ಕಿನ್ನಿಗೋಳಿ: ಕೃತಿ ಬಿಡುಗಡೆ

ಕಿನ್ನಿಗೋಳಿ:  ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ 521ನೇ ಕೃತಿ ರಮೇಶ್ ಶೆಟ್ಟಿಗಾರ್ ಮಂಜೇಶ್ವರ ರಚಿತ “ಅಪೂರ್ಣ ಸತ್ಯ ಹಾಗೂ ಇನ್ನಿತರ ಕಥೆಗಳು” ಕೃತಿಯನ್ನು ಬುಧವಾರ ಕಿನ್ನಿಗೋಳಿಯ ಶ್ರೀ ಪೂರ್ಣಪ್ರಜ್ಞ ವಸತಿ ಸಮುಚ್ಛಯದ ಉದ್ಘಾಟನಾ ಸಮಾರಂಭದ ಸಂದರ್ಭ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಅಂಬಾತನಯ ಮುದ್ರಾಡಿ ಉಪಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು. ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಮುಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್, ಸುರಗಿರಿ ದೇವಳ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭೀರಾಮ ಉಡುಪ, ಉದ್ಯಮಿ ಪಟೇಲ್ ವಾಸುದೇವ ರಾವ್ ಪುನರೂರು, ಕಿನ್ನಿಗೋಳಿ ಕಾರ್ಪೋರೇಷನ್ ಬ್ಯಾಂಕ್ ಶಾಖಾ ಪ್ರಬಂಧಕ ಪ್ರವೀಣ್ ಉಳ್ಳಾಲ್, ಮಂಗಳೂರು ವಾಣಿಜ್ಯ ತೆರಿಗೆ ಇಲಾಖಾ ಅಸಿಸ್ಟೆಂಟ್ ಕಮೀಷನರ್ ಗಿರೀಶ್ ಶೆಟ್ಟಿಗಾರ್, ಸಿ.ಎ. ಗಣೇಶ್ ಜೆ ಶೆಟ್ಟಿಗಾರ್, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಉಪಾಧ್ಯಕ್ಷೆ ಲಲಿತಾವತಿ ಕೆ. ಮಂಗಳೂರು, ದೂಜ ಶೆಟ್ಟಿಗಾರ್ ತಾಳಿಪಾಡಿ, ಆಶಾ ಪುರಂದರ ಶೆಟ್ಟಿಗಾರ್, ಶ್ರೀ ಪೂರ್ಣಪ್ರಜ್ಞ ವಸತಿ ಸಮುಚ್ಚಯದ ಮಾಲೀಕ ಪುರಂದರ ಡಿ. ಶೆಟ್ಟಿಗಾರ್ ಉಪಸ್ಥಿತರಿದ್ದರು.

Kinnigoli0711201604

Comments

comments

Comments are closed.

Read previous post:
Kinnigoli0711201603
ಕಿನ್ನಿಗೋಳಿ ನಿವೇದಿತ ಜಯಂತಿ ಆಚರಣೆ

ಕಿನ್ನಿಗೋಳಿ: ಸೇವೆಯ ಪ್ರತಿರೂಪವಾದ ಭಗಿನಿ ನಿವೇದಿತ ಅವರ ಗುಣಗಳು ಮತ್ತು ಸೇವಾ ಮನೋಭಾವನೆಗಳನ್ನು ನಾವು ನಮ್ಮ ದೈನಂದಿನ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಅವರ ತತ್ವ ಪಾಲಿಸಿದಾಗ ಉತ್ತಮ ಸಮಾಜದ ನಿರ್ಮಾಣವಾಗುತ್ತದೆ...

Close