ರೋಟರಿ ರಾಷ್ಟ್ರ ನಿರ್ಮಾತೃ ಪ್ರಶಸ್ತಿ

ಮೂಲ್ಕಿ: ಗ್ರಾಮೀಣ ಪ್ರದೇಶದ ಜನರ ಉನ್ನತಿಯೊಂದಿಗೆ ಕೌಟುಂಬಿಕ ಸೌಹಾರ್ದ ಕಾರ್ಯಕ್ರಮಗಳ ಮೂಲಕ ಸಾಮರಸ್ಯ ಸಹಹಬಾಳ್ವೆಯನ್ನು ಅಭಿವೃದ್ಧಿಪಡಿಸಲು ರೋಟರಿ ಸದಸ್ಯರು ಶ್ರಮ ವಹಿಸಬೇಕು ಎಂದು ರೋಟರಿ ಜಿಲ್ಲೆ 3181 ಪ್ರಥಮ ಗವರ್ನರ್ ಡಾ.ಆರ್.ಎಸ್. ನಾಗಾರ್ಜುನ ಹೇಳಿದರು. ಮೂಲ್ಕಿ ರೋಟರಿ ಕ್ಲಬ್‌ಗೆ ಅಧೀಕೃತ ಭೇಟಿಯ ಸಂದರ್ಭ ಕಾರ್ನಾಡು ಸೈಂಟ್ ಜೋಸೆಫ್ ಹಾಲ್‌ನಲ್ಲಿ ನಡೆದ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಭಿವೃದ್ಧಿ ಫಥದಲ್ಲಿರುವ ನಾವು ಯುವ ಜನತೆಗೆ ಉತ್ತಮ ಸಂಸ್ಕಾರ ತಿಳಿಸುವುದು ಅಗತ್ಯ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಪೋಷಕರಲ್ಲಿ ಉಟಾಗುವ ಒತ್ತಡ ಪರಿಹಾರಕ್ಕೆ ಸೂಕ್ತ ಕೌಂಸಿಲಿಂಗ್ ವ್ಯವಸ್ಥೆಗಳನ್ನು ರೋಟರಿ ಸಂಸ್ಥೆಗಳು ಪ್ರಾಯೋಜಿಸುವ ಮೂಲಕ ಜನರಿಗೆ ಶಾಂತಿ ನೆಮ್ಮದಿ ನೀಡುವ ಕಾರ್ಯಗಳನ್ನು ರೂಪಿಸಬೇಕು ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಗುರಿ ಸಾಧನೆ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿಗಳನ್ನು ನೀಡಿ ಸಮಗ್ರ ಯುವ ನಾಯಕತ್ವ ಗುಣ ಮೌಲ್ಯವಂತ ಮಾನವ ಸಂಪನ್ಮೂಲ ರೂಪಿಸಲು ಸಹಕಾರಿಯಾಗಬೇಕು ಎಂದರು.
ಈ ಸಂದರ್ಭ ರೋಟರಿ ರಾಷ್ಟ್ರ ನಿರ್ಮಾತೃ ಪ್ರಶಸ್ತಿಯನ್ನು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಹಾಗೂ ಜನಮೆಚ್ಚಿದ ಶಿಕ್ಷಕಿ ಬಿರುದು ಪಡೆದ ರತಿ ಪಡುಪಣಂಬೂರು ರವರಿಗೆ ನೀಡಲಾಯಿತು.
ಉಚಿತ ವೈದ್ಯಕೀಯ ಸೇವೆ ನೀಡುವ ಮೂಲಕ ಸಮಾಜ ಸೇವೆ ನಡೆಸುತ್ತಾ ಬರುತ್ತಿರುವ ಮೂಲ್ಕಿಯ ಡಾ.ಸುರೇಶ್ ಅರಾಹ್ನ ರವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗಳಿಸಿರುವ ಬಗ್ಗೆ ಅವರನ್ನು ಅಭಿನಂದಿಸಲಾಯಿತು.
ರೋಟರಿಯ ದತ್ತಿನಿಧಿಗೆ ಮೂಲ್ಕಿ ರೋಟರಿಯ ಸದಸ್ಯರು ನೀಡಿದ ಮೋತ್ತವನ್ನು ಗವರ್ನರ್ ರವರಿಗೆ ಹಸ್ತಾಂತರಿಸಲಾಯಿತು. ಮೂಲ್ಕಿ ಎಂ.ಸಿ.ಟಿ ಶಾಲೆಯವರು ರೋಟರಿ ದತ್ತಿ ನಿಧಿಗಾಗಿ ನೀಡಿದ ಹಣವನ್ನು ಶಾಲೆಯ ಮುಖ್ಯೋಪಾದ್ಯಾಯ ಹರೀಶ್ ಗವರ್ನರ್‌ರವರಿಗೆ ನೀಡಿದರು.
ಈ ಸಂದರ್ಭ ರೋಟರಿ ಮೂಲ್ಕಿಯ ಗ್ರಹ ಪತ್ರಿಕೆ ಮೂಲಿಕಾ ವನ್ನು ರೋಟರಿ ಸಹಾಯಕ ಗವರ್ನರ್ ಜಿನರಾಜ್ ಸಿ ಸಾಲ್ಯಾನ್ ಬಿಡುಗಡೆಗೊಳಿಸಿ ಶುಭಾಶಂಶನೆಗೈದರು.
ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ರೋಟರಿ ಅಧ್ಯಕ್ಷ ಜೋನ್ ವಿಲ್ಸನ್ ಡಿಸೋಜ ವಹಿಸಿದ್ದರು.
ಈ ಸಂದರ್ಭ ಮೂಲ್ಕಿ ಅಮಲೋದ್ಭವ ಮಾತಾ ಚರ್ಚಿನ ಧರ್ಮಗುರುಗಳಾದ ಫಾ. ಪ್ರಾನ್ಸಿಸ್ ಝೇವಿಯರ್ ಗೋಮ್ಸ್, ಕೆಥೋಲಿಕ್ ಸಭಾ ಮೂಲ್ಕಿ ಘಟಕದ ಉಪಾಧ್ಯಕ್ಷ ರೊಲ್ಫಿ ಡಿಕೋಸ್ಟಾ, ರೋಟರಿ ವಲಯ ಸಭಾಪತಿ ಪ್ರೊ.ಜಯರಾಮ ಪೂಂಜಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಟಿ.ಗೋಪಾಲ ಭಂಡಾರಿ ವರದಿ ಮಂಡಿಸಿದರು. ಅಶೋಕ್ ಕುಮಾರ್ ಶೆಟ್ಟಿ ನಿರೂಪಿಸಿದರು, ಜೊತೆ ಕಾರ್ಯದರ್ಶಿ ರೇಮಂಡ್ ರೆಬೆಲ್ಲೋ ವಂದಿಸಿದರು.

Mulki-1011201606

Comments

comments

Comments are closed.

Read previous post:
Kinnigoli-1011201602
ಕಿನ್ನಿಗೋಳಿ : ಕೃಷಿ ವಿಚಾರ ಸಂಕಿರಣ 2016

ಕಿನ್ನಿಗೋಳಿ: ಇಂದಿನ ಯಾಂತ್ರಿಕ ಯುಗದಲ್ಲಿ ಕೃಷಿ ಕೂಲಿ ಕಾರ್ಮಿಕರ ಕೊರತೆಯನ್ನು ನೀಗಿಸಲು ಕೃಷಿ ಯಾಂತ್ರಿಕರಣ ಬಳಕೆ ಅನಿರ್ವಾಯವಾಗಿದೆ. ಇದರಿಂದ ಕೃಷಿ ಬದುಕಿಗೆ ಪುರ್ನಜೀವ ಬಂದಂತಾಗಿದೆ. ಎಂದು ಕಿನ್ನಿಗೋಳಿ ಗ್ರಾಮ...

Close