ಮುಖ್ಯ ಶಿಕ್ಷಕ ನಿಯುಕ್ತಿ

ಮೂಲ್ಕಿ : ಮೂಲ್ಕಿಸುಮಾರು 700ಕ್ಕು ಮಿಕ್ಕಿ ವಿದ್ಯಾರ್ಥಿಗಳಿರುವ ಮೂಲ್ಕಿ ಕೆ ಎಸ್ ರಾವ್ ನಗರದ ದ.ಕ.ಜಿಲ್ಲಾ ಪಂಚಾಯತ್ ಸರ್ಕಾರಿ ಫ್ರೌಢ ಶಾಲೆಯಲ್ಲಿ ಮುಖ್ಯಶಿಕ್ಷಕರು ನಿವೃತ್ತಿಯಾದ ಬಳಿಕ ಕಳೆದ 5 ವರ್ಷಗಳಿಂದ ನೂತನ ಮುಖ್ಯ ಶಿಕ್ಷಕರ ನೇಮಕವಾಗದೇ ಹುದ್ದೆ ಖಾಲಿಯಿತ್ತು.ಇದೀಗ ಫ್ರೌಢಶಾಲೆಗೆ 2 ಅಂತಸ್ಥನ ನೂತನ ಕಟ್ಟಡ ವಾಗಿದ್ದು ಫ್ರೌಢಶಾಲೆಯು ನೂತನ ಕಟ್ಟಡದಲ್ಲಿ ಕಾರ್ಯ ಚರಿಸುತ್ತಿದೆ.ಇದೀಗ ಶಾಸಕ ಕೆ ಅಭಯಚಂದ್ರ ಜೈನ್ ರವರ ಮುತುವರ್ಜಿ ಮೇರೆಗೆ ಕೆಮ್ರಾಲ್ ಸರ್ಕಾರಿ ಫ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಸಂಧ್ಯಾ ನರಸಿಂಹ ಹೆಗಡೆಯವರು ಮೂಲ್ಕಿಯ ಕೆ ಎಸ್ ರಾವ್ ನಗರದ ಸರ್ಕಾರಿ ಫ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ನಿಯುಕ್ತಿ ಗೊಂಡಿದ್ದಾರೆ. ಶಾಲೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ನೂತನ ಮುಖ್ಯ ಶಿಕ್ಷಕಿ ಶ್ರೀಮತಿ ಸಂಧ್ಯಾ ಎನ್ ಹೆಗಡೆಯವರು ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮೂಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಬಿ ಎಂ ಆಸೀಫ್, ಶಾಲಾಭಿವೃದ್ದಿ ಸಮಿತಿಯ ಕಾರ್ಯದರ್ಶಿ ಕೆ ಎಚ್ ಶರೀಫ್, ಉಪಾಧ್ಯಕ್ಷ ಅಬ್ದುಲ್ ಖಾದರ್ ಬಾವಾ, ಮೂಲ್ಕಿ ಶಾಂಭವಿ ಜೇಸಿಐನ ಅಧ್ಯಕ್ಷ ಮಲ್ಲಿಕಾರ್ಜುನ ಆರ್ ಕೆ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮತ್ತಿತರಿದ್ದರು.

Mulki-0511201605

Comments

comments

Comments are closed.

Read previous post:
ನ. 19 ಕಟೀಲಿನಲ್ಲಿ ಶ್ರೀಧರಾಯಣ

ಕಿನ್ನಿಗೋಳಿ: ಕಟೀಲು ಮೇಳದ ಹಿರಿಯ ಭಾಗವತ ಕುಬಣೂರು ಶ್ರೀಧರರಾಯ ಅವರಿಗೆ ಅಭಿನಂಧನಾ ಕಾರ್ಯಕ್ರಮ ಶ್ರೀಧರಾಯಣ ನ. 19 ಶನಿವಾರದಂದು ಶ್ರೀ ಕ್ಷೇತ್ರ ಕಟೀಲಿನಲ್ಲಿ ನಡೆಯಲಿದ್ದು ಆ ಪ್ರಯುಕ್ತ ಸಮಾಲೋಚನಾ ಸಭೆ...

Close