ಕಟೀಲು : ತುಳು ಸಿನಿಮಾ ಮೂಹೂರ್ತ

ಕಿನ್ನಿಗೋಳಿ: ಬಹಳಷ್ಟು ಸೀಮಿತ ಮಾರುಕಟ್ಟೆ ಹೊಂದಿರುವ ಕರಾವಳಿಯ ತುಳು ಚಿತ್ರೋದ್ಯಮ ಇಂದು ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ. ದೇವದಾಸ್ ಕಾಫಿಕಾಡ್ ಅವರಂತಹ ಸಾಧಕರಿಂದ ತುಳು ಸಿನಿಮಾದ ಬೆಳವಣಿಗೆ ಆಗಿದೆ ಈ ಸಿನಿಮಾ ಯಾವುದೇ ವಿಘ್ನ ಬಾರದೆ ಯಶಸ್ಸು ಗಳಿಸಲಿ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಅಭಯಚಂದ್ರ ಜೈನ್ ಹೇಳಿದರು
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ನಡೆದ ಬೆದ್ರ 9 ಕ್ರೀಯೇಶನ್ಸ್ ಅವರ ಅರ್ಜುನ್ ವೆಡ್ಸ್ ಅಮೃತ ತುಳು ಸಿನಿಮಾದ ಮೂಹೂರ್ತ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಟ ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ ಬಹಳ ಕಷ್ಟ ಪಟ್ಟು ತುಳು ಸಿನಿಮಾಗಳು ನಿರ್ಮಾಣವಾಗುತ್ತಿದೆ ತುಳು ಬಾಷೆಯ ವ್ಯಾಮೋಹದಿಂದ ಎಲ್ಲರೂ ತುಳು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ ಹೊರತು ಲಾಭ ಮಾಡುವ ದೃಷ್ಟಿಯಿಂದಲ್ಲ ಎಂದರು
ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ ದೀಪ ಬೆಳಗಿಸಿ ಸಿನಿಮಾಕ್ಕೆ ಶುಭ ಹಾರೈಸಿದರು.
ನಟ ನಿರ್ದೇಶಕ ದೇವದಾಸ್ ಕಾಫಿಕಾಡ್ ಕ್ಯಾಮಾರ ಚಾಲನೆ ಮಾಡಿದರು ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಮೋಹನ್ ಆಳ್ವಾ ಅವರು ನಟ ನವೀನ್ ಡಿ ಪಡೀಲ್ ಮತ್ತು ನಾಯಕಿ ಆರಾದ್ಯ ಶೆಟ್ಟಿ ನಟನೆಯ ಪ್ರಥಮ ದೃಶಕ್ಕೆ ಕ್ಲಾಪ್ ತೋರಿಸಿದರು.

ನಂತರ ನಡೆದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕ ರಘು ಶೆಟ್ಟಿ ತುಳು ಸಿನಿಮಾ ರಂಗದಲ್ಲಿ ಬಾರದ ವಿಭಿನ್ನ ಪ್ರಣಯಭರಿತ ಸಿನಿಮಾ ಪ್ರಥಮ ಬಾರಿಗೆ ನೀಡುತ್ತಿದ್ದೇವೆ. ಹೆಚ್ಚಿನ ಪ್ರಖ್ಯಾತ ರಂಗಭೂಮಿ ಕಲಾವಿದರು ಅಭಿನಯಿಸುತ್ತಿದ್ದಾರೆ. ನೈಜತೆ, ಭಾವನಾತ್ಮಕತೆಗೆ ಒತ್ತುಕೊಟ್ಟಿದ್ದೇವೆ. ತುಳು ರಂಗಭೂಮಿಯ ಪ್ರಖ್ಯಾತರನ್ನು ಒಟ್ಟು ಸೇರಿಸಿ ಸಿನೆಮಾ ಮಾಡುವ ನನ್ನ ಕನಸು ನನಸಾಗಿದೆ. ಪ್ರಪ್ರಥಮ ಬಾರಿಗೆ ತುಳು ಸಿನಿಮಾವೊಂದರಲ್ಲಿ ಏಳು ಹಾಡುಗಳಿದ್ದು ಅದಕ್ಕೆ ಸುಮ ಎಲ್ ಎನ್ ಶಾಸ್ತ್ರಿ ಸಂಗೀತ ನೀಡುತ್ತಿದ್ದಾರೆ, ವಿಜಯಕುಮಾರ್ ಕೊಡಿಯಾಲ್ ಬೈಲ್ ಸಂಭಾಷಣೆ , ಮದನ್ ಹರಿಣಿ ಕೋರಿಯೋಗ್ರಾಪಿ, ಆನಂದ್ ಸುಂದರೇಶ್ ಛಾಯಾಗ್ರಹಣ ನೀಡಲಿದ್ದು ಇಡೀ ಚಿತ್ರ ತಂಡವೇ ಅನುಭವಿಗಳಿಂದ ಕೂಡಿದೆ ಎಂದರು.

ಸುಮಾರು 35 ದಿನಗಳಲ್ಲಿ ಶೂಟಿಂಗ್ ನಡೆಯಲಿದೆ.
ಜಂಕರ್ ಮ್ಯೂಸಿಕ್ ಮೂಲಕ ಜನವರಿಯಲ್ಲಿ ಅಡಿಯೊ ಬಿಡುಗಡೆಗೊಳಲಿದೆ 2017 ರ ಮಾರ್ಚ್ ತಿಂಗಲ್ಲಿ ಸಿನೆಮಾ ಬಿಡುಗಡೆ ಗೊಳಿಸುವ ಇರಾದೆಯಿದೆ.
ಮಂಗಳೂರು ಪರಿಸರದಲ್ಲಿಯೇ ಚಿತ್ರೀಕರಣಗೊಳ್ಳಲಿದೆ.

ಈ ಸಂದರ್ಭ ಮಿಥುನ್ ರೈ, ಸುದರ್ಶನ್ ಮೂಡಬಿದ್ರೆ, ನಟ ಅರ್ಜುನ್ ಕಾಪಿಕಾಡ್, ನವೀನ್ ಡಿ ಪಡೀಲ್, ನಟಿ ಆರಾದ್ಯ ಶೆಟ್ಟಿ, ಕೃಷ್ಣ ವಜ್ರೇಶ್ವರಿ, ಅರವಿಂದ ಬೋಳಾರ್, ಎಲ್.ಎನ್ ಶಾಸ್ತ್ರಿ, ಸುಮ ಎಲ್.ಎನ್. ಶಾಸ್ತ್ರಿ, ಆನಂದ್ ಸುಂದರೇಶ್, ಉಮೇಶ್ ಮೀಜಾರ್, ಸುನಿಲ್ ನೆಲ್ಲಿಗುಡ್ಡೆ, ಪವಿತ್ರ ಶೆಟ್ಟಿ, ಕಿರಣ್, ಪ್ರಕಾಶ್ ಪಾಂಡೇಶ್ವರ್, ಮತ್ತಿತರರು ಉಪಸ್ಥಿತರಿದ್ದರು.

Kinnigoli0711201601 Kinnigoli0711201602

Comments

comments

Comments are closed.

Read previous post:
Mulki-0511201603
ಮೂಲ್ಕಿ ಹೋಬಳಿ ಜನ ಸಂಪರ್ಕ ಸಭೆ

ಮೂಲ್ಕಿ:  ಮೂಲ್ಕಿ ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹೋಬಳಿ ಮಟ್ಟಗಳಲ್ಲಿ ಜನ ಸಂಪರ್ಕ ಸಭೆಗಳನ್ನು ಆಯೋಜಿಸಿದ್ದು ಆಶಕ್ತರಿಗೆ ಶಕ್ತಿಯನ್ನು ತುಂಬಿಸುವ ಕಾರ್ಯವನ್ನು...

Close