಥಿತರಿದ್ದರು.

Kinnigoli0111201601

 

Comments

comments

Comments are closed.

Read previous post:
Kinnigoli3110201601
ಕಟೀಲು : ನೂತನ ಸಭಾಭವನ ಲೋಕಾರ್ಪಣೆ

ಕಿನ್ನಿಗೋಳಿ: ಕರಾವಳಿ ಕ್ರೈಸ್ತರು ಕೃಷಿ ಹಾಗೂ ಶಿಕ್ಷಣಕ್ಕೆ ಒತ್ತುಕೊಟ್ಟು ವಿದೇಶದಲ್ಲಿ ದುಡಿದು ಶಿಸ್ತು ಬದ್ದ ಸಾಮರಸ್ಯದ ಜೀವನ ರೂಡಿಸಿಕೊಂಡಿದ್ದಾರೆ. ಎಂದು ಮೂಲ್ಕಿ ಮೂಡಬಿದಿರೆ ಶಸಕ ಕೆ. ಅಭಯಚಂದ್ರ ಜೈನ್...

Close