ಕಾಂಗ್ರೇಸ್ ನಡಿಗೆ ಗ್ರಾಮ ಸುರಾಜ್ಯದ ಕಡೆಗೆ

ಕಿನ್ನಿಗೋಳಿ: ಇಂದಿರಾಗಾಂಧಿಯವರ ಭೂ ಮಸೂದೆಯಿಂದ ಕರಾವಳಿಯಲ್ಲಿ ಅತಿಹೆಚ್ಚು ಪ್ರಯೋಜನ ಪಡೆದುಕೊಂಡಿದ್ದಾರೆ. ದೇಶದಲ್ಲಿ ಅಖಂಡತೆ, ಭಾವೈಕ್ಯತೆ, ಧರ್ಮ ಸಾಮರಸ್ಯ, ಜಾತ್ಯಾತೀತತೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ರಾಜ್ಯ ಸರ್ಕಾರದ ಸಾಧನೆಯನ್ನು ಗ್ರಾಮದ ಪ್ರತೀ ಮನೆಯವರಲ್ಲಿ ತಿಳಿಹೇಳುವ ಕೆಲಸ ಕಾರ್ಯಕರ್ತರು ಮಾಡಬೇಕು ಕಾಂಗ್ರೇಸ್ ಪಕ್ಷ ನಮ್ಮ ದೇಹದಲ್ಲಿ ರಕ್ತಗತವಾಗಿರುವ ಪಕ್ಷ ಎಂಬ ಭಾವನೆ ನಮ್ಮಲ್ಲಿರಬೇಕು. ಎಂದು ದ.ಕ. ಉಸ್ತುವರಿ ಸಚಿವ ಮತ್ತು ಅರಣ್ಯ ಸಚಿವ ರಮಾನಾಥ ರೈ ಹೇಳಿದರು.
ಸೋಮವಾರ ಕಿನ್ನಿಗೋಳಿ ರಾಜಾಂಗಣದಲ್ಲಿ ನಡೆದ ಜವಾಹರಲಾಲ್ ನೆಹರು ಜನ್ಮ ದಿನಾಚರಣೆ. ಹಾಗೂ ಮುಲ್ಕಿ ಮೂಡಬಿದ್ರೆ ವಿಧಾನ ಸಭಾ ಕಾರ್ಯವ್ಯಪ್ತಿಯ ಕಾಂಗ್ರೇಸ್ ನಡಿಗೆ ಗ್ರಾಮ ಸುರಾಜ್ಯದ ಕಡೆಗೆ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರಕಾರದ ಎಲ್ಲಾ ಯೋಜನೆಗಳು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಯಥಾವತ್ತಾಗಿ ಜಾರಿಗೊಂಡಿವೆ. ದುರ್ಬಲ ಜಾತ್ಯಾತೀತ ಪಕ್ಷಗಳಿಗೆ ಅವಕಾಶ ಕೊಟರೆ ಮತೀಯ ಶಕ್ತಿಗಳ ಪಕ್ಷಗಳಿಗೆ ರಹದಾರಿ ಮಾಡಿದಂತೆ ಹಾಗಾಗಿ ಬಲಿಷ್ಠ ಜಾತ್ಯಾತೀತ ಪಕ್ಷ ಕಟ್ಟಬೇಕು. ದೇಶದ ಸಾಮರಸ್ಯವನ್ನು ಕಾಂಗ್ರೇಸ್ ಪಕ್ಷ ಉಳಿಸಿ ಬೆಳೆಸಿದೆ. ಬಿಜೆಪಿಯ ವಕ್ತಾರೆ ಮೀನಾಕ್ಷಿ ಲೇಖಿ 10 ವರ್ಷಗಳ ಹಿಂದೆ ನೋಟು ನಿಷೇಧ (ರದ್ದು) ಆತಂಕ ವ್ಯಕ್ತಪಡಿಸಿದ್ದ ಹೇಳಿಕೆಯನ್ನು ಇಂದು ನೆನಪಿಸಬೇಕಾಗಿದೆ. ಇದಕ್ಕೆ ಈಗ ಬಿಜೆಪಿಯವರು ಉತ್ತರ ಕೊಡಲಿದ್ದಾರೆ. ಜನ ಸಾಮಾನ್ಯರು ಕಾಂಗ್ರೆಸ್ ಪಕ್ಷದ ಓಟ್ ಬ್ಯಾಂಕ್ ಆದರೆ, ಬಲಿಷ್ಠರು ಬಿಜೆಪಿ ಪಕ್ಷದ ಓಟ್ ಬ್ಯಾಂಕ್ ಆಗಿದ್ದಾರೆ. ಅಲ್ಪಸಂಖ್ಯಾತರು ಮತೀಯವಾದಿಗಳಾದರೆ ಸಮುದಾಯಕ್ಕೆ ಅಪಾಯ, ಬಹುಸಂಖ್ಯಾತರು ಮತೀಯವಾದಿಗಳಾದರೆ ದೇಶಕ್ಕೆ ಅಪಾಯ ಎಂದರು.
ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೈಗೊಂಡ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಕಾರ್ಯಕರ್ತರು ಶ್ರಮವಹಿಸಬೇಕು, ಮುಂದಿನ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಬೇಕು ಎಂದರು.
ಸಭಾ ಕಾರ್ಯಕ್ರಮದ ನಂತರ ಕಾಂಗ್ರೇಸ್ ಪಕ್ಷದ ಆಡಳಿತ ಇತಿಹಾಸಗಳ ಮೆಲುಕು , ಕರ್ನಾಟಕ ಸರಕಾರದ ಧೀಮಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನುಡಿದಂತೆ ನಡೆದ ಸರಕಾರದ ಆಡಳಿತ ವೈಶಿಷ್ಟ್ಯ,ಕೇಂದ್ರದ ಬಿಜೆಪಿ ಸರಕಾರದ ವೈಫಲ್ಯದಿಂದಾಗಿ ಮೋಸ ಹೋದ ಜನತೆ, ದೇಶದಲ್ಲಿ ಕೋಮು ಸೌಹರ್ಧತೆ ಕಾಪಾಡುವಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಪಾತ್ರ, ಪಕ್ಷ ಸಂಘಟನೆ ಮತ್ತು ಗೆಲುವಿನತ್ತ ಕಾಂಗ್ರೇಸ್ ಗುರಿ, ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮಗಳು ನಡೆದವು
ಮುಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ದ.ಕ ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ದ.ಕ. ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ, ಬೆಳ್ತಂಗಡಿ ಜಿಲ್ಲಾ ಪಂಚಾಯಿತಿ ಸದಸ್ಯ ಸಾಹುಲ್ ಹಮೀದ್, ಮುಲ್ಕಿ ಮೂಡಬಿದ್ರಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಮಂಗಳೂರು ಮೂಡಾ ಸದಸ್ಯ ವಸಂತ್ ಬರ್ನಾಡ್, ಬಜಪೆ ವಲಯ ಕಾಂಗ್ರೇಸ್ ಅಧ್ಯಕ್ಷ ರಾಮಚಂದ್ರ ಶೆಟ್ಟಿ, ಮುಲ್ಕಿ ಮೂಡಬಿದ್ರೆ ಯುವ ಕಾಂಗ್ರೇಸ್ ಅಧ್ಯಕ್ಷ ಚಂದ್ರಹಾಸ ಸನಿಲ್, ಮುಲ್ಕಿ ಬ್ಲಾಕ್ ಯುವ ಕಾಂಗ್ರೇಸ್ ಅಧ್ಯಕ್ಷ ಹಕೀಂ ಮತ್ತಿತರರು ಉಪಸ್ಥಿತರಿದ್ದರು.
ಮುಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಂಜಯ ಮಟ್ಟು ಪ್ರಸ್ತಾವನೆಗೈದು ಸ್ವಾಗತಿಸಿದರು. ವಂದಿಸಿದರು. ಶರತ್ ಶೆಟ್ಟಿ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು.

ನ.19ಕ್ಕೆ ಹುದ್ದೆಯಿಂದ ತೆರವು : ರೈ
ನ.19ರಂದು ಮಂಗಳೂರಿನಲ್ಲಿ ನೆಹರು ಪ್ರತಿಮೆ ಲೋಕಾರ್ಪಣೆ ಮತ್ತು ಜಿಲ್ಲಾ ಕಾಂಗ್ರೆಸ್‌ಗೆ ಸ್ವಂತ ಕಟ್ಟಡವನ್ನು ಅರ್ಪಿಸಿ ಜಿಲ್ಲಾಧ್ಯಕ್ಷ ಸ್ಥಾನವನ್ನು ತೆರವು ಗೊಳಿಸುತ್ತೇನೆ ಎಂದು ರಮಾನಾಥ ರೈ ಸಭೆಯಲ್ಲಿ ಪ್ರಕಟಿಸಿದರು.

Kinnigoli-1411201604

Comments

comments

Comments are closed.

Read previous post:
Kinnigoli-1411201603
ಕಿನ್ನಿಗೋಳಿ ಧರ್ಮ ಜಾಗೃತಿ ಸಭೆ

ಕಿನ್ನಿಗೋಳಿ: ಇಂದು ಪ್ರತೀ ಹೆಜ್ಜೆಯಲ್ಲಿಯೂ ಭ್ರಷ್ಠಾಚಾರ ಹಾಸುಹೊಕ್ಕಾಗಿದ್ದು ಗ್ರಾಮೀಣ ಪ್ರದೇಶದ ಜನರನ್ನು ಕಷ್ಠದ ಕೂಪಕ್ಕೆ ತಳ್ಳುತ್ತಿದೆ. ಭಯೋತ್ಪಾದನೆ ಹಾಗೂ ಮತೀಯ ಜಾಲಗಳು ಹೆಚ್ಚಾಗಲು ಭ್ರಷ್ಠಾಚಾರವೇ ಮೂಲ ಕಾರಣವಾಗಿದೆ. ಕೆಲವು...

Close