ಯುವಪೀಳಿಗೆಗೆ ಜನಪದ ಕ್ರೀಡೆಗಳು ಮಾದರಿ

ಕಿನ್ನಿಗೋಳಿ: ಯುವಕರಲ್ಲಿ ಧಾರ್ಮಿಕ ಭಾವನೆ, ಶೃದ್ದೆ, ಏಕತೆ ಐಕ್ಯತೆ ಮೂಡಿಸುವಂತಹ ಕೆಲಸ ಆಗಬೇಕಾಗಿದೆ. ಯುವಪೀಳಿಗೆಗೆ ಜನಪದ ಕ್ರೀಡೆಗಳು ಮಾದರಿಯಾಗಲಿ ಎಂದು ಮೂಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಉದ್ಯಮಿ ದನಂಜಯ ಮಟ್ಟು ಹೇಳಿದರು.
ಬಳ್ಕುಂಜೆ ಸಮೀಪದ ಕರ್ನೀರೆ ದೇವಳದ ಬಳಿ ಭಾನುವಾರ ನಡೆದ ಕವತ್ತಾರು-ಪುತ್ತೂರು ಗ್ರಾಮಸ್ಥರ ಕೆಸರಡ್ ಒಂಜಿ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿಕೆ ರಮಣಿ ಶೆಡ್ತಿ ಕಾರ್ಯಕ್ರಮ ಉದ್ಘಾಟಿಸಿದರು.
ಕೃಷಿಕರಾದ ಮೋಹನ್‌ದಾಸ ಶೆಟ್ಟಿ ಪುತ್ತೂರು ಬಾವ, ಬಳ್ಕುಂಜೆ ಗ್ರಾ. ಪಂ ಉಪಾಧ್ಯಕ್ಷೆ ಸುಮಿತ್ರಾ ಎಸ್ ಕೋಟ್ಯಾನ್, ಪ್ರಭಾಕರ ಶೆಟ್ಟಿ, ನವೀನ್‌ಚಂದ್ರ ಶೆಟ್ಟಿ, ರಾಮದಾಸ ಶೆಟ್ಟಿ ಬಾಳಿಕೆ ಮನೆ, ಶರತ್‌ಶ್ಚಂದ್ರ ಶೆಟ್ಟಿ, ಯೋಗೀಶ್ ಕುಂದರ್, ಭುಜಂಗ ಶೆಟ್ಟಿ,ಸುನಿಲ್ ಪುತ್ತೂರು, ಪ್ರಾಣೇಶ್ ಭಟ್, ನವೀನ್ ಕೋಟ್ಯಾನ್ ಉಪಸ್ಥಿತರಿದ್ದರು. ಸಂದೀಪ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನವೀನ್ ಕೋಟ್ಯಾನ್ ವಂದಿಸಿದರು.
ಬಳಿಕ ಗ್ರಾಮಸ್ಥರಿಗೆ ಕೆಸರುಗದ್ದೆಯಲ್ಲಿ ವಿವಿದ ಸ್ಫರ್ದೆಗಳು ನಡೆಯಿತು.

Kinnigoli0711201608

Comments

comments

Comments are closed.

Read previous post:
Kinnigoli0711201606
ಐಟಿಐ ರಕ್ತ ವರ್ಗೀಕರಣ ಮತ್ತು ರಕ್ತದಾನ ಶಿಬಿರ

ಕಿನ್ನಿಗೋಳಿ: ರಕ್ತದಾನದ ಮೂಲಕ ಇತರರ ಜೀವ ಉಳಿಸುವ ಕೆಲಸ ಮಾಡಬೇಕು ಎಂದು ರೋಟರಿ ಜಿಲ್ಲಾ ಗವರ್ನರ್, ರೋಟರಿ ಜಿಲ್ಲೆ 3181 ನ ಡಾ.ಆರ್ ಎಸ್ ನಾಗಾರ್ಜುನ ಹೇಳಿದರು ಎಂ...

Close