ಕಲಾವಿದ ಪ್ರಚಾರ-ಹಣದಾಸೆಗೆ ಬಲಿಯಾಗಬಾರದು

ಮೂಲ್ಕಿ: ಕಲಾವಿದ ಪ್ರಸಿದ್ಧನಾದ ತಕ್ಷಣೆ ಆತ ಪ್ರಚಾರ ಮತ್ತು ಹಣದ ಆಸೆಗೆ ಬಲಿಯಾದಲ್ಲಿ ಸಮಾಜದಲ್ಲಿ ವಿರೋಧಿಗಳು ಹುಟ್ಟಿಕೊಳ್ಳುತ್ತಾರೆ. ಕಲೆಗೆ ಜಾತಿ-ಧರ್ಮ-ಮತ ಭೇಧಗಳನ್ನು ಎಂದಿಗೂ ಅಳವಡಿಸಿಕೊಳ್ಳಬೇಡಿ, ಎಲ್ಲಾ ಸಮುದಾಯದ ಪ್ರೀತಿಯ ಕಲಾವಿದನಾಗಿ ಬೆಳೆಯಬೇಕು, ಅಹಂನ್ನು ಬಿಟ್ಟು ಕಲೆಯಲ್ಲಿ ಇನ್ನಷ್ಟು ಕಲಿಯಬೇಕು ಎಂಬ ದಾಹ ಮನದಲ್ಲಿರಲಿ ಎಂದು ಜನಪದ ಸಂಶೋಧಕ ಡಾ.ಗಣೇಶ್ ಅಮಿನ್ ಸಂಕಮಾರ್ ಹೇಳಿದರು.
ಮೂಲ್ಕಿ ಬಳಿಯ ಹಳೆಯಂಗಡಿ ಪಾವಂಜೆಯ ಜ್ಞಾನಶಕ್ತಿ ಶ್ರೀ ಸುಬ್ರಹ್ಮಣ್ಯಸ್ವಾಮೀ ದೇವಸ್ಥಾನದ ಶಾರಧ್ವತ ಯಜ್ಞಾಂಗಣದಲ್ಲಿ ಧರ್ಮಸ್ಥಳ-ಕನ್ಯಾಡಿಯ ಶ್ರೀರಾಮ ಕಾರುಣ್ಯ ಕಲಾ ಸಂಘದ ತೃತೀಯ ವಾರ್ಷಿಕೋತಸವದ ಗೌರವಾರ್ಪಣೆಯ ಕಾರ್ಯಕ್ರಮದಲ್ಲಿ ದಿಕ್ಸೂಜಿ ಭಾಷಣ ಮಾಡಿದರು.
ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ ಪಿತಾಂಬರ ಹೆರಾಜೆ ಅಧ್ಯಕ್ಷತೆಯನ್ನು ವಹಿಸಿದ್ದರು.
ಹಿರಿಯ ಯಕ್ಷಗಾನ ಗುರುಗಳಾದ ಶಿವರಾಮ್ ಪಣಂಬೂರು ಹಾಗೂ ಪುಷ್ಪಲತಾ ದಂಪತಿಯನ್ನು ಸನ್ಮಾನಿಸಲಾಯಿತು. ಕಲಾವಿದರಾದ ಸೀತಾರಾಮ ಕುಮಾರ್ ಕಟೀಲು, ಚಂದ್ರಶೇಖರ ಧರ್ಮಸ್ಥಳ, ಮೋಹನ್‌ಕುಮಾರ್ ಅಮ್ಮುಂಜೆಯವರನ್ನು ಗೌರವಿಸಲಾಯಿತು.
ಚಿತ್ರನಟ ರಾಜೇಶೇಖರ ಕೋಟ್ಯಾನ್, ಭಗವತಿ ಕ್ಷೇತ್ರದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಯಾದವ ಕೋಟ್ಯಾನ್, ಈಶ್ವರ ಕಟೀಲು, ಗಣೇಶ್ ಬಂಗೇರ, ಚಂದ್ರಶೇಖರ ನಾನಿಲ್, ದೀಪಕ್ ಕೋಟ್ಯಾನ್, ವಿನೋದ್‌ಕುಮಾರ್, ದೀಪಕ್ ನಾನಿಲ್‌ದಯಾನಂದ ಪಾವೂರು, ಪ್ರವೀಣ್ ವರಕೋಡಿ ಹಾಜರಿದ್ದರು.
ಮನೋಹರ್ ಸುವರ್ಣ ಸ್ವಾಗತಿಸಿದರು, ಸಂಚಾಲಕ ದಯಾನಂದ ಬೆಳಾಲು ಪ್ರಸ್ತಾವನೆಗೈದರು, ಡಿ.ಮಧವ ಕೊಳತ್ತಮಜಲು ಮತ್ತು ಪ್ರೋ. ಪದ್ಮನಾಭ ಪೂಜಾರಿ ಸಂಸ್ಮರಣಾ ಭಾಷಣ ಮಾಡಿದರು, ಜನಾರ್ದನ ಅಮ್ಮುಂಜೆ ನಿರೂಪಿಸಿದರು.

Kinnigoli0811201601

Comments

comments

Comments are closed.

Read previous post:
ಶಾಸಕರ ರಾಜೀನಾಮೆಗೆ ಒತ್ತಾಯ

ಮೂಲ್ಕಿ: ಜನಸಾಮಾನ್ಯರ ಸಮಸ್ಯೆಯನ್ನು ಆಲಿಸುವ ಬದಲು ಪ್ರಶ್ನಿಸುವವರ ವಿರುದ್ಧ ಹರಿಹಾಯ್ದಿರುವ ಶಾಸಕ ಕೆ. ಅಭಯಚಂದ್ರ ಜೈನ್‌ರವರು ತಮ್ಮ ದುರ್ವರ್ತನೆಗೆ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಇಲ್ಲದಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಅವರ...

Close