ಪೌರ ಸನ್ಮಾನ ಪೂರ್ವಿಭಾವಿ ಸಭೆ

ಕಿನ್ನಿಗೋಳಿ: ತೆಂಕು- ಬಡಗುತಿಟ್ಟು ಯಕ್ಷಗಾನ ಶೈಲಿಗಳನ್ನು ಮೇಳೈಸಿಕೊಂಡ ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗಳಿಸಿದ ಹಿರಿಯ ಹಾಸ್ಯ ಕಲಾವಿದ ಮುಖ್ಯ ಪ್ರಾಣ ಕಿನ್ನಿಗೋಳಿ ಅವರಿಗೆ ಕಿನ್ನಿಗೋಳಿಯಲ್ಲಿ ಅಭಿಮಾನಿಗಳು ಪೌರ ಸನ್ಮಾನ ನಡೆಸುವ ಬಗ್ಗೆ ಸೋಮವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಸಮಾಲೋಚನಾ ಸಭೆ ನಡೆಯಿತು.
ನ. 26 ಶನಿವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಪೌರ ಸನ್ಮಾನದ ಮಾಡುವ ಬಗ್ಗೆ ರೂಪು ರೇಷೆ ಮಾಡಲಾಯಿತು. ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಅನಿಲ್ ಶೆಟ್ಟಿ ಕೋಂಜಾಲು ಗುತ್ತು, ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್, ರಾಮಣ್ಣ ಕುಲಾಲ್, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ವೆ. ಯೋಗೀಶ್ ರಾವ್, ಯಕ್ಷಗಾನ ಕವಿ ಸಾಹಿತಿ ಶ್ರೀಧರ ಡಿ. ಎಸ್, ಪದ್ಮಶಾಲಿ ಮಹಾಸಭಾ ಅಧ್ಯಕ್ಷ ಪುರಂದರ ಶೆಟ್ಟಿಗಾರ್, ಸಾಗರಿಕ ಸಂಸ್ಥೆಯ ಧನಂಜಯ ಶೆಟ್ಟಿಗಾರ್, ಪುರುಷೋತ್ತಮ ಶೆಟ್ಟಿ , ದೇವಪ್ರಸಾದ್ ಪುನರೂರು, ಹರಿರಾಜ ಕುಜಿಂಗಿರಿ, ಜೋಸ್ಸಿ ಪಿಂಟೋ, ಯಶವಂತ ಐಕಳ, ನಿಶಾಂತ್ ಶೆಟ್ಟಿ , ಧ.ಗ್ರಾ. ಯೋ. ಮೇಲ್ವಿಚಾರಕ ಯಶೋಧರ, ವಿಶ್ವಬ್ರಾಹ್ಮಣ ಸಂಘ ಅಧ್ಯಕ್ಷ ಶಿವಪ್ರಸಾದ್ ಆಚಾರ್ಯ, ಚಂದ್ರಹಾಸ್, ಪ್ರಕಾಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಘುನಾಥ್ ಕೆಂಚನಕೆರೆ ವಂದಿಸಿದರು.

Comments

comments

Comments are closed.

Read previous post:
Kinnigoli0711201609

ಕಿನ್ನಿಗೋಳಿ : ಕಿನ್ನಿಗೋಳಿ ಶ್ರೀ ರಾಮಮಂದಿರದಲ್ಲಿ 66 ನೇ ವರ್ಷದ ನಗರ ಸಂರ್ಕೀತನ ಭಜನಾ ಮಂಗಲೋತ್ಸವವು ಗುರುವಾರ ನಡೆಯಿತು. ಕಿನ್ನಿಗೋಳಿ ಜಿಎಸ್‌ಬಿ ಸಭಾದ ಅಧ್ಯಕ್ಷ ಕೆ. ಅಚ್ಚುತಮಲ್ಯ, ಕಾರ್ಯದರ್ಶಿ ಸುರೇಂದ್ರನಾಥ...

Close