ವಿಶ್ವ ತುಳು 2016 ತಿರುಗಾಟದ ತೇರು

ಕಿನ್ನಿಗೋಳಿ: ಆದುನಿಕ ಜೀವನದಲ್ಲಿ ತುಳುನಾಡಿನ ಸಂಸ್ಕಾರ, ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ತುಳುವರು ಅಗತ್ಯವಾಗಿ ಮಾಡಬೇಕಾಗಿದೆ ಎಂದು ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಹೇಳಿದರು.
ಡಿಸೆಂಬರ್ 9 ರಿಂದ 13 ರವರೆಗೆ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ನಡೆಯುವ ವಿಶ್ವ ತುಳುವೆರೆ ಆಯನೋ-2016 ಇದರ ಪೂರ್ವಬಾವಿಯಾಗಿ ಮಂಗಳವಾರ ತುಳುನಾಡ ತಿರುಗಾಟದ ತೇರು ಕಟೀಲಿಗೆ ಆಗಮಿಸಿದ ಸಂಧರ್ಭ ತೇರನ್ನು ಸ್ವಾಗತಿಸಿ ಮಾತನಾಡಿದರು.
ಈ ಸಂಧರ್ಭ ಕಟೀಲು ದೇವಳ ಅನುವಂಶಿಕ ಮೊಕ್ತೇಸರ ಡಾ. ರವೀಂದ್ರನಾಥ ಪೂಂಜ, ಕಟೀಲು ದೇವಳ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಮುಲ್ಕಿ-ಮೂಡಬಿದ್ರೆ ಬಿ.ಜೆ.ಪಿ ಮಂಡಲ ಅಧ್ಯಕ್ಷ ಈಶ್ವರ ಕಟೀಲ್, ದ.ಕ. ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಕಟೀಲು ಗ್ರಾ. ಪಂ ಅಧ್ಯಕ್ಷೆ ಗೀತಾ ಪೂಜಾರ್ತಿ, ಯುಗಪುರುಷದ ಭುವನಾಭಿರಾಮ ಉಡುಪ, ತುಳು ಆಯನೋ ಮಂಗಳೂರು ತಾಲೂಕು ಅಧ್ಯಕ್ಷ ಎ.ಸಿ ಭಂಡಾರಿ, ಅಖಿಲ ಭಾರತ ತುಳು ಒಕ್ಕೂಟ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ತಾರನಾಥ ಕೊಟ್ಟಾರಿ, ಪ್ರಧಾನ ಸಂಚಾಲಕ ರಾಜಗೋಪಾಲ್ ರೈ, ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಟಿ.ಎಮ್ ಕುಲಾಲ್, ಉದ್ಯಮಿ ದೊಡ್ಡಯ್ಯ ಮೂಲ್ಯ ಕೆರಮ, ಆದಿತ್ಯ ಶೆಟ್ಟಿ ಎಕ್ಕಾರು, ತಿಮ್ಮಪ್ಪ ಕೋಟ್ಯಾನ್, ವಿಜಯಲಕ್ಷ್ಮೀ ಶೆಟ್ಟಿ, ಜಯಪಾಲ್ ಶಟ್ಟಿ, ಅರುಣ್ ಕುಮಾರ್ ಕಟೀಲ್, ಜಯಂತಿ ಮತ್ತಿತರರು ಉಪಸ್ಥಿತರಿದ್ದರು.

Kateel-0911201601

Comments

comments

Comments are closed.

Read previous post:
Kinnigoli0811201601
ಕಲಾವಿದ ಪ್ರಚಾರ-ಹಣದಾಸೆಗೆ ಬಲಿಯಾಗಬಾರದು

ಮೂಲ್ಕಿ: ಕಲಾವಿದ ಪ್ರಸಿದ್ಧನಾದ ತಕ್ಷಣೆ ಆತ ಪ್ರಚಾರ ಮತ್ತು ಹಣದ ಆಸೆಗೆ ಬಲಿಯಾದಲ್ಲಿ ಸಮಾಜದಲ್ಲಿ ವಿರೋಧಿಗಳು ಹುಟ್ಟಿಕೊಳ್ಳುತ್ತಾರೆ. ಕಲೆಗೆ ಜಾತಿ-ಧರ್ಮ-ಮತ ಭೇಧಗಳನ್ನು ಎಂದಿಗೂ ಅಳವಡಿಸಿಕೊಳ್ಳಬೇಡಿ, ಎಲ್ಲಾ ಸಮುದಾಯದ ಪ್ರೀತಿಯ...

Close