ಹಳೆ ವಿದ್ಯಾರ್ಥಿ ಸಂಘ ಸಭೆ

ಮೂಲ್ಕಿ: ವಿಜಯಾ ಕಾಲೇಜಿನ ಶ್ರೇಯೋಭಿವೃದ್ಧಿಗಾಗಿ ಹಳೆ ವಿದ್ಯಾರ್ಥಿ ಸಂಘವನ್ನು ಬಲಿಷ್ಠ ಪಡಿಸುವ ಮೂಲಕ ಹೊಸ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದು ಮೂಲ್ಕಿ ವಿಜಯಾ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಹೇಳಿದರು.
ಮೂಲ್ಕಿ ಆಧಿಧನ್‌ಸಭಾಂಗಣದಲ್ಲಿ ನಡೆದ ಹಳೆ ವಿದ್ಯಾರ್ಥಿ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಮುಂದಿನ ಡಿಸೆಂಬರ್‌ನಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಕಿಜ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಮತ್ತು ಈ ಬಾರಿಯ ವಾರ್ಷಿಕೋತ್ಸವದ ಸಂದರ್ಭ ವಿದ್ಯಾರ್ಥಿಗಳಿಗಾಗಿ ವಿಶ್ವ ವಿದ್ಯಾನಿಲಯ ಮಟ್ಟದ ಕ್ರೀಡಾ ಕೂಟ ಹಮ್ಮಿಕೊಳ್ಳಲಾಗುವುದು ಸಮಾರೋಪ ಸಂದರ್ಭ ಸಿನಿಮಾ ತಾರೆಯರು ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ತಾರೆಗಳನ್ನು ಕರೆಸಲಾಗುವುದು ಎಂದರು.
ಈ ಸಂದರ್ಭ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಸುಮಲತಾ ಎನ್.ಸುವರ್ಣ ಮಾತನಾಡಿ, ಹಳೆ ವಿದ್ಯಾರ್ಥಿ ಸಂಘವನ್ನು ಸೇರುವ ವಿದ್ಯಾರ್ಥಿಗಳಿಗೆ ವೀಶೇಷ ವ್ಯವಸ್ಥೆಯನ್ನು ರೂಪಿಸುವುದು ಅಗತ್ಯ ಯುವ ಪಿಳಿಗೆಗೆ ಸೂಕ್ತ ಜವಾಬ್ದಾರಿ ನೀಡಿದರೆ ಹಳೆ ವಿದ್ಯಾರ್ಥಿ ಸಂಘ ಶೀಘ್ರ ಹೆಚ್ಚಿನ ಬೆಳವಣಿಗೆ ಕಾಣುವುದರೊಂದಿಗೆ ಕಾಲೇಜಿನ ಅಭಿವೃದ್ಧಿಗಾಗಿ ದುಡಿಯಲು ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭ ಪ್ರೊ.ಯು.ನಾಗೇಶ್ ಶೆಣೈ,ಪ್ರೊ.ಸ್ಯಾಮ್ ಮಾಬೆನ್,ಶಮಿನಾ ಆಳ್ವಾ,ಡಾ.ರೋಶನ್ ಕುಮಾರ್ ಶೆಟ್ಟಿ,ವೈ ಸುಧೀರ್ ಕುಮಾರ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ವಿ ಸತೀಶ್ ಕಾಮತ್, ಮತ್ತಿತರರು ತಮ್ಮ ಅನಿಸಿಕೆ ನೀಡಿದರು. ಈ ಸಂದರ್ಭ ನೂತನ ಯೋಜನೆಗಾಗಿ ಕಾರ್ಯಕ್ರಮ ಸಂಯೋಜಕರನ್ನು ಆರಿಸಲಾಯಿತು. ವಿಜಯಾ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷೆ ಶಮಿನಾ ಆಳ್ವಾ, ಕಾಲೇಜು ಪ್ರಾಂಶುಪಾಲ ಡಾ. ನಾರಾಯಣ ಪೂಜಾರಿ,ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ ಇನ್ನಾ, ಸಹ ಕಾರ್ಯದರ್ಶಿ ಇಸ್ಮಾಯಿಲ್. ಕೋಶಾಧಿಕಾರಿ ಅಶೋಕ್ ಕುಮಾರ್ ಶೆಟ್ಟಿ ಅತಿಥಿಗಳಾಗಿದ್ದರು.
ಈ ಸಂದರ್ಭ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ವೈದ್ಯರಾದ ಡಾ.ಸುರೇಶ್ ಅರಾಹ್ನ, ವಿಜಯಾ ಕಾಲೇಜು ಕಚೇರಿ ಅಧೀಕ್ಷಕರಾದ ರಾಮಚಂದ್ರ ಉಡುಪ ಮತ್ತು ಸಿಬ್ಬಂದಿಗಳು ಹಾಗೂ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕ್ರಮ ಸಂಯೋಜಕರನ್ನು ಅಭಿನಂದಿಸಲಾಯಿತು.
ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿದರು, ಅಶೋಕ್ ಕುಮಾರ್ ಶೆಟ್ಟಿ ಪ್ರಸ್ತಾವಿಸಿದರು. ತಿವಿಕ್ರಮ್ ಪೈ ನಿರೂಪಿಸಿದರು, ಸುಮಲತಾ ಸುವರ್ಣ ವಂದಿಸಿದರು.

Mulki-1211201607

Comments

comments

Comments are closed.

Read previous post:
Kateel-1111201603
ಕಟೀಲು ತಪ್ತ ಮುದ್ರಾಧಾರಣೆ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಶುಕ್ರವಾರ ಬೆಳಿಗ್ಗೆ 11ಗಂಟೆಗೆ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಹಿಳೆಯರೂ ಸೇರಿದಂತೆ ಜಾತಿಮತ ಬೇಧವಿಲ್ಲದೆ ಎಲ್ಲ ಆಸ್ತಿಕ...

Close