ನ. 19 ಕಟೀಲಿನಲ್ಲಿ ಶ್ರೀಧರಾಯಣ

ಕಿನ್ನಿಗೋಳಿ: ಕಟೀಲು ಮೇಳದ ಹಿರಿಯ ಭಾಗವತ ಕುಬಣೂರು ಶ್ರೀಧರರಾಯ ಅವರಿಗೆ ಅಭಿನಂಧನಾ ಕಾರ್ಯಕ್ರಮ ಶ್ರೀಧರಾಯಣ ನ. 19 ಶನಿವಾರದಂದು ಶ್ರೀ ಕ್ಷೇತ್ರ ಕಟೀಲಿನಲ್ಲಿ ನಡೆಯಲಿದ್ದು ಆ ಪ್ರಯುಕ್ತ ಸಮಾಲೋಚನಾ ಸಭೆ ಮಂಗಳವಾರ ಕಟೀಲು ದೇವಳದಲ್ಲಿ ನಡೆಯಿತು. ವಿವಿಧ ಸಮಿತಿಗಳ ಜವಾಬ್ದಾರಿಗಳ ಬಗ್ಗೆ ಸಮಿತಿಯ ಅಧ್ಯಕ್ಷ ಶ್ರೀಹರಿನಾರಾಯಣ ಆಸ್ರಣ್ಣ ಮಾಹಿತಿ ನೀಡಿದರು.
ಬೆಳಿಗ್ಗೆ ಕಾರ್ಯಕ್ರಮ ಉದ್ಘಾಟನೆ, ಬಳಿಕ ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳದಲ್ಲಿ ಪ್ರಸ್ತುತ- ಪ್ರಸ್ತುತಿ, ಬಳಿಕ ರಾಗಾನುಸಂಧಾನ ಅಭಿನಂದನೆ, ಯಕ್ಷಗಾನ ಬಯಲಾಟ ನಡೆಯುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಮಿತಿಯ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ, ಗೌರವಾಧ್ಯಕ್ಷ ಕಮಲಾದೇವಿ ಪ್ರಸಾದ್ ಆಸ್ರಣ್ಣ, ಕಾರ್ಯಧ್ಯಕ್ಷ ಮಧುಕರ ಭಾಗವತ್ ಸುರತ್ಕಲ್, ಕಾರ್ಯದರ್ಶಿ ಡಾ| ಶ್ರುತಕೀರ್ತಿರಾಜ ಉಜಿರೆ, ವಿದ್ಯಾಪ್ರಸಾದ್ ಉಡುಪಿ, ಸಂಘಟನಾ ಕಾರ್ಯದರ್ಶಿ ವಾದಿರಾಜ ಕಲ್ಲೂರಾಯ, ವಿಷ್ಣು ಶರ್ಮ, ಕೃಷ್ಣ ಪ್ರಸಾದ್ , ಅಕ್ಷಯ ಉಡುಪ, ಪ್ರಶಾಂತ್ ಉಡುಪ, ಶೈಲೇಂದ್ರ, ಸೋಮಶೇಖರ್ ಭಟ್, ಶ್ರವಣ್ ಕಾರಂತ, ಸುದರ್ಶನ್ ಆಚಾರ್ ಪುನರೂರು, ಸಂದೀಪ್ ಸಾಲ್ಯಾನ್ ಎಕ್ಕಾರು, ವೆಂಕಟೇಶ ಉಡುಪ, ಸುದರ್ಶನ ಭಟ್, ಸುನಿಲ್ ಬಂಗೇರ, ರಘುನಾಥ್ ಕಾಮತ್ ಮತ್ತಿತರರು ಉಪಸ್ಥಿರಿದ್ದರು.

Comments

comments

Comments are closed.

Read previous post:
Kateel-0911201601
ವಿಶ್ವ ತುಳು 2016 ತಿರುಗಾಟದ ತೇರು

ಕಿನ್ನಿಗೋಳಿ: ಆದುನಿಕ ಜೀವನದಲ್ಲಿ ತುಳುನಾಡಿನ ಸಂಸ್ಕಾರ, ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ತುಳುವರು ಅಗತ್ಯವಾಗಿ ಮಾಡಬೇಕಾಗಿದೆ ಎಂದು ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ...

Close