ಐಟಿಐ ರಕ್ತ ವರ್ಗೀಕರಣ ಮತ್ತು ರಕ್ತದಾನ ಶಿಬಿರ

ಕಿನ್ನಿಗೋಳಿ: ರಕ್ತದಾನದ ಮೂಲಕ ಇತರರ ಜೀವ ಉಳಿಸುವ ಕೆಲಸ ಮಾಡಬೇಕು ಎಂದು ರೋಟರಿ ಜಿಲ್ಲಾ ಗವರ್ನರ್, ರೋಟರಿ ಜಿಲ್ಲೆ 3181 ನ ಡಾ.ಆರ್ ಎಸ್ ನಾಗಾರ್ಜುನ ಹೇಳಿದರು
ಎಂ ಆರ್ ಪೂಂಜ ಐ.ಟಿ.ಐ ತೋಕೂರಿನಲ್ಲಿ ರೋಟರಿ ಕ್ಲಬ್ ಮೂಲ್ಕಿ, ರಾ.ಸೇ. ಯೋಜನೆ ಮತ್ತು ರೋವರ್ಸ್ ಘಟಕ, ಎಂ.ಆರ್.ಪೂಂಜ ಐಟಿಐ ತಪೋವನ ತೋಕೂರು ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ವೆನ್ಲಾಕ್ ಜಿಲ್ಲಾ ರಕ್ತ ಮರುಪೂರಣ ಕೇಂದ್ರ, ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆ ಮಂಗಳೂರು ಆಶ್ರಯದಲ್ಲಿ ಶುಕ್ರವಾರ ನಡೆದ ರಕ್ತ ವರ್ಗೀಕರಣ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ವೆನ್ಲಾಕ್ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಶರತ್ ಕುಮಾರ್ ಮಾತನಾಡಿ ರಕ್ತದಾನದ ಜೊತೆಗೆ ರಕ್ತದಾನಿಗಳೂ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳಬಹುದು. ಇದರಿಂದ ರಕ್ತದಾನ ಮಾಡಿದವರಲ್ಲಿ ಹೊಸ ರಕ್ತಕಣಗಳ ಉತ್ಪತ್ತಿಗೆ ಪ್ರಚೋದನೆ ಸಿಗುತ್ತದೆ. ರಕ್ತದಲ್ಲಿ ಕೊಲೆಸ್ಟರಾಲ್ ಅಂಶ ಕಡಿಮೆಯಾಗಿ ಆತ ಇನ್ನಷ್ಟು ಆರೋಗ್ಯವಂತನಾಗಿರಲು ಸಾಧ್ಯ ಎಂದರು
ಈ ಸಂದರ್ಭ ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಜೋನ್ ವಿಲ್ಸನ್ ಡಿಸೋಜ, ರೋಟರಿ ಸಹಾಯಕ ಗವರ್ನರ್, ಜಿನ್‌ರಾಜ್ ಸಿ ಸಾಲಿಯಾನ್, ಕಾರ್ನಾಡು ಯಂಗ್‌ಸ್ಟಾರ್ ಅಸೋಸಿಯೇಶನ್ ಅಧ್ಯಕ್ಷ ರವಿಚಂದ್ರ, ಮೂಲ್ಕಿ ಪ್ರೆಸ್ ಕ್ಲಬ್ ಅಧ್ಯಕ್ಷ ನರೇಂದ್ರ ಕೆರೆಕಾಡು, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ತೋಕೂರು ಅಧ್ಯಕ್ಷ ಎಲ್ ಕೆ ಸಾಲಿಯಾನ್, ಯುವಕ ಸಂಘ (ರಿ) ತೋಕೂರು ಅಧ್ಯಕ್ಷ ಹರಿದಾಸ್ ಭಟ್, ಮೂಲ್ಕಿ ಯುವವಾಹಿನಿಯ ರಕ್ಷಿತಾ ಕೋಟ್ಯಾನ್, ತೋಕೂರು ರೋಟರಿ ಸಮುದಾಯದಳ ಅಧ್ಯಕ್ಷ ದಾಮೋದರ ಶೆಟ್ಟಿ, ಮೂಲ್ಕಿ ಅಟ್ಲಾಸ್ ಪಾಯಿಂಟ್ ಪ್ರೈ ಲಿಮಿಟೆಡ್‌ನ ಯೋಗೀಶ್ ಕೋಟ್ಯಾನ್, ಚಿತ್ರಾಪು ಯುವಕ ಮಂಡಲ ಅಧ್ಯಕ್ಷ ನಿಖಿಲ್ ಕೋಟ್ಯಾನ್, ಮೂಲ್ಕಿ-ಕಾರ್ನಾಡು ಕೆಥೋಲಿಕ್ ಸಭಾ ಉಪಾಧ್ಯಕ್ಷ ರೋಲ್ಪಿ ಡಿಕೋಸ್ತ, ಕಾರ್ನಾಡು ಗ್ಲೋರಿಯಾ ಸ್ತ್ರೀ ಸಂಘಟನೆ ಅಧ್ಯಕ್ಷೆ ಲಿಡಿಯಾ ಫುರ್ಟಾಡೋ, ಐ. ಟಿ. ಐ ಪ್ರಿನ್ಸಿಪಾಲ್ ಯಶವಂತ ಎನ್ ಸಾಲಿಯಾನ್, ತರಬೇತಿ ಅಧಿಕಾರಿ ರಘುರಾಮ ರಾವ್, ಎನ್.ಎಸ್.ಎಸ್ ಅಧಿಕಾರಿ, ಹರಿ ಎಚ್, ರೋವರ್ಸ್ ಅಧಿಕಾರಿ ಸುರೇಶ್ ಎಸ್, ರೋಟರಿ ಕ್ಲಬ್ ಮೂಲ್ಕಿ ಸಮುದಾಯ ಸೇವೆ ನಿರ್ದೇಶಕ ಬಾಲಚಂದ್ರ ಸನಿಲ್ ಮುಲ್ಕಿ ರೋಟರಿ ಕ್ಲಬ್ ಕಾರ್ಯದರ್ಶಿ ಗೋಪಾಲ ಟಿ ಭಂಡಾರಿ, ವಿಶ್ವನಾಥ ರಾವ್ ಮತ್ತಿತರರು ಉಪಸ್ಥಿತರಿದ್ದರು.

Kinnigoli0711201606 Kinnigoli0711201607

Comments

comments

Comments are closed.

Read previous post:
Kinnigoli0711201605
ಕುಣಿತ ಅಭಿನಯ ಯೋಗದ ವಿಧಾನದಂತಿದೆ.

ಕಿನ್ನಿಗೋಳಿ: ಆಧುನಿಕತೆಯ ಜೀವನದಲ್ಲಿ ದೈಹಿಕ ಶ್ರಮವಿಲ್ಲದೆ ಜನರ ಆರೋಗ್ಯ ಸ್ವಾಸ್ಥ್ಯ ಹದಗೆಡುತ್ತಿದೆ. ಆರೋಗ್ಯ ಮತ್ತು ಹಾಗೂ ಮಾನಸಿಕ ನೆಮ್ಮದಿ ಯೋಗ ಸಾಧನೆಯಿಂದ ಸಾಧ್ಯ ಎಂದು ಕಟೀಲು ದೇವಳದ ಅರ್ಚಕ...

Close