ಶ್ರೀ ಪೂರ್ಣಪ್ರಜ್ಞ ವಸತಿ ಸಮುಚ್ಚಯ ಉದ್ಘಾಟನೆ

ಕಿನ್ನಿಗೋಳಿ : ಮನಸ್ಸಿನಲ್ಲಿ ಉತ್ತಮ ಚಿಂತನೆಗಳು ಯೋಜನೆಗಳು ಮೂಡಿದಾಗ ಸಾರ್ಥಕ ಹಾಗೂ ಸಾಧಕ ಜೀವನ ನಮ್ಮದಾಗುತ್ತದೆ. ಎಂದು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಕಿನ್ನಿಗೋಳಿ ಸಮೀಪದ ಭಟ್ಟಕೋಡಿಯಲ್ಲಿ ನೂತನವಾಗಿ ನಿರ್ಮಿಸಿರುವ 20 ಮನೆಗಳ ಶ್ರೀ ಪೂರ್ಣಪ್ರಜ್ಞ ವಸತಿ ಸಮುಚ್ಚಯ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು.

ಸನಾತನ ಧರ್ಮದ ಶಿಸ್ತು ಸಂಸ್ಕಾರ ಆಚಾರ ವಿಚಾರಗಳನ್ನು ಮಕ್ಕಳಿಗೆ ನಾವು ತಿಳಿಹೇಳಬೇಕು ದೇವತಾರಾಧನೆಯಿಂದ ಮಾನಸಿಕ ಹಾಗೂ ದೈಹಿಕ ನೆಮ್ಮದಿ ಸಿಗುತ್ತದೆ. ಎಂದರು.
ಕಟೀಲು ದೇವಳ ಪ್ರಧಾನ ಅರ್ಚಕ ವೇದಮೂರ್ತಿ ಅನಂತಪದ್ಮನಾಭ ಆಸ್ರಣ್ಣ ಶುಭಾಶಂಸನೆಗೈದರು. ವೇದಮೂರ್ತಿ ಕೊಲಕಾಡಿ ವಾದಿರಾಜ ಉಪಾಧ್ಯಾಯ ಪ್ರಸ್ತಾವನೆಗೈದರು.
ಹಿರಿಯ ಸಾಹಿತಿ ಅಂಭಾತನಯ ಮುದ್ರಾಡಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುಖ್ಯಪ್ರಾಣ ಕಿನ್ನಿಗೋಳಿ ಅವರನ್ನು ಸನ್ಮಾನಿಸಲಾಯಿತು
ಈ ಸಂದರ್ಭ ಕಿನ್ನಿಗೋಳಿ ಯುಗಪುರುಷ ಪ್ರಕಣಾಲಯದಿಂದ ಪ್ರಕಟಿತ 521 ನೇ ಕೃತಿ ರಮೇಶ್ ಶೆಟ್ಟಿಗಾರ್ ರಚಿತ ಅಪೂರ್ಣ ಸತ್ಯಾ ಕಥಾ ಸಂಕಲನ ಕೃತಿಯನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು.

ದ.ಕ. ಜಿಲ್ಲಾ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ಮುಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್, ಸುರಗಿರಿ ದೇವಳ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಉದ್ಯಮಿ ಪಟೇಲ್ ವಾಸುದೇವ ರಾವ್ ಪುನರೂರು, ಕಿನ್ನಿಗೋಳಿ ಕಾರ್ಪೋರೇಷನ್ ಬ್ಯಾಂಕ್ ಶಾಖಾ ಪ್ರಬಂಧಕ ಪ್ರವೀಣ್ ಉಳ್ಳಾಲ್, ಮಂಗಳೂರು ವಾಣಿಜ್ಯ ತೆರಿಗೆ ಇಲಾಖಾ ಅಸಿಸ್ಟೆಂಟ್ ಕಮೀಷನರ್ ಗಿರೀಶ್ ಶೆಟ್ಟಿಗಾರ್, ಸಿ.ಎ. ಗಣೇಶ್ ಜೆ ಶೆಟ್ಟಿಗಾರ್, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಉಪಾಧ್ಯಕ್ಷೆ ಲಲಿತಾವತಿ ಕೆ. ಮಂಗಳೂರು, ದೂಜ ಶೆಟ್ಟಿಗಾರ್ ತಾಳಿಪಾಡಿ, ಆಶಾ ಪುರಂದರ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಪೂರ್ಣಪ್ರಜ್ಞ ವಸತಿ ಸಮುಚ್ಚಯದ ಮಾಲೀಕ ಪುರಂದರ ಡಿ. ಶೆಟ್ಟಿಗಾರ್ ಸ್ವಾಗತಿಸಿದರು. ಜಯರಾಂ ಮಣಿಪಾಲ್ ವಂದಿಸಿದರು. ನವ್ಯಶ್ರೀ ಶೆಟ್ಟಿಗಾರ್ ಮತ್ತು ಜಯರಾಂ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.

Kinnigoli0211201602 Kinnigoli0211201603

Comments

comments

Comments are closed.

Read previous post:
Kinnigoli0211201601
ಭಾವಿಗೆ ಬಿದ್ದು ಸಾವು

ಕಿನ್ನಿಗೋಳಿ: ಮುಲ್ಕಿ ಠಾಣಾ ವ್ಯಾಪ್ತಿಯ ಐಕಳ ಗ್ರಾಮದ ಸ್ಥಳಂತಗುತ್ತು ಬಳಿ ಯುವಕನೊಬ್ಬ ಪಾರಿವಾಳ ಹಿಡಿಯಲು ಹೋಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬಳಿ ನಡೆದಿದೆ. ಮೃತ ಪಟ್ಟವನನ್ನು...

Close