ಮೂಲ್ಕಿ ಹೋಬಳಿ ಜನ ಸಂಪರ್ಕ ಸಭೆ

ಮೂಲ್ಕಿ:  ಮೂಲ್ಕಿ ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹೋಬಳಿ ಮಟ್ಟಗಳಲ್ಲಿ ಜನ ಸಂಪರ್ಕ ಸಭೆಗಳನ್ನು ಆಯೋಜಿಸಿದ್ದು ಆಶಕ್ತರಿಗೆ ಶಕ್ತಿಯನ್ನು ತುಂಬಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕೆಂದು ಶಾಸಕ ಕೆ ಆಭಯಚಮದ್ರ ಜ್ಯೆನ್ ಹೇಳಿದರು. ಮೂಲ್ಕಿಯ ಬಿಲ್ಲವ ಸಂಘದ ಶ್ರೀ ನಾರಾಯಣ ಗುರು ಸಭಾಗ್ರಹದಲ್ಲಿ ಜರಗಿದ ಕಿನ್ನಿಗೋಳಿ, ಕಟೀಲು, ಮೆನ್ನಬೆಟ್ಟು, ಹಳೆಯಂಗಡಿ, ಕಿಲ್ಪಾಡಿ ಸೇರಿದಂತೆ 10 ಗ್ರಾಮ ಪಂಚಾಯತ್ ಮತ್ತು ಮೂಲ್ಕಿ ನಗರ ಪಂಚಾಯತ್ ಗಳನ್ನೊಳಗೊಂಡ ಮೂಲ್ಕಿ ಹೋಬಳಿಯ ಜನ ಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಹೆಚ್ಚಿನ ಜನರು ಪಡಿತರ ಚೀಟಿಯ ಸಮಸ್ಯೆಯನ್ನು ಎದುರಿಸುತ್ತಿದ್ದು ಹಾಗೂ ಹಕ್ಕು ಪತ್ರ ಸಮಸ್ಯೆಯಿದ್ದು ಅಽಕಾರಿಗಳು ಮಾನವೀಯತೆಯ ನೆಲೆಯಲ್ಲಿ ವರ್ತಿಸಿ ಗ್ರಾಮಸ್ತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕೆಂದು ಹೇಳಿದರು.

ಸಭೆಯಲ್ಲಿ ಮೂಲ್ಕಿಯ ಸರ್ಕಾರಿ ಆಸ್ಪತ್ರೆಯ ಹಾಗೂ ಹಕ್ಕು ಪತ್ರಗಳ ಬಗ್ಗೆ ತೀವ್ರ ಚರ್ಚೆ ನಡೆಯಿತು.ಮೂಲ್ಕಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬಂದಿ ಕೊರತೆಯಿದ್ದು ಜನರೇಟರ್ ಸಮಸ್ಯೆಯಿದ್ದು ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಜಿಲ್ಲಾ ಆಸ್ಪತ್ರೆಯಷ್ಟು ವ್ಯವಸ್ತೆಯಿಲ್ಲ ಆದರೂ ಉತ್ತಮ ಸೇವೆಯನ್ನು ನೀಡುತ್ತಿದ್ದೇವೆಂದು ಆಸ್ತತ್ರೆಯ ವ್ಯೆದ್ಯಾಧಿಕಾರಿ ಡಾ ಅಜಿತ್ ತಿಳಿಸಿದರು,ಪಡಿತರ ಚೀಟಿಯ ಅವ್ಯವಸ್ತೆಯಿಂದಾಗಿ ಬಡವರಿಗೆ ಪಡಿತರ ಸಿಕ್ಕುತ್ತಿಲ್ಲ, ಕೂಪನ್ ವ್ಯವಸ್ಥೆ ಸರಿಯಿಲ್ಲ ಸಮಸ್ಯೆ ಬಗೆರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಗ್ರಾಮಾಂತರ ಪ್ರದೇಶದಲ್ಲಿ ನವಂಬರ್ ನಲ್ಲಿ ಕೂಪನ್ ಇಲ್ಲದೆ ಕೂಡ ಪಡಿತರ ವಿತರಿಸುತ್ತಿದ್ದು ಪ್ರತಿ ಮಂಗಳವಾರ ಮಧ್ಯಾಹ್ನ ಮೂಲ್ಕಿ ನಾಡಕಚೇರಿಯಲ್ಲಿ ಹಾಜರಿದ್ದು ಸಮಸ್ಯೆಗಳನ್ನು ಬಗೆಹರಿಸುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ತಹಶೀಲ್ದಾರ್ ವಾಸು ಶೆಟ್ಟಿ ತಿಳಿಸಿದರು.

ಪಡಿತರ ಚೀಟಿಯ ಸಮಸ್ಯೆ ಬಗ್ಗೆ ವಿಧಾನ ಸಭೆಯ ಅಧಿವೇಶನದಲ್ಲಿ ಚರ್ಚಿಸುವುದಾಗಿ ಶಾಸಕರು ತಿಳಿಸಿದರು. ಸರ್ಕಾರದ ವಿವಿಧ ಯೋಜನೆಯ ಬಗ್ಗೆ ಮೂಲ್ಕಿಯ ವಿಶೇಷ ತಹಶೀಲ್ದಾರ್ ರವರು ಸಭೆಯಲ್ಲಿ ಪ್ರಸ್ತಾವಿಸಿದರು. ಹಕ್ಕು ಪತ್ರದ ಬಗ್ಗೆ ಮಾತನಾಡಿದ ಅವರು ಹಕ್ಕು ಪತ್ರವಿದ್ದು ಪಹಣೆ ಪತ್ರ ಸಿಗದವರು ಮನೆಯ ಭಾವಚಿತ್ರ, ರೇಶನ್ ಕಾರ್ಡ್ ಪ್ರತಿ ಮತ್ತು ತಮ್ಮ ಭಾವಚಿತ್ರ ಸಮೇತ ನಾಡಕಚೇರಿಯಲ್ಲಿ ಸಲ್ಲಿಸತಕ್ಕದ್ದು, ಸರ್ಕಾರಿ ಜಾಗದಲ್ಲಿ ಆಕ್ರಮವಾಗಿ ಮನೆ ಕಟ್ಟಿದಲ್ಲಿ 94 ಸಿ ಯಲ್ಲಿ ಅರ್ಜಿ ಸಲ್ಲಿಸತಕ್ಕದ್ದು, ಹಕ್ಕು ಪತ್ರ ಬೇರೆಯವರ ಹೆಸರಲ್ಲಿದ್ದು ಕಳೆದ 10 ವರ್ಷಗಳಿಂದ ಆ ಜಾಗದಲ್ಲಿ ವಾಸವಿದ್ದಲ್ಲಿ ನವಂಬರ್ 27 ರ ಒಳಗೆ ಅರ್ಜೀಯನ್ನು ಸಲ್ಲಿಸತಕ್ಕದೆಂದು ಅವರು ತಿಳಿಸಿದರು.

ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ತಮ್ಮ ತಮ್ಮ ಇಲಾಖೆಯ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಆಧಾರ್ ಕಾರ್ಡ್ ನೊಂದಣೆ, ಅಂಗವಿಕಲರಿಗೆ ಸ್ಥಳದಲ್ಲಿ ವ್ಯೆದ್ಯಕೀಯ ತಪಾಸಣೆ ನಡೆಸಲಾಯಿತು. ಅಧ್ಯಕ್ಷತೆಯನ್ನು ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನೀಲ್ ಆಳ್ವ ವಹಿಸಿದ್ದು ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಮೆನ್ನಬೆಟ್ಟು ಪಂಚಾಯತ್ ಅಧ್ಯಕ್ಷೆ ಸರೋಜಿನಿ ಗುಜರನ್, ಕಟೀಲು ಪಂಚಾಯತ್ ಅಧ್ಯಕ್ಷೆ ಗೀತಾ ಪೂಜಾರಿ, ಕೆಮ್ರಾಲ್ ಪಂಚಾಯತ್ ಅಧ್ಯಕ್ಷ ನಾಗೇಶ್ ಅಂಚನ್, ಹಳೆಯಂಗಡಿ ಪಂಚಾಯತ್ ಆಧ್ಯಕ್ಷೆ ಜಲಜಾ. ತಾಲೂಕು ಪಂಚಾಯತ್ ಸದಸ್ಯರಾದ ಶರತ್ ಕುಬೆವೂರು, ಜೀವನ್ ಪ್ರಕಾಶ್ ಕಾಮೆರೊಟ್ಟು, ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು , ಮೆಸ್ಕಾಂ ಅಧಿಕಾರಿಗಳು ಮತ್ತಿತರಿದ್ದರು.

ಮೂಲ್ಕಿಯ ವಿಶೇಷ ತಹಶೀಲ್ದಾರ್  ಕಿಶೋರ್ ಕುಮಾರ್ ಸ್ವಾಗತಿಸಿದರು, ಉಪ ತಹಶೀಲ್ದಾರ್ ನಿತ್ಯಾನಮದ ದಾಸ್ ವಂದಿಸಿದರು, ಪ್ತಿಭಾ ನಿರೂಪಿಸಿದರು.

Mulki-0511201603 Mulki-0511201604

Comments

comments

Comments are closed.

Read previous post:
Mulki-0511201601
ಸಸಿಹಿತ್ಲು ಕಡಲ ಕಿಲಾರೆ ಅಭಿವೃದ್ಧಿ ಕ್ರಮ

ಹಳೆಯಂಗಡಿ: ಸಮುದ್ರ ತೀರಗಳು ಉತ್ತಮವಾಗಿ ಅಭಿವೃದ್ಧಿಗೊಳ್ಳುವುದು ಬಹಳ ಅಗತ್ಯವಾಗಿದ್ದು ಹಳೆಯಂಗಡಿ ಗಾಮ ಪಂಚಾಯಿತಿಯ ಮುಖಾಂತರ ಸಸಿಹಿತ್ಲು ಕಡಲ ಕಿಲಾರೆಯನ್ನು ವಿಶೇಷವಾಗಿ ಅಭಿವೃದ್ಧಿ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು...

Close