ಸಸಿಹಿತ್ಲು ಕಡಲ ಕಿಲಾರೆ ಅಭಿವೃದ್ಧಿ ಕ್ರಮ

ಹಳೆಯಂಗಡಿ: ಸಮುದ್ರ ತೀರಗಳು ಉತ್ತಮವಾಗಿ ಅಭಿವೃದ್ಧಿಗೊಳ್ಳುವುದು ಬಹಳ ಅಗತ್ಯವಾಗಿದ್ದು ಹಳೆಯಂಗಡಿ ಗಾಮ ಪಂಚಾಯಿತಿಯ ಮುಖಾಂತರ ಸಸಿಹಿತ್ಲು ಕಡಲ ಕಿಲಾರೆಯನ್ನು ವಿಶೇಷವಾಗಿ ಅಭಿವೃದ್ಧಿ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥರಾದ ಶಾಸಕಿ ಶಾರದಾ ಎಂ.ಶೆಟ್ಟಿ ಯವರು ಹೇಳಿದರು.
ಶುಕ್ರವಾರ ಮಂಗಳೂರಿನಲ್ಲಿ ಪ್ರಾಧಿಕಾರದ ಅಧ್ಯಕ್ಷ ಪದ ಸ್ವೀಕಾರದ ಬಳಿಕ ಸಸಿಹಿತ್ಲು ಕಡಲ ಕಿನಾರೆ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭ ಮಾದ್ಯಮದೊಂದಿಗೆ ಮಾತನಾಡಿದರು.
ಕಡಲ ಕಿನಾರೆ ಗಳನ್ನು ಅಪಾಯ ರಹಿತವಾಗಿ ಜನಾರ್ಕರ್ಷಣೆಯ ಕೇಂದ್ರವಾಗಿ ಅಭಿವೃದ್ಧಿಗೊಳಿಸಿದಲ್ಲಿ ಪ್ರವಾಸೋದ್ಯಮಕ್ಕೂ ಹೆಚ್ಚಿನ ಒತ್ತು ನೀಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಹಾಗೂ ಕರಾವಳಿ ಪ್ರಾಧಿಕಾರದ ವತಿಯಿಂದ ಸೂಕ್ತ ಅನುದಾನ ಮೀಸಲಿಟ್ಟು ಪಂಚಾಯತಿಯ ಮುಖೇನ ಅಭಿವೃದ್ಧಿಕಾರ್ಯಗಳನ್ನು ನಡೆಸಲಾಗುವುದು ಎಂದರು. ಹಳೆಯಂಗಡಿ ಪಂಚಾಯಿತಿ ಅಧ್ಯಕ್ಷೆ ಜಲಜ ಪ್ರಾಧಿಕಾರದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಅಧ್ಯಕ್ಷೆ ಜಲಜ ಮತ್ತು ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ ಯವರು ಪ್ರ್ರಾಧಿಕಾರದ ಅಧ್ಯಕ್ಷರನ್ನು ಗೌರವಿಸಿದರು.
ಈ ಸಂದರ್ಭ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜಾ,ಕಂದಾಯ ನಿರೀಕ್ಷಕರಾದ ದಿಲೀಪ್,ಗ್ರಾಮ ಲೆಕ್ಕಿಗರಾದ ಮೋಹನ್, ಮಹಿಳಾ ಕಾಂಗ್ರೆಸ್ ದ.ಕ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ,ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು,ಮಂಗಳೂರು ಮಹಾನಗರ ಪಾಲಿಕೆ ಕಾರ್ಪೋರೇಟರ್ ಪ್ರತಿಭಾ ಕುಲಾಯಿ,ಟಾರ್ಪೆಡೋಸ್ ಕ್ಲಬ್ ಮುಖ್ಯಸ್ಥ ಗೌತಮ್ ಶೆಟ್ಟಿ,ಹಳೆಯಂಗಡಿ ಗ್ರಾಮ ಪಂಚಾಯಿತಿ ನೈರ್ಮಲ್ಯ ಸಮಿತಿ ಅಧ್ಯಕ್ಷ ವಸಂತ ಬೆರ್ನಾಡ್,ಪಂಚಾಯಿತಿ ಸದಸ್ಯರಾದ ಅಬ್ದುಲ್ ಖಾದರ್, ಚಂದ್ರ ಕುಮಾರ್,ಅನಿಲ್ ಕುಮಾರ್,ಹಮೀದ್,ಅಝೀಜ್, ಮೂಲ್ಕಿ ನಂ ಸದಸ್ಯ ಅಶೋಕ್ ಪೂಜಾರ್,ಜೊಸ್ಸಿ ಪಿಂಟೋ,ಶಿವಾನಂದ ಆರ.ಕೆ,ಗೋಳ್ಳಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.

Mulki-0511201601 Mulki-0511201602

Comments

comments

Comments are closed.

Read previous post:
Kinnigoli0211201603
ಶ್ರೀ ಪೂರ್ಣಪ್ರಜ್ಞ ವಸತಿ ಸಮುಚ್ಚಯ ಉದ್ಘಾಟನೆ

ಕಿನ್ನಿಗೋಳಿ : ಮನಸ್ಸಿನಲ್ಲಿ ಉತ್ತಮ ಚಿಂತನೆಗಳು ಯೋಜನೆಗಳು ಮೂಡಿದಾಗ ಸಾರ್ಥಕ ಹಾಗೂ ಸಾಧಕ ಜೀವನ ನಮ್ಮದಾಗುತ್ತದೆ. ಎಂದು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ...

Close