ಶಾಸಕರ ರಾಜೀನಾಮೆಗೆ ಒತ್ತಾಯ

ಮೂಲ್ಕಿ: ಜನಸಾಮಾನ್ಯರ ಸಮಸ್ಯೆಯನ್ನು ಆಲಿಸುವ ಬದಲು ಪ್ರಶ್ನಿಸುವವರ ವಿರುದ್ಧ ಹರಿಹಾಯ್ದಿರುವ ಶಾಸಕ ಕೆ. ಅಭಯಚಂದ್ರ ಜೈನ್‌ರವರು ತಮ್ಮ ದುರ್ವರ್ತನೆಗೆ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಇಲ್ಲದಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಅವರ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಅವರು ಕೂಡಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಎಸ್‌ಡಿಪಿಐನ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಅಧ್ಯಕ್ಷ ಎ.ಕೆ.ಅಶ್ರಫ್ ಅಗ್ರಹಿಸಿದರು.
ಅವರು ಮೂಲ್ಕಿಯ ಸ್ವಾಗತ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಿಸಿ, ಎಸ್‌ಡಿಪಿಐ ಕ್ಷೇತ್ರದ ಮೂಲ್ಕಿ ನಗರದ ಅಧ್ಯಕ್ಷ ಶರೀಫ್ ಕೊಲ್ನಾಡ್‌ರವರು ಮೇಲೆ ಜನಸಂಪರ್ಕ ಸಭೆಯಲ್ಲಿ ನಡೆಸಿದ ಹಲ್ಲೆಯನ್ನು ಪಕ್ಷವು ತೀವ್ರವಾಗಿ ವಿರೋಧಿಸುತ್ತದೆ ಅಲ್ಲದೇ ಈ ಬಗ್ಗೆ ಶಾಸಕರು ಹಾಗೂ ಹಲ್ಲೆಗೆ ಕಾರಣರಾಗಿರುವ ಬಿ.ಎಂ.ಆಸಿಫ್ ಮತ್ತು ಬಶೀರ್ ಅಹ್ಮದ್ ಇಬ್ಬರೂ ಕ್ಷಮೆಯನ್ನು ಯಾಚಿಸಬೇಕು ಇಲ್ಲಿದಿದ್ದಲ್ಲಿ ಪಕ್ಷದ ಜಿಲ್ಲಾ ವರಿಷ್ಠರೊಂದಿಗೆ ಪ್ರತಿಭಟನೆ, ಶಾಸಕರ ಮನೆಗೆ ಮುತ್ತಿಗೆಯಂತಹ ಹೋರಾಟ ಮಾಡುವುದಕ್ಕೆ ಪಕ್ಷವು ಹಿಂಜರಿಯುವುದಿಲ್ಲ ಎಂದರು.
ಘಟನೆಯ ಬಗ್ಗೆ ಅಧಿಕೃತವಾಗಿ ಪೊಲೀಸ್ ದೂರನ್ನು ನೀಡಿಲ್ಲ ಕಾರಣ ಸ್ಥಳದಲ್ಲಿ ಇನ್ಸ್‌ಪೆಕ್ಟರ್ ಇದ್ದರೂ ರಕ್ಷಣೆಗೆ ಮುಂದಾಗಿಲ್ಲ ಅವರಲ್ಲಿ ನಮಗೆ ವಿಶ್ವಾಸವಿಲ್ಲ ಎಂದು ಪ್ರಶ್ನೆಯೊಂದಕ್ಕೆ ತಿಳಿಸಿದರು. ಕೆ.ಎಸ್.ರಾವ್ ನಗರದಲ್ಲಿನ ಮಸೀದಿ ಬಳಿಯ ಸುಮಾರು ೬೫ ಮನೆಯವರಿಗೆ ಹಕ್ಕುಪತ್ರಗಳಿಲ್ಲದೇ ಅವರಿಗೆ ಯಾವುದೇ ಸವಲತ್ತು ಪಡೆಯಲಾಗುತ್ತಿಲ್ಲ ಈ ಬಗ್ಗೆ ಜನರ ಸಮಸ್ಯೆಗೆ ಸ್ಪಂದಿಸುವ ಅವರಿಗೆ ಹಕ್ಕುಪತ್ರವನ್ನು ನೀಡುವವರೆಗೂ ನಮ್ಮ ಪಕ್ಷವು ಹೋರಾಟ ನಡೆಸಲಿದೆ ಎಂದರು.
ಶರೀಫ್ ಕೊಲ್ನಾಡು ಮಾತನಾಡಿ ಕಾರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದ ಸಮಸ್ಯೆಯು ತೀವ್ರವಾಗಿದ್ದು, ಅಲ್ಲಿ ಡಿ ದರ್ಜೆಯ ನೌಕರರ ಕೊರತೆ ಇದೆ ರೋಗಿಯೊಬ್ಬರನ್ನು ದಾಖಲಿಸದೇ ಇರುವುದನ್ನು ಸ್ವತಹ ಮೂಲ್ಕಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸುನಿಲ್ ಆಳ್ವಾ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜರವರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ ನಂತರ ಅಲ್ಲಿನ ವೈದ್ಯರು ರೋಗಿಯನ್ನು ದಾಖಲು ಮಾಡಿಕೊಂಡ ಘಟನೆಯನ್ನು ಸಹ ಶಾಸಕರಲ್ಲಿ ಜನಸಂಪರ್ಕ ಸಭೆಯಲ್ಲಿ ವಿವರಿಸಿದರೇ ಅವರ ದರ್ಪದ ನಡವಳಿಕೆ ಜನರಲ್ಲಿ ಕೆಟ್ಟ ಭಾವನೆ ಮೂಡಿಸಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಮೂಲ್ಕಿ ವಲಯದ ಕಾರ್ಯದರ್ಶಿ ಅಬ್ದುಲ್ ರವೂಫ್ ಹಾಜರಿದ್ದರು.

Comments

comments

Comments are closed.

Read previous post:
ಪೌರ ಸನ್ಮಾನ ಪೂರ್ವಿಭಾವಿ ಸಭೆ

ಕಿನ್ನಿಗೋಳಿ: ತೆಂಕು- ಬಡಗುತಿಟ್ಟು ಯಕ್ಷಗಾನ ಶೈಲಿಗಳನ್ನು ಮೇಳೈಸಿಕೊಂಡ ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗಳಿಸಿದ ಹಿರಿಯ ಹಾಸ್ಯ ಕಲಾವಿದ ಮುಖ್ಯ ಪ್ರಾಣ ಕಿನ್ನಿಗೋಳಿ ಅವರಿಗೆ ಕಿನ್ನಿಗೋಳಿಯಲ್ಲಿ ಅಭಿಮಾನಿಗಳು...

Close