ಕಿನ್ನಿಗೋಳಿ : ಗೊಂದಲದಲ್ಲಿ ಸಾರ್ವಜನಿಕರು.

100

ಕಿನ್ನಿಗೋಳಿ: ಸರಕಾರವು 500 ಮತ್ತು 1000 ರೂ ಮೌಲ್ಯದ ನೋಟ್‌ಗಳನ್ನು ದಿಡೀರ್ ನಿಷೇಧಿಸಿದ ಕಾರಣ ಶುಕ್ರವಾರವೂ ಕಿನ್ನಿಗೋಳಿಯಲ್ಲಿ ಜನರ ದಿನ ನಿತ್ಯದ ವ್ಯವಹಾರಗಳಿಗೆ ಅಡಚಣೆಯಾಗಿತ್ತು. ಹೆಚ್ಚಿನ ಎಲ್ಲಾ ಬ್ಯಾಂಕ್‌ಗಳು ತೆರೆಯುವ ಮೊದಲೇ ಜನರು ಗುಂಪಾಗಿ ನಿಂತಿರುವುದು ಕಂಡು ಬರುತ್ತಿತ್ತು. ಮೂರು ಗಂಟೆಯವರೆಗೂ ಗ್ರಾಹಕರಿದ್ದರು.
ಕಿನ್ನಿಗೋಳಿ ಬಾರದ ಹೊಸ ನೋಟುಗಳು : ದಕ್ಷಿಣ ಕನ್ನಡದಲ್ಲಿಯೇ ಅತೀ ಹೆಚ್ಚು ಬ್ಯಾಂಕುಗಳು ಹಾಗೂ ಅತ್ಯದಿಕ ಅನಿವಾಸಿ ಖಾತೆಗಳು ಮತ್ತು ವಹಿವಾಟು ಹೊಂದಿರುವ ಕಿನ್ನಿಗೋಳಿ ಪೇಟೆಯಲ್ಲಿ ಸುಮಾರು 18 ರಾಷ್ಟ್ರೀಕೃತ ಬ್ಯಾಂಕ್‌ಗಳಿದ್ದು 6 ಸಹಕಾರಿ ಸ್ವಾಮ್ಯದ ಬ್ಯಾಂಕ್‌ಗಳಿದ್ದು ಹೊಸ 500. 1000 ಮುಖ ಬೆಲೆಯ ನೋಟುಗಳು ಬಂದಿಲ್ಲದೆ ಆದರೇ ಇದ್ದ 100, ಹಾಗೂ 50, 20, 10 ನೋಟುಗಳನ್ನು ಗ್ರಾಹಕರಿಗೆ ವಿತರಿಸಲಾಗುತ್ತಿದೆ.
ಶುಕ್ರವಾರವೂ ಕಿನ್ನಿಗೋಳಿ ಪರಿಸರದ ಹೆಚ್ಚಿನ ಎಟಿಎಂಗಳಲ್ಲಿ ಹಣ ಜಮಾವಣೆಯಾಗದೆ ಜನರು ಎಟಿಎಂನತ್ತ ತಡಕಾಡುವುದು ಸಾಮಾನ್ಯವಾಗಿದೆ. ಬ್ಯಾಂಕ್‌ಗಳು 2000 ಮುಖ ಬೆಲೆಯ ನೋಟುಗಳನ್ನು ವಿತರಿಸುತ್ತಿವೆ. 100, 50, 20, 10 ರ ನೋಟುಗಳ ಅಭಾವವಿದೆ.
ಸಂಜೆಯ ಹೊತ್ತಿಗೆ ಕೆಲವು ಬ್ಯಾಂಕುಗಳು ಎಟಿಎಂಗಳಿಗೆ ಹಣ ಬಂದಿದ್ದರಿಂದ ಪರಿಸರದಲ್ಲಿ ಜನರ ಒಡಾಟ ಹೆಚ್ಚಾಗಿತ್ತು.
ಅಂಚೆ ಕಛೇರಿಗಳಲ್ಲಿ ಸಾಕಷ್ಟು ಹಣ ಬಂದಿಲ್ಲವಾದ್ದರಿಂದ ಹಲವು ಗ್ರಾಹಕರು ನಿರಾಶೆಯಿಂದ ಹಿಂತಿರುಗುತ್ತಿದ್ದರು. ಗ್ರಾಮೀಣ ಪರಿಸರದ ಅಂಚೆ ಇಲಾಖೆಗಳಲ್ಲಿ ಕಾಗದ ಪತ್ರಗಳ ವಿಲೇವಾರಿಗೆ ಸೀಮಿತವಾದ ವಾತವರಣವಿತ್ತು.
ಹೆಚ್ಚಿನ ಮುಖ ಬೆಲೆಯ ನೋಟುಗಳನ್ನು ಪಡೆದು ಗ್ರಾಹಕರಿಗೆ ಹೇಗೆ ಚಿಲ್ಲರೆ ನೀಡುವುದು? ಗ್ರಾಹಕರಿಂದ ಹೆಚ್ಚಿನ ನಿಂದನೆ ಕೇಳಬೇಕಾಗುತ್ತದೆ 100 ರೂ ಕೆಳಗಿನ ನೋಟುಗಳು ಮುಗಿಯುತ್ತಿದೆ ಏನು ಮಾಡುವುದು? ಅಂಗಡಿ ಮುಂಗಟ್ಟುಗಳನ್ನು ಬೇಗನೆ ಮುಚ್ಚುವ ಪರಿಸ್ಥಿತಿ ಬಂದಿದೆ. ಸರಂಜಾಮು ದಾಸ್ತಾನುವಿದ್ದರೂ ನೋಟಿನ ಸಮಸ್ಯೆಯಿಂದಾಗಿ ವ್ಯಾಪಾರದಲ್ಲಿ ಇಳಿತ ಕಂಡಿದೆ ಎಂದು ವ್ಯಾಪರಸ್ಥರು ಹೇಳುತ್ತಿದ್ದಾರೆ.

ಸರಕಾರ ದೇವಳ ಗುಡಿಗಳ ಹುಂಡಿಗಳಲ್ಲಿರುವ ನೋಟು ಚಿಲ್ಲರೆಗಳನ್ನು ತೆಗೆದು ಬ್ಯಾಂಕುಗಳ ಖಾತೆಗೆ ಜಮಾ ಮಾಡುವ ಆದೇಶ ಜಿಲ್ಲಾಡಳಿತ ನೀಡಿದಾಗ ಕಿಂಚಿತ್ತಾದರೂ ಜನರಿಗೆ ಉಪಯೋಗವಾಗಬಹುದು.
ಜಯಂತ ಸಾಲ್ಯಾನ್ ಮೂರುಕಾವೇರಿ

Comments

comments

Comments are closed.

Read previous post:
Kateel-1111201605
ಕಟೀಲು ಭಜನಾ ಸಪ್ತಾಹ ಉದ್ಘಾಟನೆ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ದೀಪಾವಳಿಯಂದು ಆರಂಭಗೊಂಡು 24ದಿನಗಳ ಕಾಲ ನಡೆಯಲಿರುವ ಭಜನೆಯ ಅಂಗವಾಗಿ ಶುಕ್ರವಾರ - ತಾ. 17 ರವರೆಗೆ ನಡೆಯಲಿರುವ ಭಜನಾ ಸಪ್ತಾಹವನ್ನು...

Close