ಕುಣಿತ ಅಭಿನಯ ಯೋಗದ ವಿಧಾನದಂತಿದೆ.

ಕಿನ್ನಿಗೋಳಿ: ಆಧುನಿಕತೆಯ ಜೀವನದಲ್ಲಿ ದೈಹಿಕ ಶ್ರಮವಿಲ್ಲದೆ ಜನರ ಆರೋಗ್ಯ ಸ್ವಾಸ್ಥ್ಯ ಹದಗೆಡುತ್ತಿದೆ. ಆರೋಗ್ಯ ಮತ್ತು ಹಾಗೂ ಮಾನಸಿಕ ನೆಮ್ಮದಿ ಯೋಗ ಸಾಧನೆಯಿಂದ ಸಾಧ್ಯ ಎಂದು ಕಟೀಲು ದೇವಳದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಶ್ರೀ ಪತಂಜಲಿ ಯೋಗ ಅಧ್ಯಯನ ಮಂದಿರ ಹಾಗೂ ಗಮ್ಮತ್ ಕಲಾವಿದರ್ ಕುಜಿಂಗಿರಿ ಸಂಸ್ಥೆಗಳ ಸಹಯೋಗದೊಂದಿಗೆ ಕುಜಿಂಗಿರಿ ಶ್ರೀ ರಕ್ತೇಶ್ವರಿ ದೈವಸ್ಥಾನದ ವಠಾರದಲ್ಲಿ ಶನಿವಾರ ನಡೆದ ಯೋಗಾಂಜಲಿ-ಯಕ್ಷಾಂಜ – 2016 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಕ್ಷಗಾನಕ್ಕೂ – ಯೋಗಕ್ಕೂ ನಂಟು ಇದೆ ಯಕ್ಷಗಾನದ ನೃತ್ಯದಲ್ಲಿ ಮುದ್ರೆಗಳು ಕುಣಿತ ಅಭಿನಯ ಯೋಗದ ವಿಧಾನದಂತಿದೆ. ಎಂದು ಹೇಳಿದರು.
ಯುಗಪುರುಷದ ಕೆ. ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಉದ್ಯಮಿ ಪುರಂದರ ಡಿ. ಶೆಟ್ಟಿಗಾರ್ ಅವರಿಗೆ ಕಲಾಫೋಷಕ ಸಮ್ಮಾನ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುಖ್ಯಪ್ರಾಣ ಕಿನ್ನಿಗೋಳಿ ಅವರನ್ನು ಅಭಿನಂದಿಸಲಾಯಿತು. ಯಕ್ಷಗಾನ ಗುರುಗಳಾದ ಲೋಕೇಶ್ ಐ. ಕಟೀಲು ಹಾಗೂ ಶೇಖರ ಡಿ. ಶೆಟ್ಟಿಗಾರ್ ಅವರನ್ನು ಸಮ್ಮಾನಿಸಲಾಯಿತು.
ಸಾಗರಿಕ ಸಂಸ್ಥೆಯ ಧನಂಜಯ ಶೆಟ್ಟಿಗಾರ್, ಕಿನ್ನಿಗೋಳಿ ಗ್ರಾ. ಪಂ. ಸದಸ್ಯರಾದ ಚಂದ್ರಶೇಖರ್ ಗೋಳಿಜೋರ, ಹೇಮಲತಾ ಬಿ. ಅಮೀನ್ ಉಪಸ್ಥಿತರಿದ್ದರು.
ನಿತಿನ್ ಕುಮಾರ್, ಪ್ರವೀಣ್ ಸಮ್ಮಾನ ಪತ್ರ ವಾಚಿಸಿದರು. ಸಂಘಟಕ ಹರಿರಾಜ ಕುಜಿಂಗಿರಿ ಸ್ವಾಗತಿಸಿದರು. ಸುರೇಶ್ ಕೊಲಕಾಡಿ ಕಾರ್ಯಕ್ರಮ ನಿರೂಪಿಸಿದರು.

Kinnigoli0711201605

Comments

comments

Comments are closed.

Read previous post:
Kinnigoli0711201604
ಕಿನ್ನಿಗೋಳಿ: ಕೃತಿ ಬಿಡುಗಡೆ

ಕಿನ್ನಿಗೋಳಿ:  ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ 521ನೇ ಕೃತಿ ರಮೇಶ್ ಶೆಟ್ಟಿಗಾರ್ ಮಂಜೇಶ್ವರ ರಚಿತ "ಅಪೂರ್ಣ ಸತ್ಯ ಹಾಗೂ ಇನ್ನಿತರ ಕಥೆಗಳು" ಕೃತಿಯನ್ನು ಬುಧವಾರ ಕಿನ್ನಿಗೋಳಿಯ ಶ್ರೀ...

Close