ಕಟೀಲು ಭಜನಾ ಸಪ್ತಾಹ ಉದ್ಘಾಟನೆ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ದೀಪಾವಳಿಯಂದು ಆರಂಭಗೊಂಡು 24ದಿನಗಳ ಕಾಲ ನಡೆಯಲಿರುವ ಭಜನೆಯ ಅಂಗವಾಗಿ ಶುಕ್ರವಾರ – ತಾ. 17 ರವರೆಗೆ ನಡೆಯಲಿರುವ ಭಜನಾ ಸಪ್ತಾಹವನ್ನು ಉಡುಪಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಿದರು.
ಈ ಸಂದರ್ಭ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ದೇವಳದ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಡಾ. ರವೀಂದ್ರನಾಥ ಪೂಂಜ, ಅರ್ಚಕರಾದ ಆಸ್ರಣ್ಣ ಬಂಧುಗಳು ದೇವಳದ ತಂತ್ರಿಗಳಾದ ವೇದವ್ಯಾಸ ತಂತ್ರಿ ಮತ್ತಿತರರು ಉಪಸ್ಥಿತರಿದ್ದರು.
ಶುಕ್ರವಾರ 23 ಭಜನಾ ತಂಡಗಳು ಭಾಗವಹಿಸಿದೆ. ತಾ.17ರವರೆಗೆ ಭಜನಾ ಸಪ್ತಾಹ ನಡೆಯಲಿದ್ದು, ದಿನಂಪ್ರತಿ ಹತ್ತು ಭಜನಾ ತಂಡಗಳು ಭಾಗವಹಿಸಲಿವೆ. ದಿನಂಪ್ರತಿ ಸಂಜೆ 5.30ರಿಂದ ವಿವಿಧ ವಿದ್ವಾಂಸರಿಂದ ಭಜನೆಯ ಬಗ್ಗೆ ವಿಶೇಷ ಉಪನ್ಯಾಸವಿದೆ. ತಾ. 22ರಂದು ಭಜನಾ ಮಂಗಲೋತ್ಸವ ನಡೆಯಲಿದೆ.

Kateel-1111201605

Comments

comments

Comments are closed.

Read previous post:
Mulki-1011201606
ರೋಟರಿ ರಾಷ್ಟ್ರ ನಿರ್ಮಾತೃ ಪ್ರಶಸ್ತಿ

ಮೂಲ್ಕಿ: ಗ್ರಾಮೀಣ ಪ್ರದೇಶದ ಜನರ ಉನ್ನತಿಯೊಂದಿಗೆ ಕೌಟುಂಬಿಕ ಸೌಹಾರ್ದ ಕಾರ್ಯಕ್ರಮಗಳ ಮೂಲಕ ಸಾಮರಸ್ಯ ಸಹಹಬಾಳ್ವೆಯನ್ನು ಅಭಿವೃದ್ಧಿಪಡಿಸಲು ರೋಟರಿ ಸದಸ್ಯರು ಶ್ರಮ ವಹಿಸಬೇಕು ಎಂದು ರೋಟರಿ ಜಿಲ್ಲೆ 3181...

Close