ಕಿನ್ನಿಗೋಳಿ ನಿವೇದಿತ ಜಯಂತಿ ಆಚರಣೆ

ಕಿನ್ನಿಗೋಳಿ: ಸೇವೆಯ ಪ್ರತಿರೂಪವಾದ ಭಗಿನಿ ನಿವೇದಿತ ಅವರ ಗುಣಗಳು ಮತ್ತು ಸೇವಾ ಮನೋಭಾವನೆಗಳನ್ನು ನಾವು ನಮ್ಮ ದೈನಂದಿನ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಅವರ ತತ್ವ ಪಾಲಿಸಿದಾಗ ಉತ್ತಮ ಸಮಾಜದ ನಿರ್ಮಾಣವಾಗುತ್ತದೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯದರ್ಶಿ ಗೀತಾಂಜಲಿ ಸುವರ್ಣ ಹೇಳಿದರು
ಬಿಜೆಪಿ ಮೂಲ್ಕಿ ಮೂಡಬಿದ್ರೆ ಮಂಡಲದ ವತಿಯಿಂದ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆದ ನಿವೇದಿತ ಜಯಂತಿ ಆಚರಣೆಯಲ್ಲಿ ಮಾತನಾಡಿದರು.
ಕ್ಷೇತ್ರ ಸಮಿತಿ ಉಪಾದ್ಯಕ್ಷೆ ಲೀಲಾ ಬಂಜನ್ ನಿವೇದಿತ ಅವರ ಬದುಕಿನ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಮೂಲ್ಕಿ ಮೂಡಬಿದ್ರೆ ಮಂಡಲದ ಅಧ್ಯಕ್ಷೆ ಲೀಲಾವತಿ ರಾವ್, ಮಂಡಲದ ಅಧ್ಯಕ್ಷ ಈಶ್ವರ್ ಕಟೀಲ್, ಕಾರ್ಯದರ್ಶಿ ಸುಕೇಶ್ ಶೆಟ್ಟಿ ಶಿರ್ತಾಡಿ, ಯುಗಪುರುಷದ ಭುವನಾಭಿರಾಮ ಉಡುಪ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಪೂಜಾ ಪೈ, ಮಂಡಲ ಕಾರ್ಯದರ್ಶಿ ವಂದನಾ ಪ್ರಭು ಮತ್ತಿತರರು ಉಪಸ್ಥಿತರಿದ್ದರು.
ಗೀತಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Kinnigoli0711201603

Comments

comments

Comments are closed.

Read previous post:
Kinnigoli0711201602
ಕಟೀಲು : ತುಳು ಸಿನಿಮಾ ಮೂಹೂರ್ತ

ಕಿನ್ನಿಗೋಳಿ: ಬಹಳಷ್ಟು ಸೀಮಿತ ಮಾರುಕಟ್ಟೆ ಹೊಂದಿರುವ ಕರಾವಳಿಯ ತುಳು ಚಿತ್ರೋದ್ಯಮ ಇಂದು ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ. ದೇವದಾಸ್ ಕಾಫಿಕಾಡ್ ಅವರಂತಹ ಸಾಧಕರಿಂದ ತುಳು ಸಿನಿಮಾದ ಬೆಳವಣಿಗೆ ಆಗಿದೆ ಈ...

Close