ಭಾವಿಗೆ ಬಿದ್ದು ಸಾವು

ಕಿನ್ನಿಗೋಳಿ: ಮುಲ್ಕಿ ಠಾಣಾ ವ್ಯಾಪ್ತಿಯ ಐಕಳ ಗ್ರಾಮದ ಸ್ಥಳಂತಗುತ್ತು ಬಳಿ ಯುವಕನೊಬ್ಬ ಪಾರಿವಾಳ ಹಿಡಿಯಲು ಹೋಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬಳಿ ನಡೆದಿದೆ.
ಮೃತ ಪಟ್ಟವನನ್ನು ಐಕಳ ಎರಡು ಬೆಟ್ಟು ನಿವಾಸಿ ವಿಠಲ (32) ಎಂದು ಗುರುತಿಸಲಾಗಿದೆ. ಬುಧವಾರ ಮಧ್ಯಾಹ್ನ ವಿಠಲ, ಸಂತೋಷ್ ಮತ್ತು ರಾಜೇಶ್ ಅವರೊಂದಿಗೆ ಪಾರಿವಾಳ ಹಿಡಿಯಲು ಐಕಳ ಸ್ಥಳಂತಗುತ್ತು ಬಳಿಯ ಪಲ್ಕೆಗೆ ಹೋಗಿದ್ದು ಪಾರಿವಾಳ ಹಿಡಿಯಲು ಹೋದ ಸಂದರ್ಭ ವಿಠಲ ಅವರು ಆವರಣ ಇಲ್ಲದ ಬಾವಿಗೆ ಬಿದ್ದು ಮೃತ ಪಟ್ಟಿದ್ದಾರೆ ಎನ್ನಲಾಗಿದೆ.
ಮುಲ್ಕಿ ಪೋಲಿಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿ, ಅಗ್ನಿಶಾಮಕ ಸಿಬ್ಬಂದಿ ಸತೀಶ್ ಬಾವಿಗೆ ಇಳಿದು ಮೃತ ದೇಹವನ್ನು ಮೇಲಕ್ಕೆತ್ತಿದರು. ಸುಮಾರು 40 ಅಡಿ ಆಳದ ಬಾವಿಯಲ್ಲಿ 20 ಅಡಿ ನೀರು ಇದ್ದು ವಿಠಲ ಅವರ ತಲೆಗೆ ಬಲವಾದ ಗಾಯವಾದ ಕಾರಣ ಮೃತ ಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ಗ್ರಾ. ಪಂ. ಸದಸ್ಯ ಸುಧಾಕರ ಸಾಲ್ಯಾನ್ ಮತ್ತಿತರರು ಮೃತ ದೇಹ ಮೇಲಕ್ಕೆತ್ತುವಲ್ಲಿ ಸಹರಿಸಿದರು.

Kinnigoli0211201601

 

Comments

comments

Comments are closed.

Read previous post:
Kinnigoli0111201602
ಶಿಕ್ಷಣಕ್ಕೆ ಒತ್ತು ನೀಡಿದಾಗ ಸಂಘ ಬೆಳವಣಿಗೆ ಸಾಧ್ಯ

ಕಿನ್ನಿಗೋಳಿ : ಒಗ್ಗಟ್ಟಿನಿಂದ ಸಂಘವನ್ನು ಮುಂದುವರಿಸಿ ಶಿಕ್ಷಣಕ್ಕೆ ಒತ್ತು ನೀಡಿದಾಗ ಸಮಾಜದ ಬೆಳವಣಿಗೆ ಸಾದ್ಯ ಎಂದು ಎಲ್‌ಐಸಿ ವಿಮಾ ಸಂಸ್ಥೆಯ ಅಭಿವೃದ್ಧಿ ಅಕಾರಿ ಕೊಲ್ನಾಡುಗುತ್ತು ವಿದ್ಯಾಧರ ಹೆಗ್ಡೆ ಹೇಳಿದರು....

Close