ಕಿನ್ನಿಗೋಳಿ : ಕೃಷಿ ವಿಚಾರ ಸಂಕಿರಣ 2016

ಕಿನ್ನಿಗೋಳಿ: ಇಂದಿನ ಯಾಂತ್ರಿಕ ಯುಗದಲ್ಲಿ ಕೃಷಿ ಕೂಲಿ ಕಾರ್ಮಿಕರ ಕೊರತೆಯನ್ನು ನೀಗಿಸಲು ಕೃಷಿ ಯಾಂತ್ರಿಕರಣ ಬಳಕೆ ಅನಿರ್ವಾಯವಾಗಿದೆ. ಇದರಿಂದ ಕೃಷಿ ಬದುಕಿಗೆ ಪುರ್ನಜೀವ ಬಂದಂತಾಗಿದೆ. ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಮಂಗಳೂರು ಮತ್ತು ಕಿನ್ನಿಗೋಳಿ ವಲಯ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಆಶ್ರಯದಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾ ಭವನದಲ್ಲಿ ಗುರುವಾರ ನಡೆದ ವಲಯ ಮಟ್ಟದ ಆಧುನಿಕ ಪದ್ಧತಿಯಲ್ಲಿ ಭತ್ತ ಕೃಷಿ, ತೋಟಗಾರಿಕಾ ಬೆಳೆಗಳ ನಿರ್ವಹಣೆ ಮತ್ತು ಕೃಷಿ ಯಾಂತ್ರೀಕರಣ ಬಳಕೆ ವಿಧಾನ ಕೃಷಿ ವಿಚಾರ ಸಂಕಿರಣ 2016 ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಶ್ರೀ ಕ್ಷೇ.ಧ.ಗ್ರಾ. ಯೋ(ರಿ) ಯೋಜನಾಧಿಕಾರಿ ಉಮರಬ್ಬ, ಮಂಗಳೂರು ತೋಟಗಾರಿಕಾ ವಿಭಾಗದ ಪಾಟೀಲ್ ರವೀಂದ್ರ ಸಂಗನಗೌಡ, ಮೂಲ್ಕಿ ರೈತ ಸಂಪರ್ಕ ಕೇಂದ್ರದ ಕೃಷಿ ಆಧಿಕಾರಿ ಗಂಗಾದೇವಿ ಪಾಟೀಲ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.
ಮಾದರಿ ಕೃಷಿಕ ಪ್ರವೀಣ್ ತೋಡಾರು ತಮ್ಮ ಕೃಷಿ ಬದುಕಿನ ಅನುಭವಗಳನ್ನು ಹೇಳಿದರು.
ಕೃಷಿ ಅಧಿಕಾರಿ ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಿನ್ನಿಗೋಳಿ ವಲಯ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟಗಳ ವಲಯಾಧ್ಯಕ್ಷೆ ವಿದ್ಯಾಶ್ರೀ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಕ್ಷೇ.ಧ.ಗ್ರಾ. ಯೋ.(ರಿ). ಮೇಲ್ವಿಚಾರಕ ಯಶೋಧರ ಸ್ವಾಗತಿಸಿದರು. ಸುರೇಖ ವಂದಿಸಿದರು. ಕೃಷಿ ಮೇಲ್ವಿಚಾರಕ ದಿನೇಶ್ ಮತ್ತು ಸೇವಾ ಪ್ರತಿನಿಧಿ ಶೈಲಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-1011201601 Kinnigoli-1011201602

Comments

comments

Comments are closed.

Read previous post:
Mulki-0511201605
ಮುಖ್ಯ ಶಿಕ್ಷಕ ನಿಯುಕ್ತಿ

ಮೂಲ್ಕಿ : ಮೂಲ್ಕಿಸುಮಾರು 700ಕ್ಕು ಮಿಕ್ಕಿ ವಿದ್ಯಾರ್ಥಿಗಳಿರುವ ಮೂಲ್ಕಿ ಕೆ ಎಸ್ ರಾವ್ ನಗರದ ದ.ಕ.ಜಿಲ್ಲಾ ಪಂಚಾಯತ್ ಸರ್ಕಾರಿ ಫ್ರೌಢ ಶಾಲೆಯಲ್ಲಿ ಮುಖ್ಯಶಿಕ್ಷಕರು ನಿವೃತ್ತಿಯಾದ ಬಳಿಕ ಕಳೆದ...

Close